ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರ ಪತ್ನಿ ಪೂನಂ ಜೈನ್ ಅವರಿಗೆ ರೋಸ್ ಅವೆನ್ಯೂ ಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ.
ಈ ನಡುವೆ ಸತ್ಯೇಂದರ್ ಜೈನ್ ಅವರು ಹೊಸ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದು, ಇದರಲ್ಲಿ ಶನಿವಾರ ನ್ಯಾಯಾಲಯವು ಭಾಗಶಃ ವಾದಗಳನ್ನು ಆಲಿಸಿದೆ. ಅವರ ಜಾಮೀನು ಅರ್ಜಿಯನ್ನು ಆಗಸ್ಟ್ 27 ರಂದು ನ್ಯಾಯಾಲಯ ಪರಿಶೀಲಿಸಲಿದೆ. ಸಹ ಆರೋಪಿಗಳಾದ ಅಂಕುಶ್ ಮತ್ತು ವೈಭವ್ ಜೈನ್ ಅವರ ಜಾಮೀನು ಅರ್ಜಿಗಳ ವಿಚಾರಣೆಯೂ ಆಗಸ್ಟ್ 27 ರಂದು ನಡೆಯಲಿದೆ. ಇದನ್ನೂ ಓದಿ: ಪಾಕ್ ಮೇಲೆ ಬ್ರಹ್ಮೋಸ್ ಕ್ಷಿಪಣಿ ಉಡಾವಣೆ – ವಾಯುಪಡೆಯ ಮೂವರು ಅಧಿಕಾರಿಗಳು ವಜಾ
ಪೂನಂ ಜೈನ್, ಸುನೀಲ್ ಕುಮಾರ್ ಜೈನ್ ಮತ್ತು ಅಜಿತ್ ಕುಮಾರ್ ಜೈನ್ ಅವರನ್ನು ತನಿಖೆಯ ಸಮಯದಲ್ಲಿ ಬಂಧಿಸಲಾಗಿಲ್ಲ ಹಾಗೂ ಈಗಾಗಲೇ ಜಾರಿ ನಿರ್ದೇಶನಾಲಯ(ಇಡಿ) ಆರೋಪಪಟ್ಟಿ ಸಲ್ಲಿಸಿದೆ ಎಂದು ಆಗಸ್ಟ್ 6 ರಂದು ನ್ಯಾಯಾಲಯ ಪೂನಂ ಜೈನ್‌ಗೆ ಮಧ್ಯಂತರ ಜಾಮೀನು ನೀಡಿತ್ತು. ಇದನ್ನೂ ಓದಿ: ರಾಹುಲ್ ಗಾಂಧಿಯನ್ನು ಬಲವಂತವಾಗಿ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಲು ಸಾಧ್ಯವಿಲ್ಲ: ದಿಗ್ವಿಜಯ ಸಿಂಗ್
4 ಖಾಸಗಿ ಸಂಸ್ಥೆಗಳು ಹಾಗೂ ದೆಹಲಿ ಕ್ಯಾಬಿನೆಟ್ ಸಚಿವ ಸತ್ಯೇಂದ್ರ ಜೈನ್ ಸೇರಿದಂತೆ ಒಟ್ಟು 10 ಜನರು ಅಕ್ರಮ ಹಣ ವರ್ಗಾವಣೆ ಕೇಸ್‌ನಲ್ಲಿ ಆರೋಪಿಗಳಾಗಿದ್ದಾರೆ. ಸತ್ಯೇಂದ್ರ ಜೈನ್, ಅಂಕುಶ್ ಜೈನ್ ಹಾಗೂ ವೈಭವ್ ಜೈನ್ ಅವರನ್ನು ಇಡಿ ಬಂಧಿಸಿದ್ದು, ಪ್ರಸ್ತುತ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.