ತನ್ನ ಮೇಲೆ ಅತ್ಯಾಚಾರಗೈದ ಆರೋಪಿಯ ತಾಯಿಯ ಮೇಲೆ ಶೂಟೌಟ್, ಅಪ್ರಾಪ್ತೆ ಅರೆಸ್ಟ್

Public TV
1 Min Read
general store

ನವದೆಹಲಿ: ತನ್ನ ಮೇಲೆ ಅತ್ಯಾಚಾರಗೈದ ಆರೋಪಿಯ ತಾಯಿಗೆ (Mother) ಅಪ್ರಾಪ್ತೆಯೊಬ್ಬಳು (Girl) ಗುಂಡಿಕ್ಕಿ ಗಾಯಗೊಳಿಸಿದ ಘಟನೆ ನವದೆಹಲಿಯಲ್ಲಿ (New Delhi) ನಡೆದಿದೆ.

ರಾಷ್ಟ್ರ ರಾಜಧಾನಿ ದೆಹಲಿಯ ಭಜನ್‍ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 2021ರಲ್ಲಿ 16 ವರ್ಷದ ಹುಡುಗಿಯ ಮೇಲೆ ಹದಿಹರೆಯದ ಹುಡುಗನೊಬ್ಬ (Boy) ಅತ್ಯಾಚಾರವೆಸಗಿದ್ದ. ಇದರಿಂದಾಗಿ ಆಕೆ ಆ ಹುಡುಗನ ತಾಯಿಯನ್ನು ಕೊಲೆ ಮಾಡಲು ಯೋಜಿಸಿದ್ದಾಳೆ. ತನ್ನ ಯೋಜನೆಯಂತೆ ಆಕೆ ಪಿಸ್ತೂಲ್‍ನಿಂದ ಆತನ ತಾಯಿಗೆ ಗುಂಡು ಹಾರಿಸಿದ್ದಾಳೆ.

police jeep 1

ಆದರೆ ಅದೃಷ್ಟವಶಾತ್ ಆತನ ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು 16 ವರ್ಷ ಹುಡುಗಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಇಂದು ಕೂಡಲಸಂಗಮ, ಗೋಕರ್ಣದಲ್ಲಿ ಸಿದ್ದೇಶ್ವರ ಶ್ರೀ ಅಸ್ಥಿ ವಿಸರ್ಜನೆ

RApe 1

ಗುಂಡು ತಗುಲಿದ ಮಹಿಳೆ ದಿನಸಿ ಅಂಗಡಿ ನಡೆಸುತ್ತಿದ್ದು, ಅತ್ಯಾಚಾರದ ಆರೋಪಿಯಾಗಿರುವ ಆಕೆಯ ಮಗ ಅಪ್ರಾಪ್ತನಾಗಿರುವುದರಿಂದ ಆತನ ಹೆಸರನ್ನು ಪೊಲೀಸರು ಬಹಿರಂಗ ಪಡಿಸಿಲ್ಲ. ಇದನ್ನೂ ಓದಿ: ರಾಜಕೀಯದಲ್ಲಿ ರಾಡಿ ಎಬ್ಬಿಸಿದ ಸ್ಯಾಂಟ್ರೋ ರವಿ ಯಾರು? ಮಂಡ್ಯ ಟು ಬೆಂಗಳೂರು ಜರ್ನಿಯ ರೋಚಕ ಕಹಾನಿ

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *