ನವದೆಹಲಿ: ಹೊಸ ಮದ್ಯನೀತಿಯಲ್ಲಿ (Delhi excise policy) ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ವಿಚಾರಣೆಗೆ ಹಾಜರಾದ ತೆಲಂಗಾಣ ಪರಿಷತ್ ಸದಸ್ಯೆ, ಮುಖ್ಯಮಂತ್ರಿ ಕೆ.ಸಿ ಆರ್ ಚಂದ್ರಶೇಖರ್ ರಾವ್ (KC Chandrasekhar Rao) ಪುತ್ರಿ ಕೆ. ಕವಿತಾ (K Kavitha) ಅವರ ಮೊಬೈಲ್ ಫೋನ್‌ಗಳನ್ನು (Mobile Phones) ಇಡಿ (ED) ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಇಂದು ನಡೆದ ವಿಚಾರಣೆ ವೇಳೆ ಒಟ್ಟು ಮೂರು ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ಹೇಳಿವೆ. ಮೊಬೈಲ್ ಫೋನ್ ಜೊತೆಗೆ ಪತ್ರವನ್ನು ನೀಡಿರುವ ಕೆ. ಕವಿತಾ ಗೌಪ್ಯತೆ ಧಕ್ಕೆಯಾಗುವ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
Advertisement
Advertisement
ವಿಚಾರಣೆಗೆ ತೆರಳುವ ಮುನ್ನ ಮಾತನಾಡಿದ ಅವರು, ದಾಖಲೆಗಾಗಿ ಏಜೆನ್ಸಿಯಿಂದ ನನ್ನನ್ನು ಮೊದಲ ಬಾರಿಗೆ ವಿಚಾರಣೆಗೆ ಕರೆಯಲಾಯಿತು. 2022ರ ನವೆಂಬರ್‌ನಲ್ಲಿ ನನ್ನ ವಿರುದ್ಧ ಮಾಡಿದ ಆರೋಪವು ದುರುದ್ದೇಶಪೂರಿತವಾಗಿದೆ, ತಪ್ಪಾಗಿ ಗ್ರಹಿಸಲ್ಪಟ್ಟಿದೆ. ತಮ್ಮ ವಿರುದ್ಧದ ‘ಸುಳ್ಳು’ ಆರೋಪ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಸಿಲಿಕಾನ್ ವ್ಯಾಲಿ ಬ್ಯಾಂಕ್‌ನಂತೆ ಅಮೆರಿಕದ 186 ಬ್ಯಾಂಕ್‌ಗಳು ಅಪಾಯದಲ್ಲಿ – ಅಧ್ಯಯನ
Advertisement
Advertisement
ಮಾರ್ಚ್ 11 ಮತ್ತು ಮಾರ್ಚ್ 20ರಂದು ಎರಡು ಬಾರಿ ಈ ಹಿಂದೆ ಇಡಿ ಅಧಿಕಾರಿಗಳು 18-19 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ಸೋಮವಾರ ಸುಮಾರು ಹತ್ತು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ಮಂಗಳವಾರದ ನಾಲ್ಕನೇ ದಿನದ ವಿಚಾರಣೆ ವೇಳೆ ಅವರ ಫೋನ್‌ಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮುಂದುವರಿಸಲಾಗುತ್ತಿದೆ. ಇದನ್ನೂ ಓದಿ: ಮರಣದಂಡನೆಗೆ ಯಾವ ವಿಧಾನ ಸೂಕ್ತ?- ತಜ್ಞರ ವರದಿ ಕೇಳಿದ ಸುಪ್ರೀಂಕೋರ್ಟ್