ಪಾಟ್ನಾ: ಥೈರಾಯ್ಡ್‌ನಿಂದ (hyroid gland) ಬಳಲುತ್ತಿದ್ದ ಬಿಹಾರದ 72 ವರ್ಷದ ರೈತನ ಗಂಟಲಿನಿಂದ “ತೆಂಗಿನಕಾಯಿ (Coconut) ಗಾತ್ರದ” ಗೆಡ್ಡೆಯನ್ನು ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಿದ್ದಾರೆ.
ಬೇಗುಸರಾಯ್ (Begusarai) ಜಿಲ್ಲೆಯ ನಿವಾಸಿಯಾಗಿರುವ ರೋಗಿ ಕಳೆದ ಆರು ತಿಂಗಳಿನಿಂದ ಉಸಿರಾಟವಾಡಲು ಮತ್ತು ಆಹಾರವನ್ನು ನುಂಗಲು ತೊಂದರೆ ಅನುಭವಿಸುತ್ತಿದ್ದರು. ಸಮಸ್ಯೆ ಎಷ್ಟರಮಟ್ಟಿಗೆ ಉಲ್ಬಣಗೊಂಡಿತು ಎಂದರೆ ಥೈರಾಯ್ಡ್ ಅವರ ಜೀವನದ ಮೇಲೆಯೇ ಅಡ್ಡ ಪರಿಣಾಮ ಬೀರಿತು. ಹೀಗಾಗಿ ಕಳೆದ ತಿಂಗಳು ರೋಗಿಯನ್ನು ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ (Sir Ganga Ram Hospital) ಇಎನ್‍ಟಿ ಮತ್ತು ಹೆಡ್, ನೆಕ್ ಆಂಕೊ ಸರ್ಜರಿ ವಿಭಾಗಕ್ಕೆ ಕರೆದೊಯ್ಯಲಾಯಿತು. ಇದನ್ನೂ ಓದಿ: ಏರ್‌ಬಸ್ ಜೊತೆಗೂಡಿ ವಾಯುಸೇನೆಗೆ ವಿಮಾನ ತಯಾರಿಸಲಿದೆ ಟಾಟಾ ಸಮೂಹ
ಈ ಬಗ್ಗೆ ಪ್ರತಿಕ್ರಿಯಿಸಿರುವ ಆಸ್ಪತ್ರೆಯ ಹೆಡ್ ಮತ್ತು ನೆಕ್ ಆಂಕೊ ಸರ್ಜರಿ ತಜ್ಞ ಡಾ ಸಂಗೀತ್ ಅಗರ್ವಾಲ್ ಅವರು, ಹಲವಾರು ವರ್ಷಗಳಿಂದ ನಾನು ಇಂತಹ 250ಕ್ಕೂ ಹೆಚ್ಚು ಬೃಹತ್ ಥೈರಾಯ್ಡ್ ಗೆಡ್ಡೆಗಳ ಪ್ರಕರಣಗಳನ್ನು ನಿಭಾಯಿಸಿದ್ದೇನೆ. ಆದರೆ ತೂಕದ ವಿಚಾರಕ್ಕೆ ಬಂದರೆ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಗಡ್ಡೆಯನ್ನು ಹೊರತೆಗೆದಿದ್ದೇನೆ. ಸಾಮಾನ್ಯವಾಗಿ ಚಿಟ್ಟೆ-ಆಕಾರದ ಥೈರಾಯ್ಡ್ ಗ್ರಂಥಿ 10-15 ಗ್ರಾಂ ತೂಕವಿರುತ್ತದೆ ಮತ್ತು 3-4 ಸೆಂ ಗಾತ್ರವನ್ನು ಹೊಂದಿರುತ್ತದೆ. ಆದರೆ ಈ ವ್ಯಕ್ತಿಯ ಗಂಟಲಿನಿಂದ ತೆಗೆದ ಗಡ್ಡೆ 18-20 ಸೆಂ.ಮೀ ಗಾತ್ರದ ತೆಂಗಿನಕಾಯಿಗಿಂತ ದೊಡ್ಡದಾಗಿದೆ. ಗಡ್ಡೆ ತೆಗೆಯುವಾಗ ರೋಗಿಯ ಧ್ವನಿಯನ್ನು ಉಳಿಸುವುದು ಹೇಗೆ ಎಂಬುವುದು ದೊಡ್ಡ ಸವಾಲಾಗಿತ್ತು. ಆದರೆ ಅದೃಷ್ಟವಶಾತ್ ಧ್ವನಿ ವ್ಯಕ್ತಿಗೆ ಮತ್ತೆ ಮರಳಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಸ್ಕ್ ತೆಕ್ಕೆಗೆ ಟ್ವಿಟ್ಟರ್ – ಸಿಇಒ ಪರಾಗ್ ಅಗರ್‌ವಾಲ್ ಸೇರಿದಂತೆ ಪ್ರಮುಖರು ವಜಾ
Leave a Reply