ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi), ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರನ್ನು ಕೊಲ್ಲುವುದಾಗಿ ಬೆದರಿಕೆ ಕರೆ ಮಾಡಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ದೆಹಲಿ ಮೂಲದ ಬಡಗಿ. ಪಶ್ಚಿಮ ವಿಹಾರ್‌ನ ಮದಿಪುರ ನಿವಾಸಿ ಸುಧೀರ್ ಶರ್ಮಾ (37) ಎಂದು ಗುರುತಿಸಲಾಗಿದೆ. ನಾವು ಆತನನ್ನು ವಶಕ್ಕೆ ತೆಗೆದುಕೊಂಡಿದ್ದೇವೆ ಎಂದು ಡಿಸಿಪಿ ಹರೇಂದ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ. ಆತ ಮದ್ಯವ್ಯಸನಿ. ಆರೋಪಿಯು ಅಮಲೇರಿದ ಸ್ಥಿತಿಯಲ್ಲಿ ಕರೆ ಮಾಡಿದ್ದಾನೆ ಎನ್ನುವುದು ತನಿಖೆ ವೇಳೆ ಗೊತ್ತಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಮೋದಿ ‘ಯೋಗ’ – ಗಿನ್ನಿಸ್ ದಾಖಲೆ ಬರೆದ ವಿಶ್ವಸಂಸ್ಥೆ ಕೇಂದ್ರ ಕಚೇರಿ
Advertisement
Advertisement
ಏನಿದು ಪ್ರಕರಣ?
ಪೊಲೀಸರಿಗೆ ಎರಡು ಪಿಸಿಆರ್ ಕರೆಗಳು ಬಂದಿದ್ದವು. ಕರೆ ಮಾಡಿದಾತ, ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಬಿಹಾರ ಸಿಎಂ ಕೊಲೆ ಮಾಡ್ತೀನಿ ಎಂದು ಬೆದರಿಕೆ ಹಾಕಿದ್ದ. ಬೆಳಗ್ಗೆ 10:46ಕ್ಕೆ ಒಂದು ಕರೆ ಮಾಡಿದ್ದ. ಅದರಲ್ಲಿ ದೇಶದ ಮೂವರು ವಿವಿಐಪಿಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಅದಾದ ಎಂಟು ನಿಮಿಷಗಳ ನಂತರ, 10:54 ಕ್ಕೆ ಮತ್ತೊಂದು ಕರೆ ಬಂದಿತ್ತು. ಆಗಲೂ ಅದೇ ಬೆದರಿಕೆ ಹಾಕಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಆರೋಪಿ ಶರ್ಮಾ ಕುಟುಂಬ ಸದಸ್ಯರು, ಆತ ಕುಡುಕ. ಕುಡಿದ ಮತ್ತಿನಲ್ಲಿ ಕೆಲವೊಮ್ಮೆ ಅತಿರೇಕವಾಗಿ ವರ್ತಿಸುತ್ತಾನೆ ಎಂದು ಪೊಲೀಸರಿಗೆ ತಿಳಿಸಿದ್ದರು. ಇದನ್ನೂ ಓದಿ: ಲಿಂಗ ಬದಲಾವಣೆ ನೆಪದಲ್ಲಿ ತಂತ್ರಿಯಿಂದ ಸಲಿಂಗಕಾಮಿ ಮಹಿಳೆ ಹತ್ಯೆ