ನವದೆಹಲಿ: ಕ್ರೈಂ ಸಿನಿಮಾ ನೋಡಿದ ಮೂವರು ಆರೋಪಿಗಳು 24 ವರ್ಷದ ಯುವಕನನ್ನು ಬರ್ಬರವಾಗಿ ಥಳಿಸಿ ಹತ್ಯೆ ಮಾಡಿದ ಆಘಾತಕಾರಿ ಘಟನೆ ದೆಹಲಿಯಲ್ಲಿ ನಡೆದಿದೆ. ಈ ಕೃತ್ಯ ನಡೆಸಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಗೀಡಾದ ಯುವಕ ಪಾರ್ಕ್‍ನಲ್ಲಿ ಗಿಲ್ಲಿ ದಾಂಡು ಆಡುತ್ತಿದ್ದ. ಆದರೆ ಆಟವಾಡುವುದನ್ನು ವಿರೋಧಿಸಿ ಆರೋಪಿಗಳು ಯುವಕನ ಜೊತೆ ಜಗಳವಾಡಿದ್ದಾರೆ. ಆದರೆ ಗಲಾಟೆ ಅತಿರೇಕಕ್ಕೆ ಹೋಗಿ ಯುವಕನನ್ನು ಮೂವರು ಪಾರ್ಕ್‍ನಲ್ಲೇ ಕೊಲೆ ಮಾಡಿದ್ದಾರೆ. ಆರೋಪಿಗಳು ಜನಪ್ರಿಯವಾಗಲು ಕೃತ್ಯದ ವೀಡಿಯೋವನ್ನು ರೆಕಾರ್ಡ್ ಮಾಡಿದ್ದು, ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಲು ಯತ್ನಿಸಿದ್ದಾರೆ. ಇದನ್ನೂ ಓದಿ: ಪತ್ನಿಯನ್ನ ಸರ್ಜಿಕಲ್ ಬ್ಲೇಡ್‍ನಿಂದ ಕೊಯ್ದು ಪತಿ ಆತ್ಮಹತ್ಯೆಗೆ ಶರಣು!
Advertisement
Advertisement
ಪ್ರೇರಣೆ ಏನು?: ಆರೋಪಿಗಳು ಕಳೆದ ತಿಂಗಳು ತೆಲುಗು ಸಿನಿಮಾ ‘ಪುಷ್ಪ – ದಿ ರೈಸ್’ ನೋಡಿ ಕೃತ್ಯ ಮಾಡಲು ಪ್ರೇರೇಪಣೆಗೊಂಡಿದ್ದಾರೆ. ಅಲ್ಲು ಅರ್ಜುನ್ ಅವರ ಪಾತ್ರದ ನಡವಳಿಕೆಯನ್ನು 10-15 ಯುವಕರ ಗುಂಪು ಅನುಕರಿಸಿ ‘ಬದ್ನಾಮ್’ ಎಂಬ ಗ್ಯಾಂಗ್ ರಚಿಸಿದ್ದಾರೆ. ಈ ಹಿನ್ನೆಲೆ ಆ ಗುಂಪಿನ ಮೂವರು ಜ.19ರಂದು ಕ್ಷುಲ್ಲಕ ಕಾರಣಕ್ಕೆ ಯುವಕನ ಜೊತೆ ಜಗಳವಾಡಿದ್ದು, ಆತನನ್ನು ಕೊಂದಿದ್ದಾರೆ. ಮೃತ ವ್ಯಕ್ತಿಯನ್ನು ಶಿಬು ಹುಸೇನ್ ಎಂದು ಪೊಲೀಸರು ಗುರುತಿಸಿದ್ದಾರೆ.
Advertisement
ಘಟನೆ ಬಗ್ಗೆ ಮಾಹಿತಿ ನೀಡಿದ ಡಿಸಿಪಿ ಉಷಾ ರಂಗಾನಿ, ಆಸ್ಪತ್ರೆಯಿಂದ ಮೃತ ಶಿಬುವಿನ ದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಲಾಗಿದ್ದು, ಕೃತ್ಯ ನಡೆದ 12 ಗಂಟೆಯೊಳಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಕೃತ್ಯದ ವೀಡಿಯೋವನ್ನು ಯುವಕರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲು ಯತ್ನಿಸಿದ್ದರು ಎಂದು ತಿಳಿಸಿದ್ದಾರೆ.
Advertisement
ನಾವು ಸರಿಯಾದ ಸಮಯಕ್ಕೆ ತಲುಪಿದ್ದೇವೆ. ಆರೋಪಿಗಳು ಕೃತ್ಯದ ಕ್ರೂರ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲು ಹೊರಟಿದ್ದರು. ನಾವು ಅದನ್ನು ನೋಡಿದ್ದು, ಪೋಸ್ಟ್ ಮಾಡುವುದನ್ನು ತಡೆದಿದ್ದೇವೆ. ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಫಾಲೋವರ್ಸ್ ಮಾಡಿಕೊಳ್ಳಲು ಈ ರೀತಿ ಕೃತ್ಯವನ್ನು ಮಾಡಿದ್ದಾರೆ. ಈ ಕೃತ್ಯವನ್ನು ಪೋಸ್ಟ್ ಮಾಡಿ ಇತರರನ್ನು ಪ್ರೇರೇಪಿಸಲು ಆರೋಪಿಗಳು ಬಯಸಿದ್ದರು ಎಂದು ವಿವರಿಸಿದರು.
ಆರೋಪಿಗಳನ್ನು ಎಸಿಪಿ ತಿಲಕ್ ಚಂದ್ರ ಬಿಷ್ತ್ ಅವರ ತಂಡ ಬಂಧಿಸಿದ್ದು, ಕೃತ್ಯಕ್ಕೆ ಬಳಸಲಾಗಿದ್ದ ಆಯುಧಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಆರೋಪಿಗಳ ವಯಸ್ಸು ಕ್ರಮವಾಗಿ 15, 16 ಮತ್ತು 17 ವರ್ಷ ಎಂದು ಗುರುತಿಸಲಾಗಿದ್ದು, ಇವರು ‘ಪುಷ್ಪಾ’ ಮತ್ತು ‘ಭೌಕಾಲ್’ ಸಿನಿಮಾ ವೀಕ್ಷಿಸಿ ಅದರಿಂದ ಪ್ರೇರಣೆಗೊಂಡು ಈ ಕೃತ್ಯ ಮಾಡಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: 1 ನಿಮಿಷದಲ್ಲಿ 105 ಪುಶ್-ಅಪ್ ಮಾಡಿ ದಾಖಲೆ ಸೃಷ್ಟಿಸಿದ ಯುವಕ!
ಆರೋಪಿಗಳು ಇನ್‍ಸ್ಟಾಗ್ರಾಮ್‍ನಲ್ಲಿ ಸಕ್ರಿಯರಾಗಿದ್ದಾರೆ. ಇವರು ಆಗಾಗ್ಗೆ ರೀಲ್‍ಗಳು ಮತ್ತು ವೀಡಿಯೋಗಳನ್ನು ಲಿಪ್ ಸಿಂಕ್ ಮಾಡಿ ಅಥವಾ ಬಾಲಿವುಡ್ ಹಾಡುಗಳಿಗೆ ನೃತ್ಯ ಮಾಡಿ ಪೋಸ್ಟ್ ಮಾಡುತ್ತಿದ್ದರು. ಆರೋಪಿಗಳು ಹಿಂಸೆಗೆ ಸಂಬಂಧಿಸಿದ ವೀಡಿಯೋಗಳನ್ನು ಹೆಚ್ಚು ಪೋಸ್ಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.