ನವದೆಹಲಿ: ದೆಹಲಿ ಸ್ಫೋಟ (Delhi Blast) ಘೋರ ಭಯೋತ್ಪಾದಕ ಕೃತ್ಯ ಎಂದು ಭದ್ರತೆಗೆ ಸಂಬಂಧಿಸಿದ ಕೇಂದ್ರ ಉನ್ನತ ಮಟ್ಟದ ಸಂಪುಟ ಸಮಿತಿಯು ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ (PM Modi) ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಮುಖ ಭದ್ರತಾ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಇತರರು ಭಾಗವಹಿಸಿದ್ದರು. ಇದನ್ನೂ ಓದಿ: ಡಾ.ಉಮರ್‌ನ 2ನೇ ಕಾರು Red Ecosport ಪತ್ತೆ – ತನ್ನ ಹೆಸರಲ್ಲೇ ಕಾರು ಖರೀದಿಸಿದ್ದ ಉಗ್ರ!
ಪ್ರಧಾನ ಮಂತ್ರಿಯವರ ನಿವಾಸದಲ್ಲಿ ಸಭೆ ಸೇರಿದ ಕೇಂದ್ರ ಸಚಿವ ಸಂಪುಟವು, ದಾಳಿಯನ್ನು ಖಂಡಿಸುವ ಔಪಚಾರಿಕ ನಿರ್ಣಯವನ್ನು ಅಂಗೀಕರಿಸುವ ಮೊದಲು ಸ್ಫೋಟದಲ್ಲಿ ಮೃತಪಟ್ಟ ಅಮಾಯಕರಿಗೆ ಗೌರವ ಸಲ್ಲಿಸುವ ಸಲುವಾಗಿ ಎರಡು ನಿಮಿಷಗಳ ಮೌನ ಆಚರಿಸಿತು.
ರಾಷ್ಟ್ರವಿರೋಧಿ ಶಕ್ತಿಗಳು ನಡೆಸಿದ ಒಂದು ಹೇಡಿತನದ ಕೃತ್ಯ” ಎಂದು ಸರ್ಕಾರ ತಿಳಿಸಿದೆ. ಭಯೋತ್ಪಾದನೆಯ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳ ಬಗ್ಗೆ ಯಾವುದೇ ಸಹಿಷ್ಣುತೆ ಇಲ್ಲ ಎಂಬ ನೀತಿಗೆ ಭಾರತದ ಅಚಲ ಬದ್ಧತೆಯನ್ನು ಪುನರುಚ್ಚರಿಸಿದೆ.
ಸ್ಫೋಟದಲ್ಲಿ ಮುಗ್ಧ ಜೀವಗಳು ಪ್ರಾಣ ಕಳೆದುಕೊಂಡಿದ್ದು ತೀವ್ರ ದುಃಖ ತರಿಸಿದೆ. ಮೃತರ ಕುಟುಂಬಗಳಿಗೆ ಸಂತಾಪಗಳು. ಗಾಯಾಳುಗಳಿಗೆ ವೈದ್ಯಕೀಯ, ತುರ್ತು ಸಹಾಯ ಕಲ್ಪಿಸಿದ ವೈದ್ಯಕೀಯ ಸಿಬ್ಬಂದಿ ಕಾರ್ಯ ಶ್ಲಾಘನೀಯ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇದನ್ನೂ ಓದಿ: Delhi Explosion | ಕೆಂಪು ಕೋಟೆ ಅಲ್ಲ, ಅಯೋಧ್ಯೆ, ವಾರಣಾಸಿ ಉಗ್ರರ ಟಾರ್ಗೆಟ್ ಆಗಿತ್ತು – ರಹಸ್ಯ ಸ್ಫೋಟ
ನವೆಂಬರ್ 10 ರ ಸಂಜೆ, ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಬಿಳಿ ಬಣ್ಣದ ಹುಂಡೈ i20 ಕಾರು ಸ್ಫೋಟವಾಗಿ 12 ಮಂದಿ ಮೃತಪಟ್ಟಿದ್ದಾರೆ. ಈ ಸ್ಫೋಟವು ಹಲವಾರು ವಾಹನಗಳಿಗೆ ಹಾನಿಯನ್ನುಂಟು ಮಾಡಿದೆ. ಹತ್ತಿರದ ಕಟ್ಟಡಗಳ ಗಾಜುಗಳನ್ನು ಪುಡಿಪುಡಿ ಮಾಡುವಷ್ಟು ಸ್ಫೋಟ ಪ್ರಬಲವಾಗಿತ್ತು.
ಭಯೋತ್ಪಾದನಾ ಕೃತ್ಯದ ವಿರುದ್ಧ ಭಾರತಕ್ಕೆ ಪ್ರಪಂಚದಾದ್ಯಂತ ಅನೇಕ ಸರ್ಕಾರಗಳು ಒಗ್ಗಟ್ಟು ಮತ್ತು ಬೆಂಬಲ ವ್ಯಕ್ತಪಡಿಸಿವೆ. ಪ್ರತಿಕೂಲ ಪರಿಸ್ಥಿತಿಯಲ್ಲಿ ಧೈರ್ಯ ಮತ್ತು ಸಹಾನುಭೂತಿಯಿಂದ ಕಾರ್ಯನಿರ್ವಹಿಸಿದ ಅಧಿಕಾರಿಗಳು, ಭದ್ರತಾ ಸಂಸ್ಥೆಗಳು ಮತ್ತು ನಾಗರಿಕರ ಸಕಾಲಿಕ ಮತ್ತು ಸಂಘಟಿತ ಪ್ರತಿಕ್ರಿಯೆಯನ್ನು ಸಂಪುಟ ಶ್ಲಾಘಿಸಿದೆ. ಅವರ ಸಮರ್ಪಣೆ ಮತ್ತು ಕರ್ತವ್ಯ ಪ್ರಜ್ಞೆಯು ಅತ್ಯಂತ ಶ್ಲಾಘಿಸಿದೆ.
ಘಟನೆಯ ತನಿಖೆಯನ್ನು ಅತ್ಯಂತ ತುರ್ತಾಗಿ ಮತ್ತು ವೃತ್ತಿಪರತೆಯಿಂದ ನಡೆಸಬೇಕೆಂದು ಸಚಿವ ಸಂಪುಟ ನಿರ್ದೇಶಿಸಿದೆ. ಇದರಿಂದಾಗಿ ಅಪರಾಧಿಗಳು, ಅವರ ಸಹಾಯಕರು ಮತ್ತು ಕೃತ್ಯದ ಪ್ರಯೋಜಕರನ್ನು ಪತ್ತೆಹಚ್ಚಿ ನ್ಯಾಯಾಲಯದ ಕಟಕಟೆಗೆ ತರಬಹುದು ಎಂದು ತಿಳಿಸಿದೆ.
ಸರ್ಕಾರದ ಉನ್ನತ ಮಟ್ಟದಲ್ಲಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ರಾಷ್ಟ್ರೀಯ ಭದ್ರತೆ ಮತ್ತು ಪ್ರತಿಯೊಬ್ಬ ನಾಗರಿಕರ ಸುರಕ್ಷತೆಗೆ ಸರ್ಕಾರದ ನಿರಂತರ ಬದ್ಧತೆಗೆ ಅನುಗುಣವಾಗಿ, ಎಲ್ಲಾ ಭಾರತೀಯರ ಯೋಗಕ್ಷೇಮವನ್ನು ಕಾಪಾಡುವ ದೃಢ ಸಂಕಲ್ಪವನ್ನು ಸಂಪುಟ ಪುನರುಚ್ಚರಿಸುತ್ತದೆ.


