ನವದೆಹಲಿ: ತೆರಿಗೆ ಮರುಮೌಲ್ಯಮಾಪನ ಪ್ರಶ್ನಿಸಿ ಕಾಂಗ್ರೆಸ್ (Congress) ಸಲ್ಲಿಸಿದ್ದ 4 ಹೊಸ ಅರ್ಜಿಗಳನ್ನು ದೆಹಲಿ ಹೈಕೋರ್ಟ್ (Delhi High Court) ತಿರಸ್ಕರಿಸಿದೆ.
2014-15, 2015-16,2016-17ರ ಸಾಲಿನ ತೆರಿಗೆ ಮರುಮೌಲ್ಯ ಮಾಪನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿತ್ತು. ಇದನ್ನು ಇಂದು ಪ್ರಸ್ತಾಪಿಸಿರುವ ದೆಹಲಿ ಹೈಕೋರ್ಟ್ ಇಂಥಾದ್ದೇ ಪ್ರಕರಣಕ್ಕೆ ಸಂಬಂಧಿಸಿ ತಾನು ಇತ್ತೀಚಿಗೆ ನೀಡಿದ್ದ ತೀರ್ಪಿನ ವ್ಯಾಪ್ತಿಗೆ ಈ ಅರ್ಜಿಗಳು ಒಳಪಡುತ್ತವೆ ಎಂದು ಅಭಿಪ್ರಾಯಪಟ್ಟು 4 ಅರ್ಜಿಗಳನ್ನು ವಜಾ ಮಾಡಿದೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ – ದಾಳಿಯ ಸಂಚುಕೋರ ಅರೆಸ್ಟ್
Advertisement
ಲೋಕಸಭೆ ಚುನಾವಣೆ (Lok Sabha Election) ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಅರ್ಜಿ ವಜಾಗೊಂಡು ಹಿನ್ನಡೆಯಾಗಿದ್ದು,ಈಗ ಸುಪ್ರೀಂಕೋರ್ಟ್ ಮೆಟ್ಟಿಲೇರುವುದು ಮಾತ್ರ ಬಾಕಿ ಉಳಿದಿದೆ.
Advertisement