ನವದೆಹಲಿ: ವಿಚ್ಛೇದನದ (Divorce) ಬಳಿಕ ಪತ್ನಿಗೆ ಜೀವನಾಂಶ (Alimony) ನೀಡಲು ಹಣವಿಲ್ಲದೇ ವೃದ್ಧೆಯೊಬ್ಬರ ಮನೆಯಲ್ಲಿ ದರೋಡೆಗೆ ಯತ್ನಿಸಿದ್ದ ಪತಿ ಹಾಗೂ ಆತನ ಸಹಚರರನ್ನು ದೆಹಲಿ (Delhi) ಪೊಲೀಸರು ಬಂಧಿಸಿದ್ದಾರೆ.
ಮಾ.31 ರಂದು ದೆಹಲಿಯ ಪಿತಾಂಪುರ ಪ್ರದೇಶದಲ್ಲಿ ವ್ಯಕ್ತಿಯೊಬ್ಬ, ಕೊರಿಯರ್ ಇದೆ ಎಂದು ಹೇಳಿಕೊಂಡು ಮನೆಯಲ್ಲಿದ್ದ ವೃದ್ಧೆಗೆ ಬಂದೂಕು ತೋರಿಸಿ ದರೋಡೆಗೆ ಯತ್ನಿಸಿದ್ದ. ಈ ವೇಳೆ ಇನ್ನೊಬ್ಬ ವ್ಯಕ್ತಿಯೂ ಗನ್ ಹಿಡಿದು ಬಂದಿದ್ದಾನೆ. ಇದನ್ನು ಕಂಡ ಆಕೆಯ ಮಗಳು ಓಡಿಹೋಗಿ ಮನೆಯ ಬಾಗಿಲನ್ನು ಲಾಕ್ ಮಾಡಿದ್ದಳು. ಬಳಿಕ ಮತ್ತೋರ್ವ ಸಹೋಚರನ ಜೊತೆ ಆರೋಪಿಗಳು ಬೈಕ್‌ನಲ್ಲಿ ಪರಾರಿಯಾಗಿದ್ದರು. ಇದನ್ನೂ ಓದಿ: Bengaluru | ಕುಟುಂಬ ಕಲಹದಿಂದ ಮಾನಸಿಕವಾಗಿ ನೊಂದು ಟೆಕ್ಕಿ ಆತ್ಮಹತ್ಯೆ
ಈ ಬಗ್ಗೆ ಸಮೀಪದ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಲಾಗಿತ್ತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ, ವೃದ್ಧೆ ಕಮಲೇಶ್ ಅರೋರಾ (72), ದೂರುದಾರ ಹೇಮಂತ್ ಕುಮಾರ್ ಅವರ ಪತ್ನಿ ಘಟನೆಯನ್ನು ವಿವರಿಸಿದ್ದರು. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸರು ಸಿಸಿಟಿವಿ ದೃಶ್ಯಾವಳಿ, ಗುಪ್ತಚರ ಮಾಹಿತಿ ಸಂಗ್ರಹಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಪಂಕಜ್ (25) ಮತ್ತು ನಿವಾಸಿ ರಾಮ ಸ್ವಾಮಿ (28) ಹಾಗೂ ಹರ್ಷ ಎಂದು ಗುರುತಿಸಲಾಗಿದೆ. ಪಂಕಜ್ ತನ್ನ ವಿಚ್ಛೇದನದ ನಂತರ ಜೀವನಾಂಶ ನೀಡಲು ಹಣ ಹೊಂದಿಸಲು ದರೊಡೆಗೆ ಮುಂದಾಗಿದ್ದಾಗಿ ಒಪ್ಪಿಕೊಂಡಿದ್ದಾನೆ.
ಬಂಧಿತ ಆರೋಪಿಗಳಿಂದ ಪೊಲೀಸರು ಒಂದು ಬೈಕ್, ದೇಶಿ ನಿರ್ಮಿತ ಪಿಸ್ತೂಲ್, ಒಂದು ಬ್ಯಾಗ್ ಮತ್ತು ಕೃತ್ಯದ ವೇಳೆ ಧರಿಸಿದ್ದ ಬಟ್ಟೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಅತಿಥಿ ಶಿಕ್ಷಕನಿಂದ ಅತ್ಯಾಚಾರ