ನವದೆಹಲಿ: ರಾಜಧಾನಿಯಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಮಧ್ಯೆ, ದೆಹಲಿಯ ವಿಪತ್ತು ನಿರ್ವಾಹಣಾ ಪ್ರಾಧಿಕಾರ ಸೂಚಿಸಿದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ದೆಹಲಿಯ ಮೆಹ್ರೌಲಿಯ ರೆಸ್ಟೋರೆಂಟ್‌ಗೆ ಬೀಗ ಜಡಿದಿದ್ದಾರೆ.
ಕೋವಿಡ್ ಮಾರ್ಗಸೂಚಿಯನ್ನು ಉಲ್ಲಂಘಿಸಿ ಗುರುವಾರ ರಾತ್ರಿ ಸುಮಾರು 10.45 ಗಂಟೆಗೆ ರೆಸ್ಟೋರೆಂಟ್‌ನಲ್ಲಿ ಸುಮಾರು 600 ಜನ ಸೇರಿ ಪಾರ್ಟಿ ನಡೆಸುತ್ತಿದ್ದು, ಈ ವಿಷಯ ತಿಳಿದ ಮೆಹ್ರೌಲಿಯ ತಹಶೀಲ್ದಾರ ಎಸ್‌ಹೆಚ್ ಸುನೀಲ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ರೆಸ್ಟೋರೆಂಟ್‌ಗೆ ಮೊಹರು ಹಾಕಿದ್ದಾರೆ. ಇದನ್ನೂ ಓದಿ: ಕೋವಿಡ್ ಸೋಂಕಿತೆ ಸತ್ತು 6 ತಿಂಗಳ ಬಳಿಕ ಬಂತು ನೆಗೆಟಿವ್ ವರದಿ
Advertisement
Advertisement
ಹೆಚ್ಚುವರಿ ಉಪ ಪೊಲೀಸ್ ಆಯಕ್ತ(ದಕ್ಷಿಣ) ಎಂ ಹರ್ಷ ವರ್ಧನ್, ಐಪಿಸಿ ಸೆಕ್ಷನ್ 188 (ಸಾರ್ವಜನಿಕ ಸೇವಕರಿಂದ ಜಾರಿಗೆ ತಂದ ಆದೇಶಕ್ಕೆ ಅಸಹಕಾರ) ಮತ್ತು 269 (ನಿರ್ಲಕ್ಷದಿಂದ ಜೀವಕ್ಕೆ ಅಪಾಯಕಾರಿ ರೋಗ ಹರಡುವ ಸಾಧ್ಯತೆ) ಅಡಿಯಲ್ಲಿ ರೆಸ್ಟೋರೆಂಟ್ ಮಾಲಿಕನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದರು.
Advertisement
Advertisement
ಘಟನೆಯ ಬಳಿಕ ಹೆಚ್ಚುತ್ತಿರುವ ಕರೋನಾ ವೈರಸನ್ನು ಗಮನದಲ್ಲಿಟ್ಟುಕೊಂಡು, ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ನಗರದಲ್ಲಿ ಕ್ರಿಸ್ಮಸ್ ಮತ್ತು ಹೊಸ ವರ್ಷವನ್ನು ಆಚರಿಸದಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆಯ ನಿದೇರ್ಶನ ನೀಡಿದೆ. ಇದನ್ನೂ ಓದಿ: ಓಮಿಕ್ರಾನ್ ರೋಗಿಗಳ ಚಿಕಿತ್ಸೆಗೆ ಕೊಟ್ಟಿದ್ದು ವಿಟಮಿನ್, ಪ್ಯಾರಾಸಿಟಮಾಲ್ ಮಾತ್ರೆ