ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಪ್ರಕರಣದಲ್ಲಿ (Land For Job Case) ಆರ್‌ಜೆಡಿ (RJD) ಮುಖ್ಯಸ್ಥ ಮತ್ತು ಬಿಹಾರದ (Bihar) ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ (Lalu Prasad Yadav) ಮತ್ತು ಅವರ ಪುತ್ರರಾದ ತೇಜಸ್ವಿ ಯಾದವ್ (Tejashwi Yadav), ತೇಜ್ ಪ್ರತಾಪ್ ಯಾದವ್ (Tej Pratap Yadav) ಅವರಿಗೆ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ ಜಾಮೀನು (Bail) ನೀಡಿದೆ.
ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ, ತಲಾ 1 ಲಕ್ಷ ರೂ. ಬಾಂಡ್‌ಗಳ ಮೇಲೆ ಜಾಮೀನು ಮಂಜೂರು ಮಾಡಿದರು. ಎಲ್ಲಾ ಮೂವರು ಆರೋಪಿಗಳು ತಮ್ಮ ಪಾಸ್‌ಪೋರ್ಟ್‌ಗಳನ್ನು ಒಪ್ಪಿಸುವಂತೆ ನ್ಯಾಯಾಲಯ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಅಕ್ಟೋಬರ್ 25ಕ್ಕೆ ಮುಂದೂಡಿದೆ. ಇದನ್ನೂ ಓದಿ: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಪ್ರವಾಸಿಗರ ಮಿನಿ ಬಸ್ ಏರಿದ ಚಿರತೆ
ಪ್ರಕರಣದ ವಿಚಾರಣೆ ಹಿನ್ನೆಲೆ ಆರೋಪಿಗಳು ದೆಹಲಿಯ ರೋಸ್ ಅವೆನ್ಯೂ ಕೋರ್ಟ್‌ಗೆ ಹಾಜರಾಗಿದ್ದರು. ಇದಕ್ಕೂ ಮುನ್ನ ಅವರ ವಿರುದ್ಧದ ಪೂರಕ ಆರೋಪಪಟ್ಟಿಯನ್ನು ಆಧರಿಸಿ ಅವರಿಗೆ ಸಮನ್ಸ್ ಜಾರಿ ಮಾಡಲಾಗಿತ್ತು. ಅಂತಿಮ ವರದಿಯನ್ನು ಆಗಸ್ಟ್ 6 ರಂದು ಜಾರಿ ನಿರ್ದೇಶನಾಲಯ (ಇಡಿ) ನ್ಯಾಯಾಲಯಕ್ಕೆ ಸಲ್ಲಿಸಿದೆ. ಇದನ್ನೂ ಓದಿ: ಕುರ್ಚಿ ಕಾದಾಟ ಮಧ್ಯೆ ಸತೀಶ್ ಜಾರಕಿಹೊಳಿಯನ್ನು ಭೇಟಿಯಾದ ವಿಜಯೇಂದ್ರ
2004ರಿಂದ 2009ರವರೆಗೆ ಕೇಂದ್ರ ರೈಲ್ವೆ ಸಚಿವರಾಗಿದ್ದ ಲಾಲು ಪ್ರಸಾದ್ ಯಾದವ್ ಮಧ್ಯಪ್ರದೇಶದ ಜಬಲ್‌ಪುರ ಮೂಲದ ರೈಲ್ವೆಯ ಪಶ್ಚಿಮ ಮಧ್ಯವಲಯದಲ್ಲಿ ಗ್ರೂಪ್-ಡಿ ಉದ್ಯೋಗಗಳಿಗೆ ಜನರನ್ನು ನೇಮಿಸಿದರು. ಇದಕ್ಕೆ ಬದಲಾಗಿ ಉಡುಗೊರೆ ರೂಪದಲ್ಲಿ ಅವರಿಂದ ಭೂಮಿ ಪಡೆದು ಲಾಲು ಪ್ರಸಾದ್ ತನ್ನ ಕುಟುಂಬದ ಮತ್ತು ಸಹಚರರ ಹೆಸರಿನಲ್ಲಿ ನೋಂದಣಿ ಮಾಡಿಸಿಕೊಂಡಿದ್ದರು. ಇದನ್ನೂ ಓದಿ: ಮಕ್ಕಳ ಕಳ್ಳಿಯೆಂದು ಮಾನಸಿಕ ಅಸ್ವಸ್ಥೆಗೆ ಥಳಿತ: ಪೊಲೀಸರಿಂದ ಮಹಿಳೆಯ ರಕ್ಷಣೆ