ದೆಹಲಿಯಲ್ಲಿ ನೀರಿಗೆ ಹಾಹಾಕಾರ – ಜಲಮಂಡಳಿ ಕಚೇರಿ ಧ್ವಂಸಗೊಳಿಸಿದ ಪ್ರತಿಭಟನಾಕಾರರು

Public TV
1 Min Read
delhi water crisis

ನವದೆಹಲಿ: ದಿಲ್ಲಿಯಲ್ಲಿ ನೀರಿಗಾಗಿ ಹಾಹಾಕಾರ (Delhi Water Crisis) ಎದುರಾಗಿದ್ದು, ರಾಷ್ಟ್ರ ರಾಜಧಾನಿಯಾದ್ಯಂತ ಪ್ರತಿಭಟನೆ, ವಿಧ್ವಂಸಕ ಕೃತ್ಯಗಳು ಜರುಗುತ್ತಿವೆ.

ಅಪರಚಿತರು ಛತ್ತಪುರಿಯಲ್ಲಿರುವ ದೆಹಲಿ (New Delhi) ಜಲ ಮಂಡಳಿ (ಡಿಜೆಪಿ) ಕಚೇರಿಯನ್ನು ಜನರು ಧ್ವಂಸಗೊಳಿಸಿದ್ದಾರೆ. ಡಿಜೆಪಿ ಕಚೇರಿಯಲ್ಲಿ ಒಡೆದ ಕಿಟಕಿಯ ಗಾಜು ಮತ್ತು ಮಣ್ಣಿನ ಮಡಿಕೆಗಳು ಒಡೆಯಲಾಗಿದೆ. ವಿಧ್ವಂಸಕ ಕೃತ್ಯದಲ್ಲಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಇದ್ದರು ಎಂದು ಎಎಪಿ ವೀಡಿಯೋ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಫ್ರಿಡ್ಜ್‌ನಲ್ಲಿಟ್ಟಿದ್ದ ಗೋಮಾಂಸ ವಶ- ಅಕ್ರಮವಾಗಿ ನಿರ್ಮಿಸಿದ್ದ 11 ಮನೆಗಳು ನೆಲಸಮ

‘ಬಿಜೆಪಿ ಜಿಂದಾಬಾದ್’ ಎಂಬ ಘೋಷಣೆಗಳನ್ನು ಕೂಗುತ್ತಾ ಬಿಜೆಪಿ ಕಾರ್ಯಕರ್ತರು ದೆಹಲಿ ಜಲ ಮಂಡಳಿಯ ಕಚೇರಿಯನ್ನು ಹೇಗೆ ಒಡೆಯುತ್ತಿದ್ದಾರೆ ಎಂಬುದನ್ನು ನೋಡಿ ಎಂದು ಎಎಪಿ ಎಕ್ಸ್‌ನಲ್ಲಿ ಬರೆದು ಆರೋಪಿಸಿದೆ.

ಒಂದೆಡೆ ಹರಿಯಾಣದ ಬಿಜೆಪಿ ಸರ್ಕಾರವು ದೆಹಲಿಯ ನ್ಯಾಯಯುತ ಪಾಲನ್ನು ತಡೆಹಿಡಿಯುತ್ತಿದ್ದರೆ ಮತ್ತೊಂದೆಡೆ, ಬಿಜೆಪಿಯು ದೆಹಲಿಯ ಜನರ ಆಸ್ತಿಯನ್ನು ಹಾನಿಗೊಳಿಸುತ್ತಿದೆ ಎಂದು ಎಎಪಿ ವಾಗ್ದಾಳಿ ನಡೆಸಿದೆ. ಇದನ್ನೂ ಓದಿ: ತನ್ನ ಉಗುಳಿನಿಂದ ಗ್ರಾಹಕನ ಮುಖಕ್ಕೆ ಮಸಾಜ್‌ ಮಾಡಿದ ಕ್ಷೌರಿಕ!

ಇದು ಸಹಜ. ಜನರು ಕೋಪಗೊಂಡಾಗ ಏನು ಬೇಕಾದರೂ ಮಾಡಬಹುದು. ಆ ಜನರನ್ನು ನಿಯಂತ್ರಿಸಿದ ಕಾರ್ಯಕರ್ತರಿಗೆ ನಾನು ಆಭಾರಿಯಾಗಿದ್ದೇನೆ. ಇದು ಸರ್ಕಾರದ ಮತ್ತು ಜನರ ಆಸ್ತಿ. ಈ ಆಸ್ತಿಗೆ ಹಾನಿ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಬಿಜೆಪಿ ಮುಖಂಡ ರಮೇಶ್ ಬಿಧುರಿ ತಿಳಿಸಿದ್ದಾರೆ.

Share This Article