ನವದೆಹಲಿ: ತಾಜ್‍ಮಹಲ್‍ಗೆ ಆನ್‍ಲೈನ್‍ನಲ್ಲಿ ನಕಲಿ ಟಿಕೆಟ್‍ಗಳನ್ನು ಮಾರಾಟ ಮಾಡುವ ಮೂಲಕ ನೂರಾರು ಜನರನ್ನು ವಂಚಿಸುತ್ತಿದ್ದ ಸಾಫ್ಟ್ ವೇರ್ ಇಂಜಿನಿಯರನ್ನು ದೆಹಲಿಯ ಸೈಬರ್ ಸೆಲ್ ಕ್ರೈಂ ಬ್ರಾಂಚ್ ಬಂಧಿಸಿದೆ.
ಆರೋಪಿಯನ್ನು ಸಂದೀಪ್ ಚಂದ್ ಎಂದು ಗುರುತಿಸಲಾಗಿದ್ದು, ಈತ ಉತ್ತರಾಖಂಡದ ಡೆಹ್ರಾಡೂನ್ ನಿವಾಸಿಯಾಗಿದ್ದಾನೆ. ಅಲ್ಲದೇ ಆರೋಪಿ ಉತ್ತರ ಪ್ರದೇಶದ ನೋಯ್ಡಾದ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಹಿರಿಯ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದನು. ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಅರೆಸ್ಟ್
ಆನ್‍ಲೈನ್‍ನಲ್ಲಿ ತಾಜ್‍ಮಹಲ್‍ಗೆ ಟಿಕೆಟ್ ಬುಕ್ ಮಾಡಿ ಜನರು ವಂಚನೆಗೊಳಗಾಗುತ್ತಿರುವ ಬಗ್ಗೆ ಸಂಸ್ಕೃತ ಸಚಿವಾಲಯದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‍ಐ) ಮಹಾ ನಿರ್ದೇಶಕರು ದೂರು ನೀಡಿದ ಬಳಿಕ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದರು. ಪ್ರವಾಸಿಗರಲ್ಲಿ ಒಬ್ಬರು www.agramonuments ಎಂಬ ವೆಬ್‍ಸೈಟ್ ಮೂಲಕ ಆನ್‍ಲೈನ್‍ನಲ್ಲಿ ಟಿಕೆಟ್ ಬುಕಿಂಗ್ ಮಾಡಿದ್ದರು. ಆದರೆ ಟಿಕೆಟ್ ಸಹ ಪಡೆಯದೇ ಬ್ಯಾಂಕ್‍ನಿಂದ ಹಣ ಕಡಿತವಾದಾಗ ಈ ವಿಚಾರ ಬೆಳಕಿಗೆ ಬಂದಿದೆ.
ಈ ಕುರಿತಂತೆ ತನಿಖೆ ವೇಳೆ ಪೊಲೀಸರಿಗೆ ಆರೋಪಿ ವೆಬ್‍ಸೈಟ್ ಕುರಿತ ಮಾಹಿತಿ ಲಭ್ಯವಾಗಿದೆ ಮತ್ತು ಆರೋಪಿ ಆಗಾಗ ಸ್ಥಳ ಬದಲಾಯಿಸುತ್ತಿದ್ದನು ಎಂಬ ವಿಚಾರ ಬಹಿರಂಗಗೊಂಡಿದ್ದು, ಆತನನ್ನು ಉತ್ತರಾಖಂಡದ ಚಂಪಾವತ್‍ನಿಂದ ಪೊಲೀಸರು ಬಂಧಿಸಲಾಗಿದೆ. ಇದನ್ನೂ ಓದಿ: ನೀವು ಲಂಚ ಪಡೆದಿಲ್ಲ ಅಂದ್ರೆ ಹ್ಯೂಬ್ಲೋಟ್ ವಾಚ್ ಎಲ್ಲಿಂದ ಬಂತು – ಸಿದ್ದುಗೆ ಬಿಜೆಪಿ ಪ್ರಶ್ನೆ
ವಿಚಾರಣೆ ವೇಳೆ ಆರೋಪಿ ಲಾಕ್‍ಡೌನ್‍ನಿಂದಾಗಿ ತನಗೆ ಸರಿಯಾಗಿ ಕೆಲಸ ಇರಲಿಲ್ಲ. ಹೀಗಾಗಿ ಇಂಟರ್‌ನೆಟ್‌ನಲ್ಲಿ ಹುಡುಕಾಡುತ್ತಿದ್ದ ವೇಳೆ ನಕಲಿ ವೆಬ್‍ಸೈಟ್ ಸೃಷ್ಟಿಸುವ ಆಲೋಚನೆ ಬಂತು. ತಾಜ್ ಮಹಲ್‍ಗೆ ಭೇಟಿ ನೀಡಲು ಆನ್‍ಲೈನ್ ಟಿಕೆಟ್‍ಗಳನ್ನು ಮಾರಾಟ ಮಾಡುವ ನೆಪದಲ್ಲಿ ಜನರನ್ನು ವಂಚಿಸಿ, ಸುಲಭವಾಗಿ ಹಣ ಸಂಪಾದಿಸಲು www.agramonuments ಎಂಬ ನಕಲಿ ವೆಬ್‍ಸೈಟ್ ಕ್ರಿಯೆಟ್ ಮಾಡಿರುವುದಾಗಿ ತಿಳಿಸಿದ್ದಾನೆ.