ನವದೆಹಲಿ: ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನ ಶೈಲಿಯಿಂದ (Health Style) ದೇಹದಲ್ಲಿ ಕೊಬ್ಬಿನಾಂಶ ಹೆಚ್ಚಾಗುತ್ತಿದೆ. ಇದರೊಂದಿಗೆ ದೇಹದ ತೂಕವೂ ಹೆಚ್ಚಾಗಿ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಆದ್ರೆ ದೆಹಲಿಯ ಹಿರಿಯ ಪೊಲೀಸ್ (Delhi Police) ಅಧಿಕಾರಿಯೊಬ್ಬರು 8 ತಿಂಗಳಲ್ಲಿ ಬರೋಬ್ಬರಿ 46 ಕೆಜಿ ತೂಕ ಇಳಿಸಿಕೊಂಡು ಇಲಾಖೆಯಲ್ಲಿ ಭಾರೀ ಪ್ರಶಂಸೆ ಪಡೆದಿದ್ದಾರೆ.
Advertisement
130 ಕೆ.ಜಿ ತೂಕವಿದ್ದ ಮೆಟ್ರೋ (Metro) ಉಪ ಪೊಲೀಸ್ ಆಯುಕ್ತ ಜಿತೇಂದ್ರ ಮಣಿ ಅನೇಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿದ್ದರು. ಆದ್ರೆ ಬದುಕನ್ನು ಸವಾಲಾಗಿ ಸ್ವೀಕರಿಸಿದ ಜೀತೆಂದ್ರ ಮಣಿ ಸಂಪೂರ್ಣ ಬದಲಾವಣೆ ಮಾಡಿಕೊಂಡಿದ್ದಾರೆ. ಪ್ರತಿದಿನ 15 ಸಾವಿರ ಹೆಜ್ಜೆ ನಡೆಯುವ ಜೊತೆಗೆ, ಪೌಷ್ಠಿಕ ಆಹಾರ ಸೇವನೆ ಮಾಡುವ ಕ್ರಮವನ್ನ ರೂಢಿಸಿಕೊಂಡಿದ್ದಾರೆ. ಜಂಕ್ ಫುಡ್‌ಗಳನ್ನ ಬದಿಗಿಟ್ಟು ರೊಟ್ಟಿ, ಸೂಪ್, ಸಲಾಡ್ ಹಾಗೂ ಹಣ್ಣುಗಳ ಆಹಾರ ಸೇವನೆಗೆ ತನ್ನನ್ನು ಒಗ್ಗಿಸಿಕೊಂಡಿದ್ದಾರೆ.
Advertisement
Advertisement
ಕಟ್ಟುನಿಟ್ಟಾದ ಆಹಾರಕ್ರಮ ಅನುಸರಿಸಿ, ಕೇವಲ 8 ತಿಂಗಳಲ್ಲಿ ಬರೋಬ್ಬರಿ 46 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಸೊಂಟದ ಭಾಗದಲ್ಲಿ ಕನಿಷ್ಠ 12 ಇಂಚು ಕರಗಿಸಿ, ಸದೃಢ ದೇಹ ಬೆಳೆಸಿಕೊಂಡಿದ್ದಾರೆ. ಇದನ್ನೂ ಓದಿ: ಗ್ಯಾಂಬಿಯಾ ಬಳಿಕ ಈಗ ಉಜ್ಬೇಕಿಸ್ತಾನದಿಂದ ಆರೋಪ – 18 ಮಕ್ಕಳ ಸಾವಿಗೆ ಭಾರತದ ಸಿರಪ್ ಕಾರಣ
Advertisement
ಈ ಕುರಿತು ಮಾತನಾಡಿರುವ ಜೀತೇಂದ್ರ ಮಣಿ, 8 ತಿಂಗಳಲ್ಲಿ 32 ಲಕ್ಷಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಏರಿದ್ದೇನೆ. ಪ್ರತಿ ತಿಂಗಳು 4.5 ಲಕ್ಷ ಹೆಜ್ಜೆ ನಡೆಯುವ ಗುರಿ ಹಾಕಿಕೊಂಡಿದ್ದೆ. ಇದರಿಂದ 130 ಕೆ.ಜಿಯಿಂದ 84 ಕೆಜಿಗೆ ದೇಹವನ್ನು ಇಳಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಪೊಲೀಸ್ ಅಧಿಕಾರಿಗೆ ದೆಹಲಿ ಪೊಲೀಸ್ ಆಯುಕ್ತರು ಇಲಾಖೆಯಿಂದ ಪ್ರಶಂಸನಾ ಪತ್ರವನ್ನೂ ನೀಡಿ ಗೌರವಿಸಿದ್ದಾರೆ. ಇದನ್ನೂ ಓದಿ: ನ್ಯೂ ಇಯರ್ ಸೆಲಬ್ರೇಷನ್‍ಗೆ ಕೌಂಟ್‍ಡೌನ್ ಶುರು- ಕರಾವಳಿ ತೀರಕ್ಕೆ ಪ್ರವಾಸಿಗರ ದಂಡು