ನವದೆಹಲಿ: ಐಸಿಯು ವಾರ್ಡ್‍ವೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ಭಯಕ್ಕೆ ರೋಗಿಯೊಬ್ಬರು ಸಾವನ್ನಪಿರುವ ಘಟನೆ ನಗರದ ರೋಹಿಣಿ ಕಾಲೋನಿಯಲ್ಲಿರುವ ಬ್ರಹ್ಮ ಶಕ್ತಿ ಆಸ್ಪತ್ರೆಯ ತೀವ್ರ ನಿಗಾ ಘಟಕದ (ಐಸಿಯು) ವಾರ್ಡ್‍ನಲ್ಲಿ ಶನಿವಾರ ನಡೆದಿದೆ.
ಘಟನೆಯ ಕುರಿತು ಪ್ರತಿಕ್ರಿಯೆ ನೀಡಿದ ದೆಹಲಿ ಅಗ್ನಿಶಾಮಕ ದಳದ ಸೇವಾ ನಿರ್ದೇಶಕ ಅತುಲ್ ಗರ್ಗ್ ಅವರು, ಬೆಂಕಿಯನ್ನು ನಂದಿಸಲು ಒಂಬತ್ತು ಅಗ್ನಿಶಾಮಕ ವಾಹನಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ವೆಂಟಿಲೇಟರ್‌ನಲ್ಲಿದ್ದ ಒಬ್ಬ ವ್ಯಕ್ತಿಯನ್ನು ಹೊರತುಪಡಿಸಿ ಕಟ್ಟಡದ ಒಳಗಿದ್ದವರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಆದರೆ ಒಬ್ಬ ರೋಗಿ ಮಾತ್ರ ಸಾವನ್ನಪ್ಪಿದ್ದಾನೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಕೋಮು ದ್ವೇಷಭಾಷಣ – ಓವೈಸಿ, ನೂಪುರ್ ಶರ್ಮಾ ವಿರುದ್ಧ FIR
ಈಗಾಗಲೇ ಬೆಂಕಿಯನ್ನು ನಂದಿಸಲಾಗಿದ್ದು, ಕೂಲಿಂಗ್ ಕಾರ್ಯಾಚರಣೆ ಮುಂದುವರಿದಿದೆ. ಇದನ್ನೂ ಓದಿ: ಪ್ರವಾದಿ ವಿರುದ್ಧ ಅವಹೇಳನ – ಕ್ರಮಕ್ಕೆ ಆಗ್ರಹಿಸಿ ದೇಶಾದ್ಯಂತ ಮುಸ್ಲಿಮರ ಪ್ರತಿಭಟನೆ, ಬುರ್ಕಾ ಧರಿಸಿ ಬೀದಿಗಿಳಿದ ಮಹಿಳೆಯರು