Cricket

ದುಬೈನಲ್ಲಿಂದು ಡೆಲ್ಲಿ ಕ್ಯಾಪಿಟಲ್ಸ್ – ಸನ್ ರೈಸರ್ಸ್ ನಡುವೆ ಕಾದಾಟ

Published

on

Share this

ದುಬೈ: ಐಪಿಎಲ್ ದ್ವಿತೀಯಾರ್ಧದ 4ನೇ ಪಂದ್ಯದಲ್ಲಿ ಇಂದು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಹೈದರಾಬಾದ್ ಸನ್ ರೈಸರ್ಸ್ ತಂಡಗಳು ಸೆಣಸಾಡಲಿವೆ.

ಈವರೆಗೂ ನಡೆದಿರುವ ಒಟ್ಟು 8 ಪಂದ್ಯಗಳಲ್ಲಿ, 6 ಪಂದ್ಯಗಳನ್ನು ಗೆದ್ದಿರುವ ಡೆಲ್ಲಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಏಳು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಗೆದ್ದಿರುವ ಸನ್ ರೈಸರ್ಸ್ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇದನ್ನೂ ಓದಿ: ಕೊನೆಯ ಓವರಿನಲ್ಲಿ ತ್ಯಾಗಿ ಜಾದೂ – ರಾಜಸ್ಥಾನಕ್ಕೆ 2 ರನ್‍ಗಳ ರೋಚಕ ಜಯ

ಭಾರತದಲ್ಲಿ ನಡೆದ ಮೊದಲಾರ್ಧದ ಐಪಿಎಲ್ ಪಂದ್ಯಗಳಲ್ಲಿ ಸಾಲು ಸಾಲು ಪಂದ್ಯಗಳನ್ನು ಸೋತಿರುವ ಹೈದರಾಬಾದ್ ಸನ್ ರೈಸರ್ಸ್, ಟೂರ್ನಿಯಲ್ಲಿ ಮತ್ತೆ ಗೆಲುವಿನ ಲಯಕ್ಕೆ ಮರಳಲು ಸಿದ್ಧತೆ ನಡೆಸಿದೆ. ಟೂರ್ನಿಯಲ್ಲಿ ಸತತ ಗೆಲುವಿನೊಂದಿಗೆ ಅಬ್ಬರಿಸುತ್ತಿರುವ ಡೆಲ್ಲಿ ಚೊಚ್ಚಲ ಐಪಿಎಲ್ ಕಿರೀಟ ಗೆಲ್ಲುವ ತವಕದಲ್ಲಿದೆ. ಉಭಯ ತಂಡದಲ್ಲೂ ಸ್ಟಾರ್ ಆಟಗಾರರ ಪಡೆಯೇ ಇದೆ. ಇದನ್ನೂ ಓದಿ: ಸ್ಟೇಡಿಯಂನಲ್ಲಿ ಮಹಿಳಾ ಪ್ರೇಕ್ಷಕರು ಇದ್ದಾರೆ, ಪ್ರಸಾರ ಮಾಡಬೇಡಿ – ಅಫ್ಘಾನಿಸ್ಥಾನದಲ್ಲಿ ಐಪಿಎಲ್ ಬ್ಯಾನ್

ಉಭಯ ತಂಡಗಳ ಬಲಾಬಲ ನೋಡುವುದಾದರೆ ಹೈದರಾಬಾದ್‍ಗಿಂತ, ಡೆಲ್ಲಿ ತಂಡ ಸಮತೋಲನದಿಂದ ಕೂಡಿದೆ. ಡೆಲ್ಲಿ ತಂಡದ ಬ್ಯಾಟಿಂಗ್ ಬಳಗದಲ್ಲಿ ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಶಿಮ್ರಾನ್ ಹೆಟ್ಮಿಯರ್ ರಂತ ಹೊಡಿಬಡಿ ಆಟಗಾರರಿದ್ದಾರೆ. ಪ್ರಸ್ತುತ ಈ ಆಟಗಾರರೆಲ್ಲ ಫಾರ್ಮ್‍ನಲ್ಲಿರುವುದು ಡೆಲ್ಲಿ ತಂಡಕ್ಕೆ ಪ್ಲಸ್ ಆಗಲಿದೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಆರ್, ಅಶ್ವಿನ್, ಅಮಿತ್ ಮಿಶ್ರಾ, ಕಗಿಸೊ ರಬಾಡ, ಎದುರಾಳಿ ತಂಡದ ಆಟಗಾರರನ್ನು ಕಟ್ಟಿಹಾಕಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

ಹೈದರಾಬಾದ್ ತಂಡದಲ್ಲಿ ನಾಯಕ ಕೇನ್ ವಿಲಿಯಮ್‍ಸನ್, ಡೇವಿಡ್ ವಾರ್ನರ್, ಮನೀಶ್ ಪಾಂಡೆ, ವಿಜಯ್ ಶಂಕರ್ ಬ್ಯಾಟಿಂಗ್ ವಿಭಾಗದಲ್ಲಿ ತಂಡಕ್ಕೆ ಬಲ ತುಂಬಾಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಚಾಂಪಿಯನ್ ಬೌಲರ್ ರಶೀದ್ ಖಾನ್, ಭುವನೇಶ್ವರ್ ಕುಮಾರ್, ಟಿ.ನಟರಾಜನ್, ಸಂದೀಪ್ ಶರ್ಮಾ ಎದುರಾಳಿಗಳನ್ನು ಕಟ್ಟಿಹಾಕಬಲ್ಲರು. ಆದರೆ ಭಾರತದಲ್ಲಿ ಸನ್ ರೈಸರ್ಸ್ ತಂಡದ ಆಟಗಾರರು ಹೇಳಿಕೊಳ್ಳುವಂತ ಪ್ರದರ್ಶನ ನೀಡದಿಲ್ಲದಿರುವು ತಂಡಕ್ಕೆ ಕೊಂಚ ಹಿನ್ನಡೆಯಾಗಬಲ್ಲದು. ಅಲ್ಲದೆ ಸ್ಟಾರ್ ಆಟಗಾರ ಜಾನಿ ಬೈರ್ ಸ್ಟೊ ಈ ಬಾರಿ ಐಪಿಎಲ್‍ನಲ್ಲಿ ಆಡದಿರಲು ನಿರ್ಧಾರಿಸಿದ್ದು ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ.

ಡೆಲ್ಲಿ ತಂಡದಲ್ಲಿ ನಾಯಕ ರಿಷಭ್ ಪಂತ್ ಉತ್ತಮ ಫಾರ್ಮ್‍ನಲ್ಲಿದ್ದು, ಇಂದು ಕೂಡ ಉತ್ತಮ ಪ್ರದರ್ಶನ ನೀಡುವ ಹಂಬಲದಲ್ಲಿದ್ದಾರೆ. ಇನ್ನು ಸೋತು ಸುಣ್ಣವಾಗಿರುವ ಹೈದಾರಬಾದ್ ತಂಡ ಗೆಲುವಿನ ಟ್ರ್ಯಾಕ್‍ಗೆ ಮರಳುವ ತವಕದಲ್ಲಿದೆ. ರಾತ್ರಿ 7:30ಕ್ಕೆ ಪಂದ್ಯ ಆರಂಭಗೊಳ್ಳಲಿದ್ದು ಗೆಲುವಿಗಾಗಿ ಉಭಯ ತಂಡಗಳು ಕಾದಾಟ ನಡೆಸಲಿವೆ.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications