ಕುವೆಂಪು ನಾಡಗೀತೆಯಲ್ಲೇ `ಏಕ್ ಭಾರತ್ ಶ್ರೇಷ್ಠ ಭಾರತ್’ ಪರಿಕಲ್ಪನೆಯಿದೆ – ಮೋದಿ ಕನ್ನಡ ಗುಣಗಾನ

Public TV
3 Min Read
Narendra Modi 4

ನವದೆಹಲಿ: `ದೆಹಲಿ ಕರ್ನಾಟಕ ಸಂಘ’ದ (Delhi Karnataka Sangha) 75ನೇ ವಾರ್ಷಿಕೋತ್ಸವಕ್ಕೆ ಇಲ್ಲಿನ ತಲಕ್‌ಟೋರಾ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಶನಿವಾರ ಚಾಲನೆ ನೀಡಿದರು.

ಬಳಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ದೆಹಲಿ ಕರ್ನಾಟಕ ಸಂಘ `ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ಕನ್ನಡವಾಗಿರು’ ಎಂಬ ಆಶಯದಲ್ಲಿ ಕೆಲಸ ಮಾಡುತ್ತಿದೆ. ದೇಶ ಅಮೃತ ಮಹೋತ್ಸವ ಆಚರಿಸುವಾಗ ಕರ್ನಾಟಕ ಸಂಘ ಕೂಡಾ ತನ್ನ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಸಂತಸದ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: BJP ಕಚೇರಿಗೆ ತೆರಳುತ್ತಿದ್ದ ಕೇಂದ್ರ ಸಚಿವರ ಬೆಂಗಾವಲು ವಾಹನಕ್ಕೆ ಕಲ್ಲು ತೂರಾಟ – ಪರಿಸ್ಥಿತಿ ಉದ್ವಿಗ್ನ

ಈ ಸಂಘದ ಕನಸು ಕಂಡು ಅದನ್ನು ಸಹಕಾರಗೊಳಿಸಿದ ಗಣ್ಯರಿಗೆ ನಾನು ಗೌರವ ಸಲ್ಲಿಸುತ್ತೇನೆ. 75 ವರ್ಷ ಸುಮ್ಮನೆ ಆಗುವುದಿಲ್ಲ, ಸಾಕಷ್ಟು ಏಳುಬೀಳು ಕಂಡಿರುತ್ತದೆ. ಎಲ್ಲ ಹಂತದಲ್ಲಿ ಸಂಘದ ಅಭಿವೃದ್ಧಿಗೆ ಕೈ ಜೋಡಿಸಿದವರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಕರ್ನಾಟಕ ಇಲ್ಲದೇ ಭಾರತ ಎಂದು ಕರೆಯಲು ಸಾಧ್ಯವಿಲ್ಲ. ಏಕೆಂದರೆ ಕರ್ನಾಟಕ ಹನುಮನ ಜನ್ಮಸ್ಥಳ. ಹನುಮ ಇಲ್ಲದೆ ರಾಮ ಇಲ್ಲ, ರಾಮ ಇಲ್ಲದೇ `ರಾಮಯಣ’ ಇಲ್ಲ ಎಂದು ಹಾಡಿಹೊಗಳಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಬಿಜೆಪಿಗೆ ವೋಟ್ ಹಾಕ್ತಾ ಇರಿ, ಪ್ರತಿ ವರ್ಷ ಸೈಟ್ ಕೊಡ್ತೀವಿ – ವಿ.ಸೋಮಣ್ಣ

Kannada Delhi Programme

ದೇವರ ದಾಸಿಮಯ್ಯರಂತಹ ಸಂತರು ದೇಶವನ್ನು ಜೋಡಿಸುವ ಕೆಲಸ ಮಾಡಿದ್ದಾರೆ. ಇಷ್ಟ ಲಿಂಗದ ಮೂಲಕ ದೇಶವನ್ನ ಬಸವಣ್ಣ ಜೋಡಿಸಿದ್ದಾರೆ. ರಾಣಿ ಅಬ್ಬಕ್ಕ, ಓಬವ್ವ, ಸಂಗೊಳ್ಳಿ ರಾಯಣ್ಣನಂತಹ ವೀರ ವಿರೋಧಿಗಳ ಮುಂದೆ ಗೋಡೆಯಂತೆ ನಿಲ್ಲುತ್ತಾರೆ. ಈ ಮೂಲಕ ಕರ್ನಾಟಕ ಭಾರತವನ್ನು ಪ್ರೇರೇಪಣೆಗೊಳಿಸಿದೆ. ಆದ್ರೆ ಕೆಲವರು ದೇಶವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕುವೆಂಪು ಅವರು `ಜಯ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ’ ಎಂದು ಅದ್ಭುತವಾಗಿ ಹೇಳಿದ್ದಾರೆ. ಈ ಗೀತೆಯ ಮೂಲಕವೇ ಭಾರತ ಮಾತೆಯ ಮಗಳು ಕರ್ನಾಟಕ ಮಾತೆ ಎಂದು ಹೇಳಿದ್ದಾರೆ. `ಏಕ್ ಭಾರತ್ ಶ್ರೇಷ್ಠ ಭಾರತ್’ ಪರಿಕಲ್ಪನೆಯೂ ಇದರಲ್ಲಿದೆ. ಅಷ್ಟೇ ಅಲ್ಲದೇ ಅನುಭವ ಮಂಟಪದ ಮೂಲಕ, ವಚನಗಳ ಮೂಲಕ ಬಸವಣ್ಣ ಪ್ರಕಾಶಿಸುತ್ತಿದ್ದಾರೆ. ನನಗೆ ಲಂಡನ್ ನಲ್ಲಿ ಅವರ ಪ್ರತಿಮೆ ಉದ್ಘಾಟಿಸುವ ಅವಕಾಶವೂ ಸಿಕ್ಕಿತು. ಬೇರೆ ಬೇರೆ ಭಾಷೆಯಲ್ಲಿ ವಚನಗಳ ಪುಸ್ತಕ ಬಿಡುಗಡೆ ಮಾಡುವ ಅವಕಾಶವೂ ಸಿಕ್ಕಿತ್ತು ಎಂದು ಸ್ಮರಿಸಿದರು.

Kannada Delhi Programme 3

ವಚನಗಳಲ್ಲಿ ಬಸವಣ್ಣನವರ ಪ್ರಭಾವ ಇದೆ. ಕರ್ನಾಟಕದ ಅಭಿವೃದ್ಧಿಗೆ ಆದ್ಯತೆಯಾಗಿದೆ. ಮೊದಲು ಕರ್ನಾಟಕದಲ್ಲಿ ಸರ್ಕಾರ ಮಾಡಿ ಅಲ್ಲಿಂದ ಹಣ ಹೊರಗೆ ತೆಗೆದುಕೊಂಡು ಹೋಗುತ್ತಿದ್ದರು. ಆದರೆ ಈಗ ಜನರ ಅಭಿವೃದ್ಧಿಗೆ ಬಳಕೆಯಾಗುತ್ತಿದೆ. ಕರ್ನಾಟಕದ ಅಭಿವೃದ್ಧಿಗೆ 3 ವರ್ಷಗಳಲ್ಲಿ 30 ಸಾವಿರ ಕೋಟಿ ಅನುದಾನ ಬಿಜೆಪಿ ನೀಡಿದೆ. ಕಾಂಗ್ರೆಸ್ ಸರ್ಕಾರ 10 ವರ್ಷದ ಅವಧಿಯಲ್ಲಿ 10 ಸಾವಿರ ಕೋಟಿ ನೀಡಿತ್ತು. ಆದ್ರೆ ನಮ್ಮ ಸರ್ಕಾರ ಪ್ರತಿ ವರ್ಷ ರಸ್ತೆ ಅಭಿವೃದ್ಧಿಗೆಂದೇ 5 ಸಾವಿರ ಕೋಟಿ ನೀಡುತ್ತಿದೆ. ಭದ್ರಾ ಮೇಲ್ದಂಡೆ ಮೂಲಕ ಮಧ್ಯ ಕರ್ನಾಟಕದ ಅಭಿವೃದ್ಧಿ ಮಾಡುತ್ತಿದೆ. ಇದರಿಂದ ಕರ್ನಾಟಕದ ವಿಕಾಸ ಬದಲಾಗಲಿದೆ ಎಂದು ಹೇಳಿದರು.

Kannada Delhi Programme 2

ಮುಂದಿನ 25 ವರ್ಷ ಮಹತ್ವದಾಗಿದೆ. ಮತ್ತಷ್ಟು ಮಹತ್ವದ ಕೆಲಸಗಳನ್ನು ಮಾಡಬಹುದಾಗಿದೆ. ಕಲಿಕೆ ಮತ್ತು ಕಲೆ ಎರಡನ್ನು ಅಭಿವೃದ್ಧಿ ಮಾಡಬೇಕಿದೆ. ಏಕೆಂದರೆ ಈ ಕೌಶಲ್ಯ ಬೇರೆ ಭಾಷೆಗಳಲ್ಲಿ ಇಲ್ಲ. ಕರ್ನಾಟಕದ ಹಿರಿಮೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಿದೆ. ಅದಕ್ಕಾಗಿ ಗ್ರಂಥಾಲಯಗಳನ್ನು ಹೆಚ್ಚಿಸಬೇಕು. ಇದರಿಂದ ದೆಹಲಿ ಮಕ್ಕಳಿಗೂ ಕನ್ನಡ ಕಲಿಸಬಹುದಾಗಿದೆ. `ಕನ್ನಡ ಕಲಿಯಿರಿ, ಕನ್ನಡ ಕಲಿಸಿರಿ’ ಇದರಿಂದ ಲಾಭ ಇದೆ ಎಂದು ಕರೆ ನೀಡಿದರು.

ನನಗೆ ಇತ್ತೀಚೆಗೆ ಕಡಿಮೆ ಅವಧಿಯಲ್ಲಿ ಕರ್ನಾಟಕದ ಯಾತ್ರೆ ಮಾಡುವ ಅವಕಾಶ ಸಿಕ್ಕಿತು. ಭವಿಷ್ಯದಲ್ಲಿ ಯಾವುದೇ ಕಾರ್ಯಕ್ರಮ ದೆಹಲಿಯಲ್ಲಿ ನಡೆದರೂ, ಬೇರೆ ಭಾಷೆಯ ಕುಟುಂಬವನ್ನು ಕರೆತಂದು ತೋರಿಸಿ, ಕರ್ನಾಟಕದ ವೈಭವವನ್ನು ಅರ್ಥಮಾಡಿಸಿ ಎಂದು ತಿಳಿಸಿದರು.

Kannada Delhi Programme 4

ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ನಂಜಾವಧೂತ ಶ್ರೀಗಳು, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಕರ್ನಾಟಕ ಸಂಘದ ಅಧ್ಯಕ್ಷ ಸಿ.ಎಂ ನಾಗರಾಜ್ ಮೊದಲಾದವರು ಪಾಲ್ಗೊಂಡಿದ್ದರು.

Share This Article
1 Comment

Leave a Reply

Your email address will not be published. Required fields are marked *