ನವದೆಹಲಿ: ಹೆಚ್ಚುವರಿಯಾಗಿ ಮೋಮೊ ಸಾಸ್ (Red Sauce) ಕೇಳಿದ್ದಕ್ಕೆ ಗ್ರಾಹಕನ ಮುಖಕ್ಕೆ ಚಾಕುವಿನಿಂದ ಇರಿದ ಘಟನೆ ಶಹದಾರದ ಫಾರ್ಶ್ ಬಜಾರ್ ಪ್ರದೇಶದಲ್ಲಿ ನಡೆದಿದೆ.
ಗಾಯಾಳು ವ್ಯಕ್ತಿಯನ್ನು 34 ವರ್ಷದ ಸಂದೀಪ್ ಎಂದು ಗುರುತಿಸಲಾಗಿದೆ. ಸದ್ಯ ಸಂದೀಪ್ ಮುಖಕ್ಕೆ ಗಂಭೀರ ಗಾಯಗಳಾಗಿದ್ದರಿಂದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
Advertisement
Advertisement
ಹೆಚ್ಚಿನ ಕೆಂಪು ಸಾಸ್ ಕೇಳಿದಾಗ ವಾದ ವಿವಾದದಲ್ಲಿ ಮೋಮೊಸ್ (Momo) ಮಾರಾಟಗಾರರಿಂದ ಮುಖಕ್ಕೆ ಇರಿದ 34 ವರ್ಷದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
Advertisement
ನಡೆದಿದ್ದೇನು..?: ಸಂದೀಪ್ ಅವರು ಸಂಜೆ ರಸ್ತೆಬದಿ ಮಾರುತ್ತಿರುವ ಗಾಡಿಯಿಂದ ಮೋಮೊಗಳನ್ನು ಖರೀದಿಸಲು ಹೋಗಿದ್ದರು. ಹೀಗೆ ಮೋಮೊಸ್ ಖರೀದಿಸಿದ ಬಳಿಕ ಗಾಡಿ ಮಾಲೀಕ ವಿಕಾಸ್ (22) ಬಳಿ ಹೆಚ್ಚಿನ ರೆಡ್ ಸಾಸ್ ನೀಡುವಂತೆ ಕೇಳಿದ್ದಾನೆ. ಆದರೆ ಆತ ಕಡಿಮೆ ಇದೆ ಎಂದು ಹೇಳಿ ಕೊಡಲು ನಿರಾಕರಿಸಿದ್ದಾನೆ. ಇದನ್ನೂ ಓದಿ: ಅಣ್ಣಾಮಲೈ ವಿರುದ್ಧ ಎಫ್‍ಐಆರ್ ದಾಖಲು
Advertisement
ಇದಾದ ಕೆಲವೇ ದಿನಗಳಲ್ಲಿ ಇಬ್ಬರ ನಡುವೆ ವಾಗ್ವಾದ ನಡೆಯಿತು. ಮಾತಿಗೆ ಮಾತು ಬೆಳೆದು ವಿಕಾಸ್, ಗ್ರಾಹಕ ಸಂದೀಪ್ ಮುಖಕ್ಕೆ ಎರಡು ಬಾರಿ ಇರಿದು ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಕೊಲೆ ಯತ್ನದಡಿ ಗಾಡಿ ಮಾಲೀಕ ವಿಕಾಸ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಪರಾರಿಯಾಗಿರುವ ವಿಕಾಸ್‌ಗಾಗಿ ಪೊಲೀಸರು ಬಲೆ ಬೀಸಿದ್ದು, ಮರುದಿನ ಬೆಳಗ್ಗೆ ಫರ್ಶ್ ಬಜಾರ್ ಪ್ರದೇಶದಿಂದ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಗಾಯಾಳು ಸಂದೀಪ್, ಶಹದಾರದ ಭೋಲಾನಾಥ್ ನಗರದಲ್ಲಿ ಸಣ್ಣ ಮೊಬೈಲ್ ಚಾರ್ಜರ್ ತಯಾರಿಕಾ ಘಟಕವನ್ನು ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.