ನವದೆಹಲಿ: ರಾಜಧಾನಿಯಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಐವರು ಬಾಂಗ್ಲಾದೇಶದ ನುಸುಳುಕೋರರನ್ನು ದೆಹಲಿ (Delhi) ಪೊಲೀಸರು ಬಂಧಿಸಿದ್ದಾರೆ.
ಸದರ್ ಬಜಾರ್ ಪ್ರದೇಶದಲ್ಲಿದ್ದ ಇಬ್ಬರು ಬಾಂಗ್ಲಾದೇಶಿಗಳು ಹಾಗೂ ಹೊರ ಜಿಲ್ಲೆಯಲ್ಲಿದ್ದ ಮೂವರನ್ನು ಬಂಧಿಸಲಾಗಿದೆ. ಐವರು ಬಾಂಗ್ಲಾದೇಶಿಗಳು ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದರು. ಅವರ ದಾಖಲೆಗಳನ್ನು ಸಹ ಪರಿಶೀಲನೆ ಮಾಡಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಆಮದು ಸುಂಕ ಕಡಿತದ ಬಗ್ಗೆ ಯಾವುದೇ ಭರವಸೆ ನೀಡಿಲ್ಲ – ಭಾರತದ ಸ್ಪಷ್ಟನೆ
ಮಾ.8ರಂದು, ದೆಹಲಿ ಪೊಲೀಸರು ವಸಂತ್ ಕುಂಜ್ ಪ್ರದೇಶದ ಜೈ ಹಿಂದಿ ಕ್ಯಾಂಪ್‌ನಲ್ಲಿ ಅಕ್ರಮ ವಲಸಿಗರ ವಿರುದ್ಧ ಪರಿಶೀಲನಾ ಅಭಿಯಾನ ನಡೆಸಿದರು. ಪರಿಶೀಲನಾ ಪ್ರಕ್ರಿಯೆಯ ಸಮಯದಲ್ಲಿ, ಪರಿಶೀಲನೆಗಾಗಿ ಜನರಿಂದ ಅವರ ಗುರುತಿನ ಚೀಟಿಗಳನ್ನು ಕೇಳಲಾಗುತ್ತದೆ. ಅವರ ಎಲ್ಲಾ ವಿವರಗಳನ್ನು ಪರಿಶೀಲಿಸಲಾಗುತ್ತದೆ. ಯಾರಾದರೂ ಅನುಮಾನಾಸ್ಪದವಾಗಿ ಕಂಡುಬಂದರೆ, ಅವರ ಗುರುತಿನ ಚೀಟಿಗಳನ್ನು ಪರಿಶೀಲನೆಗಾಗಿ ಸಂಬಂಧಪಟ್ಟ ಜಿಲ್ಲೆಗಳಿಗೆ ಕಳುಹಿಸಲಾಗುತ್ತದೆ ಎಂದು ಸಬ್‌ಇನ್ಸ್‌ಪೆಕ್ಟರ್ ರವಿ ಮಲಿಕ್ ತಿಳಿಸಿದ್ದಾರೆ. ಇದನ್ನೂ ಓದಿ: ಡೆವಿಲ್ ಚಿತ್ರೀಕರಣ ಶುರುವಾಗೋ ಹೊತ್ತಲ್ಲೇ ಆಪ್ತರನ್ನ ಇನ್‌ಸ್ಟಾದಿಂದ ಅನ್‌ಫಾಲೋ ಮಾಡಿದ ʻದಾಸʼ
ಮಾ. 6ರಂದು, ಸಂಗಮ್ ವಿಹಾರ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಗುರುತಿಸಲು ದೆಹಲಿ ಪೊಲೀಸರು ಪರಿಶೀಲನಾ ಅಭಿಯಾನವನ್ನು ಸಹ ನಡೆಸಿದ್ದರು. ಈ ವರ್ಷದ ಜನವರಿಯಲ್ಲಿ, ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ದೆಹಲಿಯಲ್ಲಿ ವಾಸಿಸುತ್ತಿರುವ ಬಾಂಗ್ಲಾದೇಶಿ ವಲಸಿಗರನ್ನು ಗುರುತಿಸಲು ವಿಶೇಷ ಕಾರ್ಯಾಚರಣೆಯನ್ನು ಪ್ರಾರಂಭಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದರು. ಇದನ್ನೂ ಓದಿ: ನಗರಸಭೆ ವ್ಯಾಪ್ತಿಯಲ್ಲಿ ಪ್ರಸ್ತಾವನೆ ಬಂದ್ರೆ ಮಧ್ಯರಾತ್ರಿವರೆಗೂ ವ್ಯಾಪಾರಕ್ಕೆ ಅವಕಾಶ- ಭೈರತಿ ಸುರೇಶ್
ದೆಹಲಿ ಪೊಲೀಸರು ಉನ್ನತ ಅಧಿಕಾರಿಗಳ ಸಭೆಯಲ್ಲಿ, ದೇಶದಲ್ಲಿ ಅಕ್ರಮವಾಗಿ ನೆಲೆಸಿರುವವರ ವಿರುದ್ಧದ ಕಾರ್ಯಾಚರಣೆಯ ಸಲುವಾಗಿ ಬಾಂಗ್ಲಾದೇಶಿ ಅಕ್ರಮ ವಲಸಿಗರನ್ನು ಗುರುತಿಸಿ ಗಡಿಪಾರು ಮಾಡುವ ಕಾರ್ಯವನ್ನು ತೀವ್ರಗೊಳಿಸಲು ನಿರ್ಧರಿಸಲಾಯಿತು. ಇದನ್ನೂ ಓದಿ: ಗುಡ್ ಫ್ರೈಡೆ ದಿನ ನಿಗಿದಿಯಾಗಿರೋ ಸಿಇಟಿ ಪರೀಕ್ಷೆ ಮುಂದೂಡಿ: ಐವಾನ್ ಡಿಸೋಜಾ
ಉದ್ಯೋಗಿಗಳು/ಗೃಹ ಸಹಾಯಕರು ಮತ್ತು ಕಟ್ಟಡ ಕಾರ್ಮಿಕರನ್ನು ಪರಿಶೀಲಿಸುವ ಕುರಿತು ಸಾರ್ವಜನಿಕ ಜಾಗೃತಿ ಮೂಡಿಸಲು ಮುದ್ರಣ ಮತ್ತು ಸೋಷಿಯಲ್ ಮೀಡಿಯಾಗಳ ಮೂಲಕ ಸಂಪರ್ಕ ಕಾರ್ಯಕ್ರಮವನ್ನು ಪ್ರಾರಂಭಿಸಲು ಇನ್ಸ್‌ಪೆಕ್ಟರ್ ಜನರಲ್ ಅವರು ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿದ್ದರು. ಇದನ್ನೂ ಓದಿ: Bengaluru | ಬೇಸಿಗೆಯ ತಾಪಕ್ಕೆ ತಂಪೆರಿದ ವರುಣ – ಬೆಂಗಳೂರಿನ ಹಲವೆಡೆ ಮಳೆಯ ಸಿಂಚನ
ಫೆಬ್ರವರಿಯಲ್ಲಿ, ದೆಹಲಿ ಪೊಲೀಸರು ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಶಂಕಿತ 16 ಜನರನ್ನು ಬಂಧಿಸಿದ್ದರು. ವೀಸಾ ಇಲ್ಲದೆ ಈ ಜನರು ಭಾರತದಲ್ಲಿ ಅವಧಿ ಮೀರಿ ನೆಲೆಸಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತರನ್ನು ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿ ಮುಂದೆ ಹಾಜರುಪಡಿಸಲಾಗಿದ್ದು, ಗಡೀಪಾರು ಮಾಡವಂತೆ ಆದೇಶ ನೀಡಿದ್ದಾರೆ.