– ಮಿಡ್ಲ್ ಕ್ಲಾಸ್ ಹಾರ್ಟ್ ಗೆದ್ದ ಮೋದಿ ಟೀಂ
ಮಿಡ್ಲ್ ಕ್ಲಾಸ್ ಹಾರ್ಟ್ ಗೆದ್ದವರೇ ದಿಲ್ಲಿ ಗದ್ದುಗೆ ಗೆದ್ದು ಬಿಟ್ಟರಾ? 27 ವರ್ಷಗಳ ಕಾಲ ಅಧಿಕಾರ ಹಿಡಿಯಲು ತಿಣುಕಾಡಿದ್ದ ಬಿಜೆಪಿ (BJP) ಈಗ ಕ್ಯಾಪಿಟಲ್ ಕ್ಯಾಪ್ಟನ್. ಮೋದಿ-ಶಾ (Modi – Amit Shah) ಜೋಡಿಯ ಚತುರೋಪಾಯಗಳು ದೈತ್ಯ ಕೇಜ್ರಿʻವಾಲ್ʼ ಕೆಡವಿ ಮಕಾಡೆ ಮಲಗಿಸಿಬಿಟ್ಟಿವೆ. ಹಾಗಾದ್ರೆ ಡೆಲ್ಲಿಯಲ್ಲಿ ಏನಾಯ್ತು? ಗೆಲುವಿನ ಸರದಾರರ ಒಳ ರಹಸ್ಯಗಳೇನು? ಇನ್ ಸೈಡ್ ಡಿಟೇಲ್ಸ್ ಇಲ್ಲಿದೆ.
50ರ ತನಕ ಮೋದಿಗೆ ಜಾಗವಿಲ್ಲ ಎಂದಿದ್ದ ಆಪ್ ಮಲಗಿತು ಮಕಾಡೆ:
ಅಂದು ಭ್ರಷ್ಟಾಚಾರ ವಿರೋಧಿ ಆಂದೋಲನವೇ ಎಎಪಿ ಉದಯಕ್ಕೆ ಕಾರಣ. ಆದ್ರೆ ಇಂದು ಭ್ರಷ್ಟಾಚಾರ ಆರೋಪವೇ ಎಎಪಿ ಪತನಕ್ಕೆ ನಾಂದಿ. ಅವರದೇ ಕಸಪೊರಕೆಯಿಂದ ಎಎಪಿ ಗುಡಿಸಿ ಗುಡ್ಡೇ ಹಾಕಿದೆ ಬಿಜೆಪಿ. ಇದನ್ನ ಭಾರತದ ಪ್ರಜಾಪ್ರಭುತ್ವದ ಬ್ಯೂಟಿ ಅನ್ನಬೇಕೋ? ಚುನಾವಣಾ ಚದುರಂಗದಾಟದ ಫಲಿತಾಂಶ ಅನ್ನಬೇಕೋ..? ಆದ್ರೆ ಗೆಲುವು ಗೆಲುವೇ. ಇದನ್ನೂ ಓದಿ: Delhi Election Results | ಬಜೆಟ್ ಡೇ ಸೂಪರ್ ಓವರ್‌ನಲ್ಲಿ ಸೀತಾರಾಮನ್ ʻಸಿಕ್ಸ್ʼ – ಬಿಜೆಪಿ ಚಾಂಪಿಯನ್!
ಮೋದಿ-ಶಾ ಚತುರೋಪಾಯಗಳೇ ಡೆಲ್ಲಿ ಗೆಲ್ಲಿಸಿತಾ?
ಅಂದಹಾಗೆ ಡೆಲ್ಲಿ ಚುನಾವಣೆಯಲ್ಲಿ ಸಾಮ, ದಾನ, ಭೇದ, ದಂಡ ಮಂತ್ರಗಳನ್ನ ಬಿಜೆಪಿ ಪಠಿಸಿದಂತೆ ಕಾಣುತ್ತೆ. ಡೆಲ್ಲಿಯನ್ನ ಗೆದ್ದೇ ಗೆಲ್ಲಬೇಕೆಂಬ ಹಠ ಮೋದಿ ಅವರಿಗಿತ್ತು. ಆ ಕಾರಣಕ್ಕಾಗಿಯೇ ಕೇಜ್ರಿವಾಲ್ ವಿರುದ್ಧ ಎಲ್ಲ ಶಕ್ತಿಗಳನ್ನ ಒಟ್ಟುಗೂಡಿಸಿದ್ದು ಮೋದಿ, ಶಾ. ಲೋಕಸಭೆಯಲ್ಲಿ ದೂರಾಗಿದ್ದವರಿಗೂ ಮಣೆ ಹಾಕುವುದರ ಜೊತೆಗೆ ಜಾತಿ ಆಧಾರಿತ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ತಂತ್ರ ಫಲಿಸಿದೆ. ಕೇಜ್ರಿವಾಲ್ ಸುತ್ತ ಗಿರಕಿ ಹೊಡೆದ ಎಎಪಿಗೆ ಮೋದಿ ಟೀಂನಿಂದ ಬಿಟ್ಟ ಭ್ರಷ್ಟಾಚಾರ ಬಾಣ ನಾಟಿರುವುದು ಸ್ಪಷ್ಟ. ಇದನ್ನೂ ಓದಿ: ಜನರ ಆದೇಶವನ್ನು ನಮ್ರತೆಯಿಂದ ಸ್ವೀಕರಿಸುತ್ತೇವೆ: ಕೇಜ್ರಿವಾಲ್
ಡೆಲ್ಲಿ ವಾರ್.. ಬಿಜೆಪಿಯೇ ಸ್ಟಾರ್ – ಎಎಪಿ ಢಮಾರ್:
ಯೆಸ್, ಎಎಪಿಯನ್ನ ಮಣಿಸಲು ಬಿಜೆಪಿ ಮಾಡಿದ ಹಲವು ಕ್ಯಾಂಪೇನ್‌ಗಳು ಸಕ್ಸಸ್ ಆದಂತೆ ಕಾಣ್ತಿದೆ. ಎಎಪಿ ವಿರುದ್ಧ ಭ್ರಷ್ಟಾಚಾರ ಕ್ಯಾಂಪೇನ್, ಡೆಲ್ಲಿ ಜಾತಿ ಸಮೀಕರಣ ತಂತ್ರ, ಟ್ಯಾಕ್ಸ್ ರಿಲ್ಯಾಕ್ಸ್ -ಮಿಡ್ಲ್ ಕ್ಲಾಸ್ ಟಾರ್ಗೆಟ್, ಪ್ರಧಾನಿ ನರೇಂದ್ರ ಫೇಸ್+ಡೆವಲಪ್ಮೆಂಟ್ ವಿಶನ್, ಕುಂಭಮೇಳ ಮತ್ತು ಧರ್ಮಾಧಾರಿತ ವಿಷಯಗಳನ್ನು ಬಿಜೆಪಿ ಕ್ಯಾಂಪೇನ್ ಮಾಡಿತ್ತು. ಆದ್ರೆ ಎಎಪಿ ಆಯ್ಕೆ ಕೇಜ್ರಿವಾಲ್ ಜೈಲಿನ ಅನುಂಕಪ ನೆಚ್ಚಿಕೊಳ್ಳುವುದರ ಜೊತೆಗೆ ಭ್ರಷ್ಟಾಚಾರ ಕೂಪದ ಆರೋಪದಿಂದ ಹೊರಬರಲು ವಿಲವಿಲ ಎನ್ನುವಂತಾಯ್ತು ಎಂಬುದು ರಾಜಕೀಯ ಪಡಸಾಲೆಯ ಚರ್ಚೆ. ಇದನ್ನೂ ಓದಿ: ಶೀಷ್ ಮಹಲ್‌ನಿಂದ ಹೊಸ ಅಬಕಾರಿ ನೀತಿ ಹಗರಣ ವರೆಗೆ – ದೆಹಲಿಯಲ್ಲಿ ಆಪ್ ಸೋತಿದ್ದೇಕೆ?
ಒಟ್ಟಿನಲ್ಲಿ ಡೆಲ್ಲಿ ಪೊಲಿಟಿಕಲ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಮೋದಿ-ಶಾ ರಕ್ಷಣಾತ್ಮಕ ಜೊತೆಯಾಟದಿಂದ ಎಎಪಿ ಕಟ್ಟಿದ ಕೇಜ್ರಿ ‘ವಾಲ್’ ಛಿದ್ರ ಛಿದ್ರವಾಗಿದ್ರೆ, ಬಜೆಟ್ ಡೇ ಸೂಪರ್ ಓವರ್ ನಲ್ಲಿ ನಿರ್ಮಲಾ ಸೀತಾರಾಮನ್ ಸೂಪರ್ ಸಿಕ್ಸ್ ನಿಂದ ಬಿಜೆಪಿಗೆ ಬೂಸ್ಟ್ ಸಿಕ್ಕಿ 27 ವರ್ಷಗಳ ಬಳಿಕ ಚಾಂಪಿಯನ್ ಪಟ್ಟಕೇರಿದೆ. ಆದ್ರೆ ಎಎಪಿ ಟೀಂನಲ್ಲಿ ಕ್ಯಾಪ್ಟನ್ ತಂತ್ರ ಕೈ ಕೊಡುವುದರ ಜೊತೆಗೆ ಹಿಟ್ ವಿಕೆಟ್ ಗಳು ಜಾಸ್ತಿ ಆಗಿ, ಚಾಂಪಿಯನ್ ಪಟ್ಟದಿಂದ ಎಎಪಿ ಔಟ್ ಆಗಿದ್ರೆ, ‘ಕೈ’ ಜಾರಿದ ಮೈತ್ರಿ ಕ್ಯಾಚ್ ನಿಂದ ಕಂಗೆಟ್ಟಿದ್ದ ಟೀಂ ಕಾಂಗ್ರೆಸ್ ಕಳಪೆ ಪ್ರದರ್ಶನನಿಂದ ಮತ್ತೆ ಡಕ್ ಔಟ್ ಆಗಿರೋದಂತೂ ಸತ್ಯ. ಇದನ್ನೂ ಓದಿ: ಕಾಂಗ್ರೆಸ್ ಹ್ಯಾಟ್ರಿಕ್ ಸಾಧನೆ ಮಾಡಿದೆ, ಡಿಕೆಶಿ ಗ್ಯಾರಂಟಿ ಠುಸ್ ಪಟಾಕಿ ಆಗಿದೆ: ವಿಜಯೇಂದ್ರ ವ್ಯಂಗ್ಯ