ನವದೆಹಲಿ : ಆಪ್ (AAP) ನೇತೃತ್ವದ ಅರ್ಧ ಇಂಜಿನ್ ಸರ್ಕಾರ ರಾಷ್ಟ್ರ ರಾಜಧಾನಿ ದೆಹಲಿಯನ್ನು (Delhi) ಹಾಳುಮಾಡಿದೆ. ಬಿಜೆಪಿ (BJP) ನೇತೃತ್ವ ಡಬಲ್ ಇಂಜಿನ್ (Double Engine) ಸರ್ಕಾರ ಮಾತ್ರ ದೆಹಲಿಯನ್ನು ಉಳಿಸಬಹುದು ಎಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು (Chandrababu Naidu) ಹೇಳಿದ್ದಾರೆ.
ಬಿಜೆಪಿ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ದೆಹಲಿ ಮಾಲಿನ್ಯಕ್ಕೆ ಆಪ್ ಪಕ್ಷವೇ ನೇರ ಕಾರಣ. 10 ವರ್ಷಗಳಲ್ಲಿ ಅವರಿಗೆ ಮಾಲಿನ್ಯವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಯಮುನಾ ಅತ್ಯಂತ ಕಲುಷಿತ ನದಿಯಾಗಿದೆ. ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ಇದೆಲ್ಲವನ್ನೂ ಸರಿ ಮಾಡಬಹುದು ಎಂದು ಪ್ರಚಾರ ನಡೆಸಿದರು.
Advertisement
VIDEO | Delhi Assembly Elections: Andhra Pradesh CM N Chandrababu Naidu (@ncbn) says, “… Air pollution is high. Who is responsible? Delhi is becoming poorer and poorer, day by day. For the last 31 years, Delhi has become a (revenue) deficit. This model is not expected globally.… pic.twitter.com/aAA5za4cGy
— Press Trust of India (@PTI_News) February 3, 2025
Advertisement
ದೆಹಲಿಯಲ್ಲಿ ಒಳಚರಂಡಿ ನೀರು ಮತ್ತು ಕುಡಿಯುವ ನೀರಿನ ನಡುವೆ ಯಾವುದೇ ವ್ಯತ್ಯಾಸವಿಲ್ಲ, ಇತರ ಎಲ್ಲಾ ಹಗರಣಗಳಿಗೆ ಹೋಲಿಸಿದರೆ ಮದ್ಯದ ಹಗರಣವು ಅತ್ಯಂತ ಕೆಟ್ಟದಾಗಿದೆ ಈ ಬಗ್ಗೆ ವಿಸ್ತೃತ ಚರ್ಚೆಗೆ ಅಪ್ ಬರಲಿ. ಈ ಮಾದರಿಯು ರಾಷ್ಟ್ರಕ್ಕೆ ಒಳ್ಳೆಯದಲ್ಲ. ಯಾವುದೇ ರಾಜಕಾರಣಿ ಸಂಪತ್ತು ಸೃಷ್ಟಿಸಿದರೆ, ಅವರು ಸಂಪತ್ತಿನ ಹಂಚಿಕೆಯ ಬಗ್ಗೆ ಮಾತ್ರ ಮಾತನಾಡಬಹುದು ಎಂದು ನಾವು ಇಂದಿನಿಂದಲೇ ಚರ್ಚಿಸಬೇಕಾಗಿದೆ. ಇದನ್ನೂ ಓದಿ: ಕುಂಭಮೇಳದಲ್ಲಿ ಕಾಲ್ತುಳಿತ – ತಪ್ಪಿತಸ್ಥರ ವಿರುದ್ಧ ಕ್ರಮ ಕೋರಿ ಸಲ್ಲಿಸಿದ್ದ ಅರ್ಜಿ ಸುಪ್ರೀಂನಲ್ಲಿ ವಜಾ
Advertisement
ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆಯಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಜನರು ಸರಿಯಾದ ಪಕ್ಷವನ್ನು ಅಧಿಕಾರಕ್ಕೆ ಆರಿಸದಿದ್ದರೆ ಅಭಿವೃದ್ಧಿ ಹೇಗೆ ಸಾಧ್ಯ? ನಿಮ್ಮ ಮತಕ್ಕೆ ಅಭಿವೃದ್ಧಿಯೊಂದೇ ಮಾನದಂಡವಾಗಬೇಕು. ದೆಹಲಿಯು ವಾಯು ಮಾಲಿನ್ಯ ಮತ್ತು ರಾಜಕೀಯ ಮಾಲಿನ್ಯಕ್ಕೆ ಸಾಕ್ಷ್ಯಾಗಿದೆ. ಈ ಎರಡನ್ನೂ ತಪ್ಪಿಸಬೇಕು ಎಂದು ಅವರು ಹೇಳಿದರು.
Advertisement
I campaigned in Delhi for @BJP4India ahead of the upcoming Assembly elections. It was a pleasure to connect with the vibrant Telugu community here. I urged everyone to ensure BJP’s victory for a brighter future for Delhi and to help realize the vision of a Viksit Bharat, as… pic.twitter.com/Sk8ozGONAl
— N Chandrababu Naidu (@ncbn) February 2, 2025
ದೆಹಲಿಯು ಶುದ್ಧ ಗಾಳಿ, ಶುದ್ಧ ನೀರು ಮತ್ತು ಕಸ ವಿಲೇವಾರಿಯ ಪ್ರಮುಖ ಸಮಸ್ಯೆಯನ್ನು ಹೊಂದಿದೆ. ನಾನು 1978 ರಿಂದ ರಾಜಕೀಯವನ್ನು ನೋಡುತ್ತಿದ್ದೇನೆ. ಬಿಜೆಪಿಗೆ ಮತ ಹಾಕುವುದರಿಂದ ಕೇಂದ್ರದ ಯೋಜನೆಗಳಿಗೆ ಉತ್ತಮ ಪ್ರವೇಶವನ್ನು ಖಚಿತಪಡಿಸಿಕೊಳ್ಳಬಹುದು ಎಂದು ಅವರು ಬಿಜೆಪಿಯ ಪ್ರಚಾರದಲ್ಲಿ ಹೇಳಿದರು.