ಡೆಲ್ಲಿ ತಂಡದ ಆರಂಭಿಕರಾದ ಪೃಥ್ವಿ ಶಾ ಹಾಗೂ ಧವನ್‍ರನ್ನು ಬೇಗ ಔಟ್ ಮಾಡುವ ಮೂಲಕ ಆರಂಭಿಕ ಅಘಾತ ನೀಡಿತು. ಶಾ 12 ಎಸೆತಗಳಲ್ಲಿ 10 ರನ್, ಧವನ್ 8 ಎಸೆತಗಳಲ್ಲಿ 8 ರನ್‍ಗಳಿಸಿ ಪೆವಿಲಿಯನ್ ಸೇರಿಕೊಂಡಿದ್ದರು. ನಂತರ ಜೊತೆಯಾದ ನಾಯಕ ರಿಷಭ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ ಮೂರನೇ ವಿಕೆಟ್‍ಗೆ 62 ರನ್‍ಗಳ ಜೊತೆಯಾಟವಾಡಿದರು.
ಡೆಲ್ಲಿ ಕ್ಯಾಪಿಡಲ್ಸ್ ಪರ ಪಂತ್ 24, ಹಾಗೂ ಅಯ್ಯರ್ 43, ಹೆಟ್ಮಿಯರ್ 16 ಎಸೆತಗಳಲ್ಲಿ 5 ಬೌಂಡರಿ ಸಹಿತ ಬಿರುಸಿನ 28 ರನ್‍ಗಳಿಸಿದರು. ನಿಗದಿತ 20 ಓವರ್‍ಗಳಲ್ಲಿ ಡೆಲ್ಲಿ 6 ವಿಕೆಟ್ ನಷ್ಟಕ್ಕೆ 154 ರನ್‍ಗಳಿಸಿತು. ರಾಜಸ್ತಾನ್ ಪರ ಮುಸ್ತಫಜುರ್ ರೆಹಮಾನ್ ಹಾಗೂ ಚೇತನ್ ಸಕಾರಿಯಾ ತಲಾ ಎರಡು ವಿಕೆಟ್ ಪಡೆದರು. ಇದನ್ನೂ ಓದಿ: ಆರ್‌ಸಿಬಿ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್‌ಗೆ ಭರ್ಜರಿ ಜಯ
157 ರನ್ ಟಾರ್ಗೆಟ್ ಬೆನ್ನತ್ತಿದ ರಾಜಸ್ತಾನ್ ರಾಯಲ್ಸ್, ಆರಂಭದಲ್ಲೇ ಡೆಲ್ಲಿ ಬೌಲರ್‍ಗಳನ್ನು ಎದುರಿಸಲಾಗದೆ ವಿಕೆಟ್‍ಗಳನ್ನು ಕಳೆದುಕೊಂಡಿತು. ಡೆಲ್ಲಿ ಪರ ಲಿವಿಂಗ್‍ಸ್ಟೊನ್ 1 ರನ್, ಜೈಸ್ವಾಲ್ 4 ಎಸೆತಗಳಲ್ಲಿ 5 ರನ್, ಮಿಲ್ಲರ್ 10 ಎಸೆತಗಳಲ್ಲಿ 7 ರನ್‍ಗಳಿಸಿದರು. ಮಹಿಪಾಲ್ ಲೊಮರ್ 24 ಎಸೆತಗಳಲ್ಲಿ 19 ರನ್‍ಗಳಿಸಿ ರಬಾಡಗೆ ವಿಕೆಟ್ ಒಪ್ಪಿಸಿದರು.
ಆರಂಭದಿಂದಲೂ ಶಿಸ್ತಿನ ದಾಳಿ ನಡೆಸಿದ ಡೆಲ್ಲಿ ಬೌಲರ್ಸ್, ರಾಜಸ್ತಾನವನ್ನು ರನ್‍ಗಳಿಸಲು ಪರಾದಡುವಂತೆ ಮಾಡಿದರು. ರಾಜಸ್ತಾನ್ ಪರ ನಾಯಕ ಸಂಜು ಸ್ಯಾಮ್ಸನ್ ಏಕಾಂಗಿಯಾಗಿ ಹೊರಾಟ ನಡೆಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ. ಸಂಜು 53 ಎಸೆತಗಳಲ್ಲಿ 8 ಬೌಂಡರಿ 1 ಸಿಕ್ಸರ್ ಸಹಿತ ಅಜೇಯ 70 ರನ್‍ಗಳಿಸಿದರು. ಡೆಲ್ಲಿ ಪರ ಅನ್ರಿಚ್ ನಾಟ್ರ್ಜೆ 2 ವಿಕೆಟ್ ಅಶ್ವಿನ್ 1, ರಬಾಡ ಹಾಗೂ ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಕಬಳಿಸಿದರು.