ಮಹಿಳೆಯ ದೇಹವನ್ನು ಕತ್ತರಿಸಿ ಎರಡು ಬ್ಯಾಗ್‍ನಲ್ಲಿ ಎಸೆದ್ರು

Public TV
1 Min Read
POLICE JEEP 1

ನವದೆಹಲಿ: ಫ್ಲೈಓವರ್ ಒಂದರ ಬಳಿ ಮಹಿಳೆಯ (Woman) ಕತ್ತರಿಸಿದ ಅಂಗಗಳು ಪತ್ತೆಯಾಗಿದ್ದು ದೆಹಲಿ (Delhi) ಪೊಲೀಸರು (Police) ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಬುಧವಾರ ಬೆಳಿಗ್ಗೆ 9:15ರ ಸುಮಾರಿಗೆ ಸ್ಥಳೀಯರೊಬ್ಬರು ಮಹಿಳೆಯ ತುಂಡಾದ ದೇಹ ಬಿದ್ದಿರುವುದರ ಬಗ್ಗೆ ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ: ಸಬ್ ರಿಜಿಸ್ಟರ್ ವರ್ಗಾವಣೆಯಲ್ಲಿ ಸಿಂಡಿಕೇಟ್ ಹಾವಳಿ ಇಲ್ಲದಂತೆ ನಿಯಮ ಜಾರಿ: ಕೃಷ್ಣಭೈರೇಗೌಡ

ಎರಡು ಕಪ್ಪು ಪ್ಲಾಸ್ಟಿಕ್ ಚೀಲಗಳಲ್ಲಿ ಮಹಿಳೆಯ ದೇಹಗಳು ಸಿಕ್ಕಿವೆ. ಒಂದರಲ್ಲಿ ತಲೆ ಮತ್ತು ಇನ್ನೊಂದರಲ್ಲಿ ದೇಹದ ಭಾಗಗಳನ್ನು ಹಾಕಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಉದ್ದ ಕೂದಲು ಪತ್ತೆಯಾಗಿದ್ದು ಮಹಿಳೆಯ ದೇಹ ಎಂದು ಊಹಿಸಲಾಗಿದೆ. ದೇಹ ಕೊಳೆತಿದ್ದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಪರಮಾದಿತ್ಯ ಅವರು ತಿಳಿಸಿದ್ದಾರೆ.

ದೇಹದ ಗುರುತು ಇನ್ನೂ ಪತ್ತೆಯಾಗಿಲ್ಲ. ದೇಹದ ಯಾವುದಾದರೂ ಭಾಗಗಳು ಕಾಣೆಯಾಗಿದೆಯೇ ಎಂದು ಇನ್ನು ಖಚಿತವಾಗಿಲ್ಲ. ಈ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮುಂದ್ರಾಕ ಶುಲ್ಕ ಹೆಚ್ಚಳ ಇಲ್ಲ, ಜಮೀನು ಮೌಲ್ಯ ಪರಿಷ್ಕರಣೆ: ಕೃಷ್ಣಭೈರೇಗೌಡ

Web Stories

Share This Article