ನವದೆಹಲಿ: 27 ವರ್ಷಗಳ ಬಳಿಕ ದೆಹಲಿಯಲ್ಲಿ ಚುಕ್ಕಾಣಿ ಹಿಡಿದಿರುವ ಬಿಜೆಪಿಯ (BJP) ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಪ್ರಶ್ನೆಗೆ ಇಂದು ಉತ್ತರ ಸಿಗಲಿದೆ.
ದೆಹಲಿ ಬಿಜೆಪಿ ಕಚೇರಿಯಲ್ಲಿ (Delhi BJP Office) ಇಂದು ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು ಅಲ್ಲಿ ಶಾಸಕರು ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಿದ್ದಾರೆ
Advertisement
ದೆಹಲಿ ಸಿಎಂ ಆಯ್ಕೆಗೂ ಮುನ್ನ ಪ್ರಮಾಣ ವಚನಕ್ಕೆ ಮುಹೂರ್ತ ನಿಗದಿಯಾಗಿದೆ. ರಾಮಲೀಲಾ ಮೈದಾನದಲ್ಲಿ (Ramlila Msaidan) ಗುರುವಾರ ಬಳಗ್ಗೆ 11:30ಕ್ಕೆ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ಭಾಗಿಯಾಗುವ ನಿರೀಕ್ಷೆಯಿದೆ.
Advertisement
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸೇರಿ ಬಿಜೆಪಿ ಆಡಳಿತ ರಾಜ್ಯಗಳ ಸಿಎಂಗಳು, ಪ್ರಮುಖ ನಾಯಕರು, ಸಾಧು ಸಂತರು, ಸಿನಿಮಾ ತಾರೆಗಳು ಭಾಗಿಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ದೆಹಲಿಯಲ್ಲಿ 150 ಕೋಟಿ ವೆಚ್ಚದಲ್ಲಿ RSS ಕಚೇರಿ ಅನಾವರಣ; ವಿಶೇಷತೆಗಳೇನು?
Advertisement
Advertisement
ರೇಸ್‌ನಲ್ಲಿ ಯಾರಿದ್ದಾರೆ?
ಪರ್ವೇಶ್ ವರ್ಮಾ : ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ ನಾಯಕ. ಮಾಜಿ ಮುಖ್ಯಮಂತ್ರಿ ಸಾಹಿನಾ ಸಿಂಗ್ ವರ್ಮಾ ಪುತ್ರ. ಕಳೆದ 27 ವರ್ಷಗಳಿಂದ ನವದೆಹಲಿ ಕ್ಷೇತ್ರ ಪ್ರತಿನಿಧಿಸಿದ ಅಭ್ಯರ್ಥಿಗಳೇ ಸಿಎಂ ಆಗಿದ್ದಾರೆ.
ಆಶಿಶ್ ಸೂದ್ : ದೆಹಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆಶಿಶ್ ಸೂದ್ ಕೇಂದ್ರ ನಾಯಕರೊಂದಿಗಿನ ನಿಕಟ ಸಂಬಂಧಗಳಿಗೆ ಹೆಸರುವಾಸಿ.
ರೇಖಾ ಗುಪ್ತಾ : ಪ್ರಮುಖ ಮಹಿಳಾ ಮುಖ ರೇಖಾ ಗುಪ್ತಾ, ಹಿರಿಯ ಬಿಜೆಪಿ ನಾಯಕಿ.
ವಿಜೇಂದರ್ ಗುಪ್ತಾ : ದೆಹಲಿ ವಿಧಾನಸಭೆಯ ಮಾಜಿ ವಿರೋಧ ಪಕ್ಷದ ನಾಯಕ.
ಸತೀಶ್ ಉಪಾಧ್ಯಾಯ : ಪ್ರಮುಖ ಬ್ರಾಹ್ಮಣ ನಾಯಕ ಮತ್ತು ಮಾಜಿ ರಾಜ್ಯದ ಅಧ್ಯಕ್ಷ.
ಜಿತೇಂದ್ರ ಮಹಾಜನ್ : ವೈಶ್ಯ ಸಮುದಾಯದ ಪ್ರಬಲ ಮತ್ತು ಆರ್‌ಎಸ್‌ಎಸ್ ನಾಯಕರ ಜೊತೆ ಆಪ್ತ ಸಂಪರ್ಕ ಹೊಂದಿದ್ದಾರೆ.