ನವದೆಹಲಿ: ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ(MCD Election Results) ಆಮ್ ಆದ್ಮಿ ಪಕ್ಷ ಬಹುಮತ ಪಡೆದಿದ್ದರೂ ಮೇಯರ್(Mayor) ಸ್ಥಾನ ಬಿಜೆಪಿಗೆ ಸಿಗುತ್ತಾ ಎಂಬ ಪ್ರಶ್ನೆ ಎದ್ದಿದೆ.
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ(BJP’s IT department head Amit Malviya) ಅವರ ಹೇಳಿಕೆಯಿಂದ ಈ ಪ್ರಶ್ನೆ ಎದ್ದಿದೆ. ಚಂಡೀಗಢದಲ್ಲಿ ಬಿಜೆಪಿ ಬಹುಮತ ಪಡೆಯದಿದ್ದರೂ ಕೂಡಾ ಮೇಯರ್ ಬಿಜೆಪಿಯವರಾಗಿದ್ದಾರೆ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಇದನ್ನೂ ಓದಿ: ಗುಜರಾತ್‌ನಲ್ಲಿ ಬಿಜೆಪಿಗೆ ಭಾರೀ ಮುನ್ನಡೆ
Advertisement
Now over to electing a Mayor for Delhi…
It will all depend on who can hold the numbers in a close contest, which way the nominated councillors vote etc.
Chandigarh has a BJP Mayor, for instance.
— Amit Malviya (@amitmalviya) December 7, 2022
Advertisement
ದೆಹಲಿ ಮೇಯರ್ ಚುನಾವಣೆಗೆ ಪಾಲಿಕೆಯ 250 ಸದಸ್ಯರ ಜೊತೆಗೆ ದೆಹಲಿ ವ್ಯಾಪ್ತಿಯ ಲೋಕಸಭೆ, ರಾಜ್ಯಸಭಾ ಸದಸ್ಯರು, ವಿಧಾನಸಭೆಯಿಂದ ಸ್ಪೀಕರ್ ಮೂಲಕ ಪಾಲಿಕೆಗೆ ನಾಮನಿರ್ದೇಶನವಾಗುವ ಸದಸ್ಯರು (ಒಟ್ಟು ಸದಸ್ಯರ ಪೈಕಿ ಶೇ.20ರಷ್ಟು), ವಿವಿಧ ಮುನ್ಸಿಪಲ್ ಸಮಿತಿ ಸದಸ್ಯರು, ಲೆಫ್ಟಿನೆಂಟ್ ಗವರ್ನರ್ ನಾಮನಿರ್ದೇಶನ ಮಾಡುವ 10 ಸದಸ್ಯರು ಕೂಡಾ ಮತದಾನದ ಹಕ್ಕು ಹೊಂದಿರುತ್ತಾರೆ. ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಬಿಜೆಪಿ, ಕಾಂಗ್ರೆಸ್ ಮಧ್ಯೆ ನೆಕ್ ಟು ನೆಕ್ ಸ್ಪರ್ಧೆ
Advertisement
Advertisement
ಇಷ್ಟೇ ಅಲ್ಲದೇ ಯಾವುದೇ ಪಕ್ಷದ ಸದಸ್ಯರು ಬೇರೆ ಪಕ್ಷದ ಅಭ್ಯರ್ಥಿಗೆ ಮತ ಹಾಕಿದ್ದರೂ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುವುದಿಲ್ಲ. ಹೀಗಾಗಿ ಮೇಯರ್ ಕುರಿತ ಬಿಜೆಪಿ ನಾಯಕರ ಹೇಳಿಕೆ ಕುತೂಹಲ ಕೆರಳಿಸಿದೆ.
ಹೊಸದಾಗಿ ಗೆದ್ದಿರುವ ಆಮ್ ಅದ್ಮಿ ಪಕ್ಷದ ಕೌನ್ಸಿಲರ್‌ಗಳನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಗಂಭೀರ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಮೇಯರ್ ಚುನಾವಣೆ ಕುತೂಹಲ ಮೂಡಿಸಿದೆ.