ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೆಲದಿನಗಳಿಂದ ವಾಯು ಮಾಲಿನ್ಯ ಹೆಚ್ಚಳವಾಗುತ್ತಿದೆ. ಇಂದು ಬೆಳಗ್ಗೆ ದೆಹಲಿಯ ವಾಯು ಸೂಚ್ಯಂಕ ಪರೀಕ್ಷಿಸಿದಾಗ 362 ಕಂಡುಬಂದಿದೆ.
Advertisement
ದೆಹಲಿಯಲ್ಲಿ ಗಾಳಿಯ ಗುಣಮಟ್ಟದಲ್ಲಿ ತೀವ್ರ ಕುಸಿತ ಕಂಡುಬಂದಿದ್ದು, ಈ ಗಾಳಿ ಉಸಿರಾಟಕ್ಕೆ ಅನರ್ಹವಾಗಿದೆ. ಇಂದು ಬೆಳಿಗ್ಗೆ ದೆಹಲಿ ವಾಯು ಸೂಚ್ಯಂಕ 362 ಕಂಡು ಬಂದಿದೆ. ವಾಯು ಸೂಚ್ಯಂಕ 200ಕ್ಕಿಂತ ಹೆಚ್ಚು ಇದ್ದರೆ ಉಸಿರಾಡಲು ಅನರ್ಹವಾಗಿರುತ್ತದೆ. ಹಾಗಾಗಿ ಇದೀಗ ದೆಹಲಿ ಜನ ವಾಯು ಮಾಲಿನ್ಯದಿಂದಾಗಿ ಮನೆಯಿಂದ ಹೊರ ಬರದಿರುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಮಾಲಿನ್ಯ ತಡೆಗೆ ಕಠಿಣ ಕ್ರಮ ಕೈಗೊಂಡ ದೆಹಲಿ
Advertisement
Advertisement
ವಾಯು ಮಾಲಿನ್ಯ ತಡೆಗಾಗಿ ನಿನ್ನೆ ಕೇಂದ್ರ ಸರ್ಕಾರ ನೇತೃತ್ವದಲ್ಲಿ ದೆಹಲಿ ಸುತ್ತಮುತ್ತಲಿನ 4 ರಾಜ್ಯಗಳ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ವಾಯು ಗುಣಮಟ್ಟ ಆಯೋಗದ ಸೂಚನೆಯಂತೆ ದೆಹಲಿ ಹಾಗೂ ಸುತ್ತಮುತ್ತಲಿನ ವಲಯದಲ್ಲಿ ಮಾಲಿನ್ಯಕಾರಕ ಇಂಧನ ಬಳಕೆ ಉದ್ದಿಮೆಗಳು ಕಾರ್ಯ ನಿರ್ವಹಿಸಕೂಡದು ಎನ್ನಲಾಗಿದೆ. 11 ಉಷ್ಣವಿದ್ಯುತ್ ಸ್ಥಾವರಗಳ ಪೈಕಿ 5 ಮಾತ್ರ ನವೆಂಬರ್ 30 ರವರೆಗೆ ಕೆಲಸ ಮಾಡಬೇಕು. ನವೆಂಬರ್ 31 ರವರೆಗೆ ಅಗತ್ಯವಸ್ತು ಸಾಗಾಣೆ ಟ್ರಕ್ ಹೊರತುಪಡಿಸಿ ಉಳಿದ ಟ್ರಕ್‍ಗಳ ಪ್ರವೇಶ ನಿಷೇಧ ಮಾಡಲಾಗಿದೆ. ಇದನ್ನೂ ಓದಿ: ಉಗ್ರಗಾಮಿ ಕಮಾಂಡರ್ ಸೇರಿದಂತೆ ಐವರು ಉಗ್ರರು ಗುಂಡಿಗೆ ಬಲಿ
Advertisement
#Airpollution | Several trucks were stopped at the Tikri border by police, as the Delhi government on Wednesday issued an order banning the entry of all trucks (except those carrying essential commodities) coming from other states into Delhi till November 21. pic.twitter.com/NYAqxeRCF2
— ANI (@ANI) November 17, 2021
ಇದರೊಂದಿಗೆ 10 ವರ್ಷಕ್ಕಿಂತ ಹಳೆಯ ಪೆಟ್ರೋಲ್ 15 ವರ್ಷಕ್ಕಿಂತ ಹಳೆ ಡೀಸೆಲ್ ವಾಹನ ನವೆಂಬರ್ 21 ರವರೆಗೆ ಸಂಚಾರ ಮಾಡಬಾರದು. ನವೆಂಬರ್ 21 ರವರೆಗೆ ವರ್ಕ್ ಫ್ರಂ ಹೋಮ್‍ಗೆ ಆದ್ಯತೆ ಕೊಡಿ ಎಂದು ಸೂಚಿಸಿದ್ದು, ಕಚೇರಿಗಳಲ್ಲಿ ಶೇ.50ರಷ್ಟು ಸಿಬ್ಬಂದಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಇದಲ್ಲದೆ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಮುಂದಿನ ಆದೇಶದವರೆಗೆ ರಜೆ ನೀಡಲಾಗಿದೆ.