ನವದೆಹಲಿ: ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಸಮಯದಲ್ಲಿ ವಾತಾವರಣದಲ್ಲಿನ ದಟ್ಟ ಮಂಜು, ಹೊಗೆ ಹಾಗೂ ಅಪಾಯಕಾರಿ ದೂಳಿನ ಕಣಗಳಿಂದ ಲಂಕಾದ ಆಟಗಾರರು ಹೈರಾಣಗಿದ್ದಾರೆ.
Advertisement
ಭಾನುವಾರ ಪಂದ್ಯದ ವೇಳೆ ಕೆಲ ಆಟಗಾರರು ಮುಖಕ್ಕೆ ಮಾಸ್ಕ್ ಧರಿಸಿ ಮೈದಾನಕ್ಕೆ ಇಳಿದಿದ್ದರು. ಈ ವೇಳೆ ಲಂಕಾ ತಂಡದ ನಾಯಕ ದಿನೇಶ್ ಚಂಡಿಮಾಲ್ ಅಂಪೈರ್ ಗಳಿಗೆ ವಾತಾವರಣ ಕುರಿತು ದೂರು ನೀಡಿದರು. ಇದರಿಂದ 17 ನಿಮಿಷಗಳ ಕಾಲ ಆಟ ನಿಲ್ಲಿಸಲಾಗಿತ್ತು. ಆದರೆ ಅಂಪೈರ್ ಹಾಗೂ ಮ್ಯಾಚ್ ರೆಫ್ರಿ ಡೇವಿಡ್ ಬೂನ್ ಲಂಕಾ ಆಟಗಾರರ ಮನವೊಲಿಸಿ ಆಟ ಮುಂದುವರೆಸಲು ಯಶಸ್ವಿಯಾದರು.
Advertisement
ಮತ್ತೆ ಬೌಲಿಂಗ್ ಆರಂಭಿಸಿದ ಶ್ರೀಲಂಕಾದ ಬೌಲರ್ ಲಕ್ಮಲ್ ಪಂದ್ಯದ 123 ನೇ ಓವರ್ ನಲ್ಲಿ ಉಸಿರಾಟ ಸಮಸ್ಯೆ ಎದುರಿಸಿ ಮೈದಾನದಿಂದ ಹೊರ ನಡೆದರು. ಈ ವೇಳೆ ಎರಡನೇ ಬಾರಿ ಆಟ ಸ್ಥಗಿತಗೊಂಡಿತು. (ಇದನ್ನೂ ಓದಿ: ಡಬಲ್ ಸೆಂಚುರಿ ಮೆಷಿನ್ ಕೊಹ್ಲಿಯಿಂದ ವಿಶ್ವದಾಖಲೆ! )
Advertisement
ಈ ಪಂದ್ಯದಲ್ಲಿ 243 ರನ್ ಗಳಿಸಿ ಪೆವಿಲಿಯನ್ ಸೇರಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 7 ವಿಕೆಟ್ ನಷ್ಟಕ್ಕೆ 536 ರನ್ ಗಳಿಸಿದ್ದಾಗ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡುವ ನಿರ್ಧಾರ ಪ್ರಕಟಿಸಿದರು. ದಿನದ ಆಟದ ಅಂತ್ಯಕ್ಕೆ ಲಂಕಾ 3 ವಿಕೆಟ್ ಕಳೆದುಕೊಂಡು 131 ರನ್ ಗಳಿಸಿದೆ. ಫೀಲ್ಡಿಂಗ್ ವೇಳೆ ಟೀಂ ಇಂಡಿಯಾದ ಎಲ್ಲ ಆಟಗಾರು ಮಾಸ್ಕ್ ಧರಿಸದೇ ಎಂದಿನಂತೆ ಅಂಗಳಕ್ಕೆ ಇಳಿದಿದ್ದರು.