* ನೋಟಿಸ್, ಹಕ್ಕು-ಆಕ್ಷೇಪಣೆ ವಿಲೇವಾರಿ ಗಡುವು ನ.30 ರವರೆಗೆ ವಿಸ್ತರಣೆ
ನವದೆಹಲಿ: ದೆಹಲಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಇರುವ ಗಡುವನ್ನು ಚುನಾವಣಾ ಆಯೋಗವು ಒಂದು ತಿಂಗಳ ಕಾಲ ವಿಸ್ತರಿಸಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Gyanesh Kumar) ಹಾಗೂ ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು, ಮತದಾರರ ಪಟ್ಟಿಯ ನಡೆಯುತ್ತಿರುವ ಪರಿಷ್ಕರಣೆಗೆ ಸಂಬಂಧಿಸಿದ ಹಲವು ನಿರ್ಧಾರಗಳಿಗೆ ಇಂದು ಅನುಮೋದನೆ ನೀಡಿದರು. ಇದನ್ನೂ ಓದಿ: SIR ವಿವಾದದ ನಡುವೆ ಯುಪಿಯಲ್ಲಿ ಜ್ಞಾನೇಶ್ ಕುಮಾರ್ ಕಾರ್ಯಕ್ರಮ ಮುಂದೂಡಿಕೆ
ಆಯೋಗದ ಪ್ರಕಾರ, ದೆಹಲಿಯಲ್ಲಿ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಗಡುವು ಅಕ್ಟೋಬರ್ 30 ರವರೆಗೆ ವಿಸ್ತರಿಸಲಾಗಿದೆ. ನೋಟಿಸ್ಗಳು, ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಇತ್ಯರ್ಥಪಡಿಸುವ ಗಡುವನ್ನು ನವೆಂಬರ್ 30 ರವರೆಗೆ ವಿಸ್ತರಿಸಲಾಗಿದೆ.
SIR ವೇಳೆ ‘ಅನ್ಮ್ಯಾಪ್ಡ್’ ಹಾಗೂ ತಾರ್ಕಿಕ ವ್ಯತ್ಯಾಸ ಇರುವ ಮತದಾರರ ಮನೆಗಳಿಗೆ BLO ಭೇಟಿ ನೀಡಲಿದ್ದಾರೆ. ಮನೆಗೆ ತೆರಳಿ ದಾಖಲೆ ಸಂಗ್ರಹಿಸಿ ECINetನಲ್ಲಿ ಅಪ್ಲೋಡ್ ಮಾಡಲು ಸೂಚನೆ ನೀಡಲಾಗಿದೆ. ಸಾಮಾನ್ಯವಾಗಿ ERO/AERO ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಬೇಕಿಲ್ಲ. ಅಗತ್ಯವಿದ್ದರೆ ಮಾತ್ರ ಆನ್ಲೈನ್ ಮೂಲಕ ವಿಚಾರಣೆ ನಡೆಸಲು ಅವಕಾಶ ಇದೆ.
ರಾತ್ರಿ ಆಶ್ರಯ ಕೇಂದ್ರ, ಕಾರ್ಮಿಕರು, ಬಡವರು, ನಿರಾಶ್ರಿತರಿಗೆ ವಿಶೇಷ ಸಹಾಯ ಕೇಂದ್ರ/ಶಿಬಿರ ಸ್ಥಾಪಿಸಲಾಗುವುದು. SIR ಪೂರ್ಣಗೊಂಡ ರಾಜ್ಯಗಳಲ್ಲೂ ಹೆಸರು ಬಿಟ್ಟುಹೋದವರು ನಿರಂತರ ಪರಿಷ್ಕರಣೆ ಮೂಲಕ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಳ್ಳಬಹುದು. ಮೊದಲ ಬಾರಿಗೆ ಮತದಾನ ಮಾಡುವ ಯುವಕರಿಗೂ ಹೆಸರು ಸೇರ್ಪಡೆಗೆ ಅವಕಾಶವಿದೆ. ಇದನ್ನೂ ಓದಿ: PUBLiC TV Explainer| SIR ಭಾರೀ ವಿವಾದ – ಒಂದು ಸಣ್ಣ ಬದಲಾವಣೆ ಇಷ್ಟೊಂದು ಚರ್ಚೆಯಾಗುತ್ತಿರೋದು ಯಾಕೆ?
ಆಯೋಗವು ಮಹಾರಾಷ್ಟ್ರದಲ್ಲೂ ಸಂಬಂಧಿತ ಗಡುವುಗಳನ್ನು ವಿಸ್ತರಿಸಿದೆ. ಅಲ್ಲಿ ಈಗ ಅಕ್ಟೋಬರ್ 12 ರವರೆಗೆ ಹಕ್ಕು ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದ್ದು, ಅವುಗಳ ಇತ್ಯರ್ಥದ ಅವಧಿಯನ್ನು ನವೆಂಬರ್ 10 ರವರೆಗೆ ವಿಸ್ತರಿಸಲಾಗಿದೆ.

