ನವದೆಹಲಿ: ಅನಾರೋಗ್ಯದ ಕಾರಣ ಹೆಚ್ಚಿನ ಸಮಯ ಹಾಸಿಗೆಯಲ್ಲೇ ಕಳೆಯುವಂತಾಗಿದೆ ಎಂದು ಬೇಸರಗೊಂಡು ದೆಹಲಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಗ್ನೇಯ ದೆಹಲಿ ಗೋವಿಂದಪುರಿ ಪ್ರದೇಶದಲ್ಲಿ ಬುಧವಾರ ನಡೆದಿದೆ.
ರಾಕೇಶ್ ಕುಮಾರ್ ಜೈನ್ (74) ಮತ್ತು ಅವರ ಪತ್ನಿ ಉಷಾ ರಾಕೇಶ್ ಕುಮಾರ್ ಜೈನ್ (69) ಮೃತರು. ಗೋವಿಂದಪುರಿ ಬಳಿಯ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಯೂಟ್ಯೂಬ್ ವೀಡಿಯೋ ನೋಡಿ ಮಗುವಿಗೆ ಜನ್ಮ ನೀಡಿದ ಹುಡುಗಿ – ಪ್ರಿಯಕರ ಅರೆಸ್ಟ್
Advertisement
Advertisement
ಮನೆಯ ಟೇಬಲ್‍ನಲ್ಲಿ ಪುಸ್ತಕವೊಂದು ಸಿಕ್ಕಿದೆ. “ಅಪಘಾತದಿಂದಾಗಿ ಇಬ್ಬರೂ ಹಾಸಿಗೆ ಹಿಡಿಯುವಂತಹ ಪರಿಸ್ಥಿತಿ ಎದುರಾಯಿತು. ಇದರಿಂದ ತುಂಬಾ ಬೇಸರವಾಗುತ್ತಿದೆ” ಎಂದು ಬರೆದುಕೊಂಡಿದ್ದಾರೆ. ಇದು ಅವರ ಆತ್ಮಹತ್ಯೆಗೆ ಪ್ರಮುಖ ಕಾರಣವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
Advertisement
ಗ್ರೇಟರ್ ಕೈಲಾಸ್ ಅವರ ಪೋಷಕರ ಆರೈಕೆ ಮಾಡುತ್ತಿದ್ದ ಅಂಕಿತಾ ಪೊಲೀಸ್ ಠಾಣೆಗೆ ಕರೆ ಮಾಡಿ ಪ್ರಾಧ್ಯಾಪಕ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಮಹಿಳೆಗೆ ಕಲ್ಲಿನಿಂದ ಹೊಡೆದು, ಉಸಿರುಗಟ್ಟಿಸಿ ಅತ್ಯಾಚಾರಕ್ಕೆ ಯತ್ನಿಸಿದ 15ರ ಬಾಲಕ!
Advertisement
ಎಂದಿನಂತೆ ಮನೆಗೆ ಬಂದು ಬಾಗಿಲು ಬೆಲ್ ಮಾಡಿದ್ದಾರೆ. ಆದರೆ ಯಾರೂ ಬಾಗಿಲು ತೆಗಿದಿಲ್ಲ. ಕೊನೆಗೆ ಅನುಮಾನಗೊಂಡು ಅಂಕಿತ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.