ನವದೆಹಲಿ: ಇನ್ಸ್ಟಾಗ್ರಾಮ್ (Instagram) ಮೂಲಕ ಸ್ನೇಹ ಬೆಳೆಸಿ ನಂತರ ಅವರ ಖಾಸಗಿ ಫೋಟೋಗಳನ್ನು ಬಹಿರಂಗಪಡಿಸುವುದಾಗಿ ಹುಡುಗಿಯರಿಗೆ ಬ್ಲ್ಯಾಕ್‌ಮೇಲ್ (BlackMail) ಮಾಡುತ್ತಿದ್ದ 17 ವರ್ಷದ ಹುಡುಗನನ್ನು ದೆಹಲಿ ಪೊಲೀಸರು (Delhi Police) ಬಂಧಿಸಿದ್ದಾರೆ.
14 ವರ್ಷದ ಬಾಲಕಿ ತಾನು ಬೇರೆ ಹುಡುಗನೊಂದಿಗೆ ಹಂಚಿಕೊಂಡಿರುವ ಫೋಟೋ (Private Photos) ಮತ್ತು ವೀಡಿಯೋಗಳು ಲೀಕ್ ಆಗಬಹುದು ಎಂಬ ಭಯದಿಂದ ತನ್ನ ತಂದೆಗೆ ವಿಷಯ ತಿಳಿಸಿದ್ದಾಳೆ. ನಂತರ ಬಾಲಕಿಯ ತಂದೆ ಉತ್ತರ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ವೃದ್ಧ ಮಹಿಳೆಯರನ್ನೇ ರೇಪ್ ಮಾಡಿ, ಕೊಲೆ ಮಾಡ್ತಿದ್ದ 20ರ ಯುವಕ- ಸೈಕೋ ಕಿಲ್ಲರ್ ಅರೆಸ್ಟ್
Advertisement
Advertisement
ಇನ್ಸ್ಟಾಗ್ರಾಮ್ ಪ್ರೊಫೈಲ್ ವಿವರಗಳನ್ನು ಪಡೆದ ನಂತರ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ನಂತರ ಆರೋಪಿಯ ಗುರುತು ಪತ್ತೆ ಹಚ್ಚಲು ಐಪಿ ವಿಳಾಸ ಹಾಗೂ ಮೊಬೈಲ್ ನಂಬರ್ ಟ್ರೇಸ್ ಮಾಡಿದ್ದಾರೆ. ಇದನ್ನೂ ಓದಿ: ಭವಾನಿಯವರಿಗೆ ಬಿಜೆಪಿ ಸೇರಲು ಆಹ್ವಾನಿಸಿದ್ದು ತಮಾಷೆಗೆ; ಅವರಿಗೆ ಹಾಸನ ಸುರಕ್ಷಿತ ಅಲ್ಲ – ಸಿ.ಟಿ.ರವಿ
Advertisement
Advertisement
ಆರೋಪಿಯನ್ನು ಗುರುತಿಸಿದ ನಂತರ ಪೊಲೀಸರು ಆತನ ಮನೆಗೆ ತಲುಪಿದ್ದರು. ಅಷ್ಟರಲ್ಲಿ ಹುಡುಗ ಮನೆಯಿಂದ ಎಸ್ಕೇಪ್ ಆಗಿದ್ದ. ಇದರಿಂದ ಪೊಲೀಸರು ತಮ್ಮ ಮಗನನ್ನು ಠಾಣೆಗೆ ಹಾಜರುಪಡಿಸುವಂತೆ ತಂದೆಗೆ ಸೂಚಿಸಿದ್ದರು. ನಂತರ ಏನೂ ಗೊತ್ತಿಲ್ಲದವನಂತೆ ಮಗ ಮನೆಗೆ ಬರುತ್ತಿದ್ದಂತೆ ತಂದೆಯೇ ಆತನನ್ನು ಹಿಡಿದು ಪೊಲೀಸರ ಮುಂದೆ ಹಾಜರುಪಡಿಸಿದ್ದಾರೆ. ನಂತರ ಆತನನ್ನು ಬಂಧಿಸಲಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k