ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿ ನೀಡಿದ ಆದೇಶದ ಮೇರೆಗೆ ದೆಹಲಿ ಸರ್ಕಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಪೊಲೀಸರು ಹೈಜಾಕ್ ಮಾಡಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ(ಎಎಪಿ) ಆರೋಪಿಸಿದೆ.
ಶನಿವಾರ ನಡೆಯಬೇಕಿದ್ದ ವನಮಹೋತ್ಸವ ಕಾರ್ಯಕ್ರಮದ ವೇದಿಕೆ ಮೇಲಿನ ಬ್ಯಾನರ್‌ಗೆ ಮೋದಿ ಫೋಟೋವನ್ನು ಅಂಟಿಸಿ, ಅದನ್ನು ತೆಗೆದವರನ್ನು ಬಂಧಿಸಲಾಗಿವುದು ಎಂದು ಪೊಲೀಸರು ಬೆದರಿಕೆ ಒಡ್ಡಿದ್ದಾರೆ. ಈ ಹಿನ್ನೆಲೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕಾರ್ಯಕ್ರಮದ ಭಾಗವಹಿಸುವಿಕೆಯನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದೆ.
Advertisement
Advertisement
ಈ ಬಗ್ಗೆ ಎಎಪಿ ಟ್ವೀಟ್ ಮಾಡಿದ್ದು, ಕೇಜ್ರಿವಾಲ್ ಚಿತ್ರವಿರುವ ಫೋಟೋಗಳನ್ನು ಹರಿದು ಹಾಕಿರುವುದು, ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಕಾವಲು ಕಾಯುತ್ತಿರುವುದು ಫೋಟೋದಲ್ಲಿ ಕಾಣಿಸಿಕೊಂಡಿದೆ. ಇದನ್ನೂ ಓದಿ: ಜಮೀರ್ Vs ಡಿಕೆಶಿ ಟಾಕ್ ವಾರ್ – ಶೋಕಾಸ್ ನೋಟಿಸ್‍ಗೆ ಪಟ್ಟು
Advertisement
ಕಾರ್ಯಕ್ರಮದ ಬ್ಯಾನರ್‌ಗೆ ಮೋದಿ ಫೋಟೋವನ್ನು ಅಂಟಿಸಲು ಪೊಲೀಸರ ತಂಡ ಆಗಮಿಸಿದೆ. ಪೊಲೀಸರು ಕಾರ್ಯಕ್ರಮದ ಸ್ಥಳಕ್ಕೆ ಬಂದು ಪ್ರದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಅವರು ಮೋದಿ ಫೋಟೋ ಇರುವ ಬ್ಯಾನರ್ ಹಚ್ಚಿ, ಎಎಪಿ ಸರ್ಕಾರಕ್ಕೆ ಸೇರಿದ ಬ್ಯಾನರ್ ಅನ್ನು ಹರಿದು ಹಾಕಿದ್ದಾರೆ ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರೈ ಹೇಳಿಕೆ ನೀಡಿದ್ದಾರೆ.
Advertisement
ನಮ್ಮ ಸರ್ಕಾರವನ್ನು ಕೆಣಕುವ ಯತ್ನಗಳನ್ನು ಕೇಂದ್ರ ಮಾಡುತ್ತಿದೆ. ಸತ್ಯೇಂದ್ರ ಜೈನ್ ಅವರನ್ನು ಕ್ಷುಲ್ಲಕ ಆರೋಪದ ಮೇಲೆ ಬಂಧಿಸಲಾಗಿದೆ. ಈಗ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರನ್ನು ಬಂಧಿಸಲು ಸಂಚು ರೂಪಿಸಲಾಗುತ್ತಿದೆ. ಮುಖ್ಯಮಂತ್ರಿ ಸಿಂಗಾಪುರದ ಭೇಟಿಗೂ ಅನುಮತಿ ನಿರಾಕರಿಸಿದೆ. ಕೇಂದ್ರದ ಈ ನಡೆ ಖಂಡನೀಯ ಎಂದು ಎಎಪಿ ಆಕ್ರೋಶ ವ್ಯಕ್ತಪಡಿಸಿದೆ. ಇದನ್ನೂ ಓದಿ: ರಸ್ತೆಯಲ್ಲಿ ಸಿಕ್ಕ 45 ಲಕ್ಷ ರೂ. ಠಾಣೆಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಟ್ರಾಫಿಕ್ ಪೊಲೀಸ್