ನವದೆಹಲಿ: ಯಮುನಾ ಜಲ (Yamuna River) ಕಲುಷಿತವಾಗಿದೆ ಎಂದು ಆರೋಪಗಳು ಕೇಳಿ ಬಂದ ಹಿನ್ನೆಲೆ ನೀರು ಶುದ್ಧವಾಗಿದೆ ಎಂದು ನಿರೂಪಿಸಲು ದೆಹಲಿಯ ಜಲ ಮಂಡಳಿ ನಿರ್ದೇಶಕರು (Delhi Jal Board Director) ಅದೇ ನೀರಿನಲ್ಲಿ ಸ್ನಾನ ಮಾಡಿರುವ ಪ್ರಸಂಗ ನಡೆದಿದೆ.
Advertisement
ದೆಹಲಿಯಲ್ಲಿ ಛತ್ ಪೂಜೆ (Chhath Puja) ಸಮೀಪಿಸುತ್ತಿದ್ದಂತೆ ಯಮುನಾ ನದಿ ನೀರಿಗೆ ರಾಸಾಯನಿಕ ಸಿಂಪಡಿಸಿ ಶುಚಿಗೊಳಿಸಲಾಗಿದೆ. ಇದರಿಂದ ನದಿ ನೀರು ವಿಷಪೂರಿತವಾಗಿದ್ದು, ಕಲುಷಿತಗೊಂಡಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ಜಲ ಮಂಡಳಿ ನಿರ್ದೇಶಕ ಸಂಜಯ್ ಶರ್ಮಾ (Sanjay Sharma) ಯಮುನಾ ನೀರಿನಲ್ಲಿ ಸ್ಥಳದಲ್ಲೇ ಸ್ನಾನ ಮಾಡಿ ನೀರು ಕಲುಷಿತಗೊಂಡಿಲ್ಲ ಎಂಬುದನ್ನು ನಿರೂಪಿಸಲು ವೀಡಿಯೋ ಮಾಡಿ ಜಲ ಮಂಡಳಿಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಯಮುನಾ ನದಿ ಸ್ವಚ್ಛಗೊಳಿಸುತ್ತಿದ್ದ ಅಧಿಕಾರಿ ಮೇಲೆ ಬಿಜೆಪಿ ಸಂಸದರ ದರ್ಪ
Advertisement
यह दिल्ली के सांसद है लेकिन इनकी जुबान तो देखो कितनी ओछी और तुच्छ है और वो भी भारतीय सरकार के एक अधिकारी के प्रति। delhi jal board k director DTQC Sanjay Sharma ji ne yamuna k Pani me naha kar ye saaf kar diya ki yamuna ka pani puri tarah se saaf h @msisodia @ANI @CNNnews18 pic.twitter.com/ynv6hymHc2
— water treatment plant DJB (@delhijalboard0) October 30, 2022
Advertisement
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಂಜಯ್ ಶರ್ಮಾ, ನೀರಿಗೆ ರಾಸಾಯನಿಕ ಸಿಂಪಡಿಸುವ ಮುನ್ನ ಈ ಬಗ್ಗೆ ಎಲ್ಲಾ ಮುಂಜಾಗೃತಾ ಕ್ರಮವನ್ನು ತೆಗೆದುಕೊಂಡಿದ್ದೇವೆ. ಹಾಗಾಗಿ ನೀರು ಕಲುಷಿತಗೊಂಡಿಲ್ಲ. ಈ ನೀರಿನಿಂದ ಯಾವುದೇ ಸಮಸ್ಯೆಯಾಗಿಲ್ಲ. ಯಾವುದೇ ಸಮಸ್ಯೆ ಇಲ್ಲ ಎಂಬುದನ್ನು ನಿರೂಪಿಸಲು ಸ್ವತಃ ನಾನೇ ನೀರಿನಲ್ಲಿ ಸ್ನಾನ ಮಾಡಿದ್ದೇನೆ. ಸುಳ್ಳು ಆರೋಪಗಳು ಕೇಳಿ ಬಂದ ಕಾರಣ ಈ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಮನ್ ಕಿ ಬಾತ್‍ನಲ್ಲಿ ಬೆಂಗಳೂರಿನ ಸುರೇಶ್ ಕುಮಾರ್ರನ್ನು ಪ್ರಶಂಸಿಸಿದ ಮೋದಿ
Advertisement
ಛತ್ ಪೂಜೆಗೂ ಮುನ್ನ ಯಮುನಾ ನದಿಗೆ ರಾಸಾಯನಿಕ ಸಿಂಪಡಿಸುತ್ತಿದ್ದ ದೆಹಲಿ ಜಲ ಮಂಡಳಿ (DJB) ಅಧಿಕಾರಿಗಳೊಂದಿಗೆ ನಿನ್ನೆ ಬಿಜೆಪಿ ಸಂಸದ ಪರ್ವೇಶ್ ವರ್ಮಾ (Parvesh Verma) ವಾಗ್ದಾಳಿ ನಡೆಸಿದ್ದರು.