ತುಮಕೂರು: ದೆಹಲಿ ಕಾರ್ ಬಾಂಬ್ ಬ್ಲಾಸ್ಟ್‌ಗೆ (Bomb Blast) ಸಂಬಂಧಿಸಿದಂತೆ ತುಮಕೂರಿನಲ್ಲಿ (Tumakuru) ಮಾಜಿ ಉಗ್ರನನ್ನು ವಿಚಾರಣೆ ಮಾಡಲಾಗಿದೆ.
ದೆಹಲಿಯ ಕೆಂಪುಕೋಟೆಯ ಬಳಿ ಸಂಭವಿಸಿದ್ದ ಕಾರು ಸ್ಫೋಟ ಸಂಬಂಧ ಎನ್‌ಐಎ ತೀವ್ರ ವಿಚಾರಣೆ ನಡೆಸುತ್ತಿದೆ. ಈ ಹಿನ್ನೆಲೆ ದೇಶದೆಲ್ಲಡೆ ಹೈ ಅಲರ್ಟ್ ಘೋಷಿಸಲಾಗಿದ್ದು, ಇತ್ತ ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿ ಮಾಜಿ ಉಗ್ರ ಮುಜಾಹಿದ್ಧೀನ್ ಎಂಬಾತನನ್ನು ಎಎಸ್ಪಿ ಪುರುಷೋತ್ತಮ ನೇತೃತ್ವದಲ್ಲಿ ತಿಲಕ್ ಪಾರ್ಕ್ ಪೊಲೀಸರು ವಿಚಾರಣೆ ಮಾಡಿದ್ದಾರೆ.ಇದನ್ನೂ ಓದಿ: ಹಿಂದೆ ಕಾಂಗ್ರೆಸ್ ಮುಗಿಸಿದ್ವಿ, ಯಾವ ಬಾವುಟ ಹಿಡಿಬೇಕು ಅಂತ ಮುಂದೆ ತೀರ್ಮಾನ ಮಾಡ್ತೀನಿ: ರಾಜಣ್ಣ
ಮಾಜಿ ಉಗ್ರನನ್ನು 2016ರಲ್ಲಿ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು. ಬಳಿಕ 6 ವರ್ಷಗಳ ಕಾಲ ತಿಹಾರ್ ಜೈಲಿನಲಿದ್ದ. ಕಲಿಫತ್ ಉಗ್ರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಈತ, ಸಂಘಟನೆ ಮುಖಂಡರಿಗೆ ತುಮಕೂರಿನಲ್ಲಿ ಸಭೆಗೆ ಅವಕಾಶ ಮಾಡಿ, ಅದರ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ.
ಸದ್ಯ ದೆಹಲಿ ಪ್ರಕರಣ ಸಂಬಂಧ ಉಗ್ರನ ವಿಚಾರಣೆ ಮಾಡಲಾಗಿದೆ. ಪ್ರಕರಣದಲ್ಲಿ ಈತನ ಪಾತ್ರವಿಲ್ಲ ಎಂದು ತಿಳಿದುಬಂದಿದ್ದು, ಬಿಟ್ಟುಕಳುಹಿಸಿದ್ದಾರೆ.ಇದನ್ನೂ ಓದಿ: ಟರ್ಕಿಯ ʼಜೇಡʼದ ಜೊತೆ ಸಂಪರ್ಕ – ದೆಹಲಿಯಲ್ಲಿ ಸರಣಿ ಬಾಂಬ್‌ಗೆ ಸ್ಕೆಚ್!

