ನವದೆಹಲಿ: ಭಾರತದ ಹವಾಮಾನ ಇಲಾಖೆ ಶನಿವಾರ ಬೆಳಗ್ಗಿನ ಹವಾಮಾನ ವರದಿಯನ್ನು ಪ್ರಕಟಿಸಿದ್ದು, ಇದು ಈ ಬಾರಿಯ ಸೀಸನ್‌ನಲ್ಲೇ ಅತೀ ಕಡಿಮೆ ಉಷ್ಣಾಂಶವನ್ನು ದಾಖಲು ಮಾಡಿದೆ ಎಂಬುದು ತಿಳಿದು ಬಂದಿದೆ. ಇಂದು ಬೆಳಗ್ಗೆ 8.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ದೆಹಲಿಯಲ್ಲಿ ಮುಂಜಾನೆ 8 ಗಂಟೆಯ ಸುಮಾರಿಗೆ ಗಾಳಿಯ ಗುಣಮಟ್ಟ (ಎಕ್ಯುಐ) 302 ಇದ್ದು, ಇದು ಅತ್ಯಂತ ಕಳಪೆ ಅಥವಾ ಉಸಿರಾಡಲು ಯೋಗ್ಯವಲ್ಲದ ವಿಭಾಗಕ್ಕೆ ಸೇರುತ್ತದೆ. ನೆರೆಯ ಫರಿದಾಬಾದ್ 266, ಗಾಜಿಯಾಬಾದ್ 262, ಗ್ರೇಟರ್ ನೋಯ್ಡಾ 224, ಗುರುಗ್ರಾಮ 288 ಮತ್ತು ನೋಯ್ಡಾ 254 ಹೀಗೆ ಕಳಪೆ ವಿಭಾಗಕ್ಕೆ ಸೇರುವ ಗಾಳಿಯ ಗುಣಮಟ್ಟವನ್ನು ಹೊಂದಿದೆ. ಇದನ್ನೂ ಓದಿ: ಯೂಟ್ಯೂಬ್‍ನಲ್ಲಿ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ ಬಾಲಿವುಡ್ ನಟಿ
Advertisement
Advertisement
ಎಕ್ಯುಐ ಪ್ರಕಾರ 0 ಇಂದ 50ರ ವರೆಗಿನ ಗಾಳಿಯ ಗುಣಮಟ್ಟವನ್ನು ಉತ್ತಮ ವಿಭಾಗಕ್ಕೆ ಸೇರಿಸಲಾಗುತ್ತದೆ. 51 ರಿಂದ 100 ವರೆಗಿನದ್ದನ್ನು ತೃಪ್ತಿದಾಯಕ ಎನ್ನಲಾಗುತ್ತದೆ. 101 ರಿಂದ 200 ವರೆಗಿನ ಮಧ್ಯಮ, 201 ರಿಂದ 300 ಕಳಪೆ, 301 ರಿಂದ 400 ಅತ್ಯಂತ ಕಳಪೆ ಹಾಗೂ ನಂತರ ಬರುವ 401 ರಿಂದ 500 ಗಾಳಿಯ ಗುಣಮಟ್ಟವನ್ನು ತೀವ್ರ ಎಂದು ಪರಿಗಣಿಸಲಾಗುತ್ತದೆ. ಇದನ್ನೂ ಓದಿ: ದಿಶಾ ಪಟಾನಿ ಹಾಟ್ ಅವತಾರಕ್ಕೆ ಟೈಗರ್ ಶ್ರಾಫ್ ಹೇಳಿದ್ದೇನು ಗೊತ್ತಾ?
Advertisement
ಶುಕ್ರವಾರ ದೆಹಲಿಯ 24 ಗಂಟೆಗಳ ಎಕ್ಯುಐ ಸರಾಸರಿ 314 ಆಗಿತ್ತು. ಇದೇ ರೀತಿಯಾಗಿ ಈ ಸೀಸನ್‌ನಲ್ಲಿ ದೆಹಲಿಯ ಅತ್ಯಂತ ಕನಿಷ್ಟ ತಾಪಮಾನ ಗುರುವಾರ ದಾಖಲಾಗಿತ್ತು. 8.4 ಡಿಗ್ರಿ ಸೆಲ್ಸಿಯಸ್ ಇತ್ತು.