ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ದಾಖಲೆಯ ಮಳೆ ಸುರಿದಿದ್ದು, ಶುಕ್ರವಾರ ಸುರಿದ ಭಾರೀ (Rain) ಮಳೆಯಿಂದಾಗಿ ಮೃಪಟ್ಟವರ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರವನ್ನು ದೆಹಲಿ ಸರ್ಕಾರವು (Delhi Government) ಭಾನುವಾರ ಘೋಷಿಸಿದೆ.
Several deaths have been reported on 28th June, after extreme rainfall of 228mm in 24 hours. The families of all those who lost their lives will be given a compensation of ₹10 lakhs.
Directions have been given that this compensation reaches the grieving families speedily. pic.twitter.com/EO4I9PXBze
— Atishi (@AtishiAAP) June 30, 2024
Advertisement
ಕಂದಾಯ ಇಲಾಖೆಗೆ ಅಧಿಕೃತ ಸಂವಹನದಲ್ಲಿ ದೆಹಲಿ ಹಣಕಾಸು ಸಚಿವ ಅತಿಶಿ (Atishi), ಜೂನ್ 28 ರಂದು ಸುರಿದ ವಿಪರೀತ ಮಳೆಗೆ ಸಾವು-ನೋವುಗಳು ಸಂಭವಿಸಿದೆ. ಹೀಗಾಗಿ ಭಾರೀ ಮಳೆಗೆ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರವನ್ನು ನೀಡುವಂತೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
Advertisement
Advertisement
ಈ ಸಂಬಂಧ ಅತಿಶಿ ತಮ್ಮ ಎಕ್ಸ್ ಖಾತೆಯಲ್ಲಿ, ಜೂನ್ 28 ರಂದು ಹಲವು ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿವೆ. 24 ಗಂಟೆಗಳಲ್ಲಿ 228 ಮಿ.ಮೀ ತೀವ್ರ ಮಳೆಯ ನಂತರ, ಪ್ರಾಣ ಕಳೆದುಕೊಂಡ ಎಲ್ಲರ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಾಗುವುದು. ಈ ಪರಿಹಾರವು ಮೃತರ ಕುಟುಂಬಗಳಿಗೆ ತ್ವರಿತವಾಗಿ ತಲುಪುತ್ತದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ರಿಯಾಸಿ ಭಯೋತ್ಪಾದಕ ದಾಳಿ – ಉಗ್ರರ ಮೇಲೆ ಹದ್ದಿನ ಕಣ್ಣು, ರಜೌರಿಯ ಹಲವೆಡೆ NIA ರೇಡ್
Advertisement
ಎಲ್ಲೆಲ್ಲಿ ಏನೇನಾಗಿದೆ..?: ಎರಡು ದಿನಗಳ ಮುಂಗಾರು ಮಳೆಗೆ ಸುಮಾರು 11 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ವಾಯುವ್ಯ ದೆಹಲಿಯ ಬದ್ಲಿಯಲ್ಲಿ ಶನಿವಾರ ಇಬ್ಬರು ಬಾಲಕರು ನೀರು ತುಂಬಿದ್ದ ಅಂಡರ್‌ಪಾಸ್‌ನಲ್ಲಿ ಮುಳುಗಿ ಸಾವನ್ನಪ್ಪಿರುವುದು ಸೇರಿದಂತೆ ಕೆಲವು ಪ್ರಮುಖ ಘಟನೆಗಳು ನಡೆದಿದೆ. ಶುಕ್ರವಾರ ಸುರಿದ ಭಾರೀ ಮಳೆಗೆ ಅಂಡರ್‌ಪಾಸ್ ಜಲಾವೃತವಾಗಿತ್ತು.
ಓಖ್ಲಾದಲ್ಲಿ 60 ವರ್ಷದ ವ್ಯಕ್ತಿ ದಿಗ್ವಿಜಯ್ ಕುಮಾರ್ ಚೌಧರಿ ಜಲಾವೃತಗೊಂಡ ಅಂಡರ್‌ಪಾಸ್‌ನಲ್ಲಿ ತನ್ನ ಸ್ಕೂಟರ್‌ನೊಂದಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಇದಲ್ಲದೆ ಜೂನ್ 28 ರಂದು ಸರಿದ ಭಾರೀ ಮಳೆಗೆ ವಸಂತ ವಿಹಾರ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಗೋಡೆಯ ಅವಶೇಷಗಳಿಂದ ಮೂವರು ಕಾರ್ಮಿಕರ ಶವಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.