ದೆಹಲಿಯಲ್ಲಿ ತಾಪಮಾನ ಇಳಿಕೆ – 2 ದಿನದಲ್ಲಿ 7 ಡಿಗ್ರಿ ಇಳಿಕೆ ಕಂಡ ತಾಪಮಾನ

Public TV
1 Min Read
Delhi Weather 1

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕಳೆದ 2 ದಿನಗಳಲ್ಲಿ ತಾಪಮಾನ 7 ಡಿಗ್ರಿ ಇಳಿಕೆಯಾಗಿದ್ದು, ಸಾಮಾನ್ಯ ತಾಪಮಾನಕ್ಕಿಂತ ಕಡಿಮೆಯಾಗಿದೆ ಎಂದು ಹವಾಮಾನ ಇಲಾಖೆ (IMD) ತಿಳಿಸಿದೆ.

ಎರಡು ದಿನಗಳ ಹಿಂದೆಯಷ್ಟೇ ದೆಹಲಿಯ (Delhi) ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಇತ್ತು. ಶುಕ್ರವಾರದ ವೇಳೆಗೆ ತಾಪಮಾನವು 32 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದ್ದು, ಕಳೆದ ಎರಡೂ ದಿನದಲ್ಲಿ ಈ ತಾಪಮಾನವನ್ನು ಮೀರಿಲ್ಲ ಎಂದು ವರದಿ ಮಾಡಿದೆ.ಇದನ್ನೂ ಓದಿ:ತುಂಬಾ ಬೇಗ ಬ್ಯಾಟಿಂಗ್‌ಗೆ ಬಂದ್ರಿ – ಆರ್‌ಸಿಬಿ ವಿರುದ್ಧ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಧೋನಿ ಕಾಲೆಳೆದ ಸೆಹ್ವಾಗ್

ಸಾಮಾನ್ಯವಾಗಿ ಒಂದು ಪ್ರದೇಶದ ಪೂರ್ವ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಗಾಳಿಯ ಒತ್ತಡದಿಂದಾಗಿ ತಾಪಮಾನ ಇಳಿಕೆ ಕಾರಣವಾಗುತ್ತದೆ. ದೆಹಲಿಯ ಪೂರ್ವದಲ್ಲಿರುವ ಗೋರಖ್‌ಪುರ ಹಾಗೂ ಪಶ್ಚಿಮದಲ್ಲಿರುವ ಅಮೃತಸರದಲ್ಲಿ 10 ಗ್ರೇಡಿಯಂಟ್ ಪಾಯಿಂಟ್ ಗಾಳಿಯ ಒತ್ತಡವಿರುವುದರಿಂದ ದೆಹಲಿಯಲ್ಲಿ ತಾಪಮಾನ ಇಳಿಕೆಗೆ ಕಾರಣವಾಗಿದೆ.

ಈ ಗಾಳಿಯ ಒತ್ತಡದಿಂದಾಗಿ ಹಗಲಿನಲ್ಲಿ ಗರಿಷ್ಠ ತಾಪಮಾನದ ಮೇಲೆ ಪರಿಣಾಮ ಬೀರುವುದಲ್ಲದೆ, ರಾತ್ರಿಯ ವೇಳೆಯಲ್ಲಿಯೂ ತಾಪಮಾನದ ಇಳಿಕೆಗೆ ಕಾರಣವಾಗುತ್ತದೆ. ಶನಿವಾರ ನಸುಕಿನ ಜಾವ ದಾಖಲಾದ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 3-5 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ. ಕೆಲವು ಪ್ರದೇಶಗಳಲ್ಲಿ, ಗಾಳಿಯ ವೇಗ ಗಂಟೆಗೆ 45 ಕಿ.ಮೀಗೆ ತಲುಪಿದೆ.

ಗಾಳಿಯ ಒತ್ತಡ ಕ್ರಮೇಣ ಕಡಿಮೆಯಾದಂತೆ ಶಾಖದ ಅಲೆಗಳು ಮರಳುವ ಸಾಧ್ಯತೆಯಿದೆ. ಏಪ್ರಿಲ್ ಆರಂಭದಿಂದ ದೆಹಲಿಯಲ್ಲಿ ಬಿಸಿಲು ಅಬ್ಬರಿಸುವ ನಿರೀಕ್ಷೆಯಿದೆ.ಇದನ್ನೂ ಓದಿ:ಪ್ರಯಾಗ್‍ರಾಜ್‍ನಲ್ಲಿ ಗುಂಡಿಕ್ಕಿ ಏರ್ ಫೋರ್ಸ್ ಎಂಜಿನಿಯರ್ ಹತ್ಯೆ

Share This Article