– ಶೀಷ್ ಮಹಲ್‌ಗೆ ಒಟ್ಟು 33 ಕೋಟಿ ರೂ. ಖರ್ಚು – ವರದಿ ಸ್ಫೋಟ
ನವದೆಹಲಿ: ದೆಹಲಿ ಚುನಾವಣೆಗೆ ದಿನಗಳು ಸಮೀಪವಾಗುತ್ತಿರುವಾಗಲೇ ʻಶೀಷ್ ಮಹಲ್ʼ ಜಟಾಪಟಿ ತೀವ್ರಗೊಂಡಿದೆ. ಭಾನುವಾರ ದೆಹಲಿಯ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡುವ ವೇಳೆ ಪ್ರಧಾನಿ ಮೋದಿ ಮತ್ತೆ ಶೀಷ್ ಮಹಲ್ ಉಲ್ಲೇಖಿಸಿ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪತ್ರಿಕಾ ವರದಿಯೊಂದನ್ನು ಉಲ್ಲೇಖಿಸಿ ಮಾತನಾಡಿದ ಅವರು, ದೆಹಲಿ ಸಿಎಂ ನಿವಾಸದ ನವೀಕರಣ ವೆಚ್ಚವು ಮೂರು ಪಟ್ಟು ಹೆಚ್ಚಾಗಿದೆ. ಅದರಲ್ಲೂ ದೆಹಲಿ ಕೋವಿಡ್ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ಶೀಷ್‌ಮಹಲ್ ನವೀಕರಣ ಕಾರ್ಯ ನಡೆದಿದೆ ಎಂದು ಹೇಳಿದ್ದಾರೆ.
Advertisement
Advertisement
ಮುಂದುವರಿದು, ಎಎಪಿ ಸರ್ಕಾರ ರಾಜಧಾನಿಯಲ್ಲಿ ಕೇಂದ್ರದ ಜೊತೆಗೆ ಸಂಘರ್ಷ ಮಾಡುತ್ತಲೇ 1 ದಶಕ ಪೋಲು ಮಾಡಿತು. ಇಲ್ಲಿ ಅಭಿವೃದ್ಧಿ ಯೋಜನೆಗಳ ಸಾಕಾರಕ್ಕಾಗಿ ಬಿಜೆಪಿಗೆ ಒಂದು ಅವಕಾಶ ಕಲ್ಪಿಸಬೇಕು. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಯಾವುದೇ ಜನಕಲ್ಯಾಣ ಯೋಜನೆ ಸ್ಥಗಿತಗೊಳಿಸುವುದಿಲ್ಲ. ಜೊತೆಗೆ ಜನಕಲ್ಯಾಣ ಯೋಜನೆ ಹೆಸರಿನಲ್ಲಿ ಆಗುತ್ತಿರುವ ಭ್ರಷ್ಟಾಚಾರವನ್ನೂ ನಿರ್ಮೂಲನೆಗೊಳಿಸಲಿದೆ. ಎಎಪಿ ಸರ್ಕಾರ ದೆಹಲಿಯ ಪಾಲಿಗೆ ವಿಪತ್ತು. ದೆಹಲಿಯು ಈ ವಿಪತ್ತಿನಿಂದ ಪಾರಾದ ನಂತರವೇ ಅಭಿವೃದ್ಧಿಯ ಡಬಲ್ ಎಂಜಿನ್ ಇಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಭರವಸೆ ನೀಡಿದರು.
Advertisement
ಈ ನಡುವೆ ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಸಹ ಶೀಷ್ ಮಹಲ್ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಕಳೆದ ವರ್ಷ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಲೆಕ್ಕಪರಿಶೋಧನಾ ಸಂಸ್ಥೆಯಿಂದ ಅಂತಿಮಗೊಳಿಸಲಾದ ರಾಜ್ಯಗಳಿಗೆ ಸಂಬಂಧಿಸಿದ ಅನೇಕ ವರದಿಗಳನ್ನ ಆಪ್ ವಿಧಾನ ಸಭೆಯಲ್ಲಿ ಮಂಡಿಸಿಲ್ಲ. ಏಕೆಂದರೆ ಆಪ್ ಅದನ್ನು ಮರೆಮಾಚಲು ಉದ್ದೇಶಪೂರ್ವಕವಾಗಿ ತಡೆಯುತ್ತಿದೆ ಎಂದು ಕಿಡಿ ಕಾರಿದರು.
Advertisement
ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಆಂಧ್ರಪ್ರದೇಶ, ಹರಿಯಾಣ, ಒಡಿಶಾ, ಕರ್ನಾಟಕ ಮತ್ತು ಮಧ್ಯಪ್ರದೇಶಗಳಿಗೆ ಸಂಬಂಧಿಸಿದ ಇತ್ತೀಚಿನ ವರದಿಗಳು C&AG ವೆಬ್‌ಸೈಟ್‌ನಲ್ಲಿ ಲಭ್ಯವಿವೆ. C&AG ತನ್ನ ವರದಿಗಳನ್ನು ರಾಜ್ಯಗಳಿಗೆ ಕಳುಹಿಸುತ್ತದೆ. ಆದರೆ ಅವುಗಳನ್ನು ವಿಧಾನಸಭೆಯಲ್ಲಿ ಮಂಡಿಸಿದ ನಂತರವೇ ಸಾರ್ವಜನಿಕಗೊಳಿಸುತ್ತದೆ ಎಂದು ಹೇಳಿದ್ದಾರೆ.
33 ಕೋಟಿ ರೂ. ಖರ್ಚು:
ಈ ನಡುವೆ ಶೀಷ್ ಮಹಲ್‌ಗೆ ಬಳಕೆ ಮಾಡಲಾದ ಅಂದಾಜು ವೆಚ್ಚದ ವರದಿಗಳು ಸ್ಫೋಟಗೊಂಡಿವೆ. ಅರವಿಂದ್ ಕೇಜ್ರಿವಾಲ್ ಅವರು ಸಿಎಂ ಆಗಿದ್ದ ಅವಧಿಯಲ್ಲಿ ಶೀಷ್ ಮಹಲ್ ಅನ್ನು ಮೂರು ಬಾರಿ ನವೀಕರಣಗೊಳಿಸಿದ್ದಾರೆ. ಇದರಿಂದ ಒಟ್ಟು 33.66 ಕೋಟಿ ರೂ. ಖರ್ಚಾಗಿದೆ ಎನ್ನಲಾಗಿದೆ.
ಶೀಷ್‌ಮಹಲ್ ಆವರಣದ 6 ಫ್ಲಾಗ್ ಸ್ಟಾಫ್ ರಸ್ತೆ, ಕಚೇರಿ ಮತ್ತು ಆವರಣದ ನವೀಕರಣದಿಂದ ಒಟ್ಟು ವೆಚ್ಚ ದುಬಾರಿಯಾಗಿದೆ. ಶೀಷ್‌ಮಹಲ್ ಪ್ರಾಥಮಿಕ ವೆಚ್ಚ 7.91 ಕೋಟಿ ರೂ. ಅಂತ ಅಂದಾಜಿಸಲಾಗಿತ್ತು, ಅದ್ರೆ 2020ರಲ್ಲಿ 8.62 ಕೋಟಿ ರೂ.ಗಳನ್ನು ನೀಡಲಾಯಿತು. 2022ರಲ್ಲಿ ಲೋಕೋಪಯೋಗಿ ಇಲಾಖೆ ಕಾಮಗಾರಿಯನ್ನು ಪೂರ್ಣಗೊಳಿಸಿದಾಗ ಒಟ್ಟು ವೆಚ್ಚ 33.66 ಕೋಟಿ ರೂ. ತಲುಪಿದೆ. ಅಂದಿನ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಗಿರೀಶ್ ಚಂದ್ರ ಮುರ್ಮು ಅವರ ವರದಿಯಲ್ಲಿ ಈ ಅಂಶಗಳನ್ನು ದಾಖಲಿಸಿದ್ದಾರೆ. ಮುರ್ಮು ಅವರು 2024ರ ನವೆಂಬರ್ 20ರಂದು ಅಧಿಕಾರ ತ್ಯಜಿಸುವ ಒಂದು ವಾರದ ಮೊದಲು ಈ ವರದಿಗೆ ಸಹಿ ಹಾಕಿದ್ದರು ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.