ನವದೆಹಲಿ: ದೆಹಲಿ ಪಾಲಿಕೆ ಚುನಾವಣೆಯಲ್ಲಿ ಈ ಬಾರಿ ಅಪ್(AAP) ಗೆಲ್ಲಲ್ಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು(Delhi MCD Election Exit Pol) ಭವಿಷ್ಯ ನುಡಿದಿವೆ.
ಇಂಡಿಯಾ ಟುಡೇ ಸಮೀಕ್ಷೆ ಆಪ್ 149-171, ಬಿಜೆಪಿ 69-91, ಕಾಂಗ್ರೆಸ್ 3-7, ಇತರರು 5-9 ಸ್ಥಾನ ಗೆಲ್ಲಬಹುದು ಎಂದು ಹೇಳಿದೆ. ಇದನ್ನೂ ಓದಿ: ಜೋಡೋ ಯಾತ್ರೆ ವೇಳೆ ಮೋದಿ ಪರ ಘೋಷ – ತಲೆಕೆಡಿಸಿಕೊಳ್ಳದೇ ಗಾಳಿಯಲ್ಲಿ ಮುತ್ತು ತೇಲಿಸಿದ ರಾಗಾ
Advertisement
Advertisement
ಟೈಮ್ಸ್ ನೌ ಸಮೀಕ್ಷೆ ಆಪ್ 146-156, ಬಿಜೆಪಿ 84-94, ಕಾಂಗ್ರೆಸ್ 6-10, ಇತರರು 0-4 ಸ್ಥಾನ ಗಳಿಸಬಹುದು ಎಂದು ಭವಿಷ್ಯ ನುಡಿದಿದೆ. ಒಟ್ಟು 250 ವಾರ್ಡ್‌ಗಳಿದ್ದು ಅಧಿಕಾರ ಹಿಡಿಯಲು 126 ವಾರ್ಡ್ ಗೆಲ್ಲಬೇಕು.
Advertisement
2007 ರಿಂದ ಬಿಜೆಪಿ(BJP) ಪಾಲಿಕೆಯ ಅಧಿಕಾರದಲ್ಲಿದೆ. ಆದರೆ ಈ ಬಾರಿ ರಾಜ್ಯದ ಅಧಿಕಾರ ಹಿಡಿದಿರುವ ಆಪ್ ಪಾಲಿಕೆ ಚುನಾವಣೆಯಲ್ಲೂ ಮೊದಲ ಬಾರಿಗೆ ಕಮಾಲ್ ಮಾಡಿ ʼಕಮಲʼವನ್ನು ಗುಡಿಸಿ ಹಾಕಲಿದೆ ಎಂದು ಚುನಾವಣೋತ್ತರ ಸಮೀಕ್ಷೆ ತಿಳಿಸಿವೆ.
Advertisement
ಡಿಸೆಂಬರ್ 4 ರಂದು ಚುನಾವಣೆ ನಡೆದಿದ್ದು ಬುಧವಾರ ಮತ ಎಣಿಕೆ ನಡೆಯಲಿದೆ.