ದೆಹಲಿ ವಿವಿ ವಿದ್ಯಾರ್ಥಿನಿ ಎದುರು ಹಸ್ತಮೈಥುನ ಪ್ರಕರಣ: ಕಾಮುಕನ ಸುಳಿವು ಕೊಟ್ಟವರಿಗೆ ಭರ್ಜರಿ ಬಹುಮಾನ

Public TV
1 Min Read
Delhi bus 2 1 1

ನವದೆಹಲಿ: ಫೆಬ್ರವರಿ 07 ರಂದು ಚಲಿಸುತ್ತಿದ್ದ ಬಸ್ ನಲ್ಲಿ ವಿದ್ಯಾರ್ಥಿನಿಯೊಬ್ಬರ ಮುಂದೆ ಹಸ್ತ ಮೈಥುನ ಮಾಡಿಕೊಂಡ ಕಾಮುಕನ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದು, ಆರೋಪಿ ಬಗ್ಗೆ ಮಾಹಿತಿ ನೀಡುವವರಿಗೆ ಬಹುಮಾನ ಘೋಷಿಸಲಾಗಿದೆ.

ಈ ಕುರಿತು ಸಾರ್ವಜನಿಕ ಪ್ರಕಟಣೆ ನೀಡಿರುವ ಪೊಲೀಸರು, ಆರೋಪಿಯ ಫೋಟೋ ಹಾಕಿ, ಈತನ ವಿರುದ್ಧ ವಸಂತ್ ವಿಹಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಕುರಿತು ಮಾಹಿತಿ ಸಿಕ್ಕರೆ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ವಸಂತ್ ವಿಹಾರ್ ಎಸ್‍ಹೆಚ್‍ಓಗೆ ತಿಳಿಸಿ. ಈತನ ಬಗ್ಗೆ ಮಾಹಿತಿ ನೀಡಿದವರಿಗೆ 25 ಸಾವಿರ ರೂ. ಬಹುಮಾನ ನೀಡಲಾಗುತ್ತದೆ. ಹಾಗೂ ಮಾಹಿತಿ ನೀಡಿದವರ ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದ್ದಾರೆ.

Delhi bus 2 1

ಏನಿದು ಪ್ರಕರಣ: ಫೆಬ್ರವರಿ 7 ರಂದು ವಸಂತ್ ವಿಹಾರ್ ಮತ್ತು ಐಐಟಿ ಗೇಟ್ ನಡುವೆ ಚಲಿಸುತ್ತಿದ್ದ ಬಸ್ ನಲ್ಲಿ ದೆಹಲಿ ವಿವಿ ಯ ವಿದ್ಯಾರ್ಥಿನಿ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿ ಆಕೆಯ ಸೊಂಟವನ್ನು ಪದೇ ಪದೇ ಸ್ಪರ್ಶಿಸಲು ಯತ್ನಿಸಿದ್ದ. ಅಷ್ಟೇ ಅಲ್ಲದೇ ಆರೋಪಿ ಕಾಮುಕ ವಿದ್ಯಾರ್ಥಿನಿ ಮುಂದೆಯೇ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ. ವಿದ್ಯಾರ್ಥಿನಿ ಆರೋಪಿಯ ಕೃತ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರು.

Delhi bus 1

ಈ ಕುರಿತು ಮಾಧ್ಯಮದ ಜೊತೆ ಮಾತನಾಡಿದ್ದ ವಿದ್ಯಾರ್ಥಿನಿ, ತಾನು ಸಂಜೆ 7 ಗಂಟೆ ವೇಳೆ ಬಸ್ಸಿನಲ್ಲಿ ಪ್ರಯಾಣಿಸುವ ವೇಳೆ ಬಹಳಷ್ಟು ಪ್ರಯಾಣಿಕರಿದ್ದರು. ಆದರೆ ಈ ವೇಳೆ ನನ್ನ ಪಕ್ಕ ಕುಳಿತ್ತಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಅಸಭ್ಯವಾಗಿ ವರ್ತಿಸಲು ಆರಂಭಿಸಿದ. ಇದನ್ನು ಕಂಡು ಕ್ಷಣ ಕಾಲ ವಿಚಲಿತಳಾದೆ. ಆದರೆ ಮರುಕ್ಷಣದಲ್ಲಿ ಆತನ ಕೃತ್ಯವನ್ನು ನನ್ನ ಮೊಬೈಲ್ ನಲ್ಲಿ ಸೆರೆಹಿಡಿದೆ. ನಂತರ ಸಮಾಜದಲ್ಲಿ ಇಂತಹ ಘಟನೆಗಳ ಕುರಿತು ಅರಿವು ಮೂಡಿಸಲು ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾಗಿ ತಿಳಿಸಿದ್ದರು.

ವಿದ್ಯಾರ್ಥಿನಿ ನೀಡಿದ ದೂರಿನ ಅನ್ವಯ ದೆಹಲಿಯ ವಸಂತ್ ವಿಹಾರ್ ಪೊಲೀಸರು ಐಪಿಸಿ ಸೆಕ್ಸನ್ 354(ಲೈಂಗಿಕ ಕಿರುಕುಳ), 354ಎ ಹಾಗೂ 294 (ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲತೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *