ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದೆಹಲಿಗೆ ಹೋಗುವ ವಿಚಾರದಲ್ಲಿ ಸ್ವಾರಸ್ಯಕರ ಚರ್ಚೆಯೊಂದು ನಡೆಯಿತು.
Advertisement
ಸಿದ್ದರಾಮಯ್ಯ ದೆಹಲಿ ರಾಜಕಾರಣಕ್ಕೆ ಹೋಗಬೇಕು. ಅಲ್ಲಿ ಕರ್ನಾಟಕದ ಕಹಳೆ ಮೊಳಗಿಸಬೇಕು ಎಂದು ಸಚಿವ ಮಾಧುಸ್ವಾಮಿ ಚರ್ಚೆ ಆರಂಭಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಆರ್ ಅಶೋಕ್ ಇಲ್ಲ, ಇಲ್ಲ ಸಿದ್ದರಾಮಯ್ಯ ನಮಗೆ ಇಲ್ಲಿಯೇ ಇರಬೇಕು. ನಮಗೆ ಮಾರ್ಗದರ್ಶನ ಕೊಡಬೇಕು. ಹೀಗಾಗಿ ನಾವು ಅವರನ್ನು ದೆಹಲಿಗೆ ಕಳುಹಿಸಲು ಇಷ್ಟಪಡುವುದಿಲ್ಲ ಅಂದರು. ಇದನ್ನು ಕೇಳಿಸಿಕೊಂಡ ಸಿದ್ದರಾಮಯ್ಯ ಆಶೋಕ್ ಮತ್ತು ಮಾಧುಸ್ವಾಮಿ ಇಬ್ಬರೂ ಕೂಡ ನನ್ನ ಉತ್ತಮ ಸ್ನೇಹಿತರು ಎಂದು ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದರು.
Advertisement
Advertisement
ಈ ವೇಳೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಿದ್ದರಾಮಯ್ಯ ದೆಹಲಿ ರಾಜಕಾರಣಕ್ಕೆ ತೆರಳುವ ಬಗ್ಗೆ ಈಶ್ವರಪ್ಪ ಅವರ ಅಭಿಪ್ರಾಯ ಏನು ಎಂದು ಪ್ರಶ್ನಿಸುವ ಮೂಲಕ ಅವರನ್ನು ಚರ್ಚೆಗೆ ಎಳೆದರು. ಇದಕ್ಕೆ ಸಿದ್ದರಾಮಯ್ಯ, ಅವರನ್ನು ಕೇಳಬೇಡಿ. ಇಲ್ಲೂ ಬೇಡ ಅಲ್ಲೂ ಬೇಡ ಎನ್ನುತ್ತಾರೆ ಎಂದು ಸಿದ್ದರಾಮಯ್ಯ ಹಾಸ್ಯ ಚಟಾಕಿ ಹಾರಿಸಿದರು. ಇದನ್ನೂ ಓದಿ: ರೋಹಿಣಿ ಸಿಂಧೂರಿ ವಿರುದ್ಧ ಭ್ರಷ್ಟಾಚಾರ ಆರೋಪ – ಚರ್ಚೆಗೆ ಆಗ್ರಹಿಸಿ ಸಾರಾ ಮಹೇಶ್ ಪ್ರತಿಭಟನೆ
Advertisement
ಈ ವೇಳೆ ನಿಮ್ಮ ಹೃದಯ ಮುಟ್ಟಿಕೊಂಡು ಹೇಳಿ ನಾನು ಆ ರೀತಿ ಹೇಳ್ತೀನಾ ಎಂದು ಈಶ್ವರಪ್ಪ, ಸಿದ್ದರಾಮಯ್ಯನವರಿಗೆ ಪ್ರಶ್ನೆ ಮಾಡಿದರು. ನಾನು ಆಂತರಿಕವಾಗಿಯೂ ಹೇಳಲ್ಲ. ಬಹಿರಂಗವಾಗಿಯೂ ಹೇಳಲ್ಲ ಎಂದು ಸಿದ್ದರಾಮಯ್ಯ ಮತ್ತೆ ಈಶ್ವರಪ್ಪನವರ ಕಾಲೆಳೆದರು. ಇದನ್ನು ಕೇಳಿಸಿಕೊಂಡ ಈಶ್ವರಪ್ಪ ನೋಡಿ ಇದೊಂದು ನಿಜ ಹೇಳಿದ್ದೀರಿ ಎಂದರು. ರಾಜಕಾರಣಿ ಆದ ಮೇಲೆ ಸುಳ್ಳು ಹೇಳುವ ಅನಿವಾರ್ಯತೆ ಬರುತ್ತೆ. ಹೇಳಿರಬಹುದು ಆದರೆ ಸುಳ್ಳು ಹೇಳಿಲ್ಲ ಎನ್ನುವುದು ಆತ್ಮವಂಚನೆ ಆಗುತ್ತದೆ ಎಂದು ಸಿದ್ದರಾಮಯ್ಯ ನುಡಿದರು.
ನಾನು ಸಂಸತ್ ಗೆ ಹೋಗಲು ಯೋಚನೆ ಮಾಡಿದ್ದೆ. ಎರಡು ಸಲ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಆದರೆ ಎರಡು ಸಲ ಕೂಡ ಸೋತು ಹೋದೆ. 1991 ರಲ್ಲಿ ಕೊಪ್ಪಳದಿಂದ ನಿಂತು ಸೋತೆ, ಇನ್ನೊಮ್ಮೆಯೂ ಸ್ಪರ್ಧಿಸಿ ಸೋತೆ. ಆಗಿನಿಂದ ಮತ್ತೆ ಸಂಸತ್‍ಗೆ ಹೋಗಲು ಯೋಚನೆ ಮಾಡಿಲ್ಲ ಎಂದರು. ಇದನ್ನೂ ಓದಿ: 10-14 ವಾರಗಳ ಅಂತರದಲ್ಲಿ ಕೋವಿಶೀಲ್ಡ್ ಲಸಿಕೆ ಪಡೆಯುವುದು ಉತ್ತಮ- ಅಧ್ಯಯನ ವರದಿ