ನವದೆಹಲಿ: ನವೆಂಬರ್ 10ರ ಕೆಂಪು ಕೋಟೆ ಸ್ಫೋಟದ ತನಿಖೆಗೆ ಸಂಬಂಧಿಸಿದಂತೆ ಹರ್ಯಾಣದಲ್ಲಿರುವ ಅಲ್-ಫಲಾಹ್ ವಿಶ್ವವಿದ್ಯಾಲಯ ಮತ್ತು ಅದರ ಜೊತೆ ಸಂಬಂಧ ಹೊಂದಿರುವ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ದೆಹಲಿ ಮತ್ತು ಫರಿದಾಬಾದ್‌ನ 25 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ED) ಶೋಧ ನಡೆಸುತ್ತಿದೆ.
ʼವೈಟ್ ಕಾಲರ್ʼ ಫರಿದಾಬಾದ್ ಭಯೋತ್ಪಾದಕ ಘಟಕದಲ್ಲಿ ಆರೋಪಿಗಳಾಗಿದ್ದ ಇತರರು ಕೆಲಸ ಮಾಡಿದ ವಿಶ್ವವಿದ್ಯಾಲಯ ಮತ್ತು ಸಂಸ್ಥೆಯ ಮಾಲೀಕರನ್ನು ಒಳಗೊಂಡಂತೆ ಹಣಕಾಸಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಇಡಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ(PMLA) ಅಡಿ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿದೆ. ಇದನ್ನೂ ಓದಿ: ಡಾಕ್ಟರ್ ಉಗ್ರರ ಕೇಂದ್ರ ಕಚೇರಿ ಅಲ್-ಫಲಾಹ್ ವಿವಿಗೆ ಬೆಂಗಳೂರು ನ್ಯಾಕ್ ಕಚೇರಿಯಿಂದ ಶೋಕಾಸ್ ನೋಟಿಸ್
#WATCH | Delhi terror blast case: Raid by a central agency underway at the Okhla (Delhi) office of Al-Falah University located in Faridabad, Haryana
More details are awaited pic.twitter.com/rWrJUyCFQv
— ANI (@ANI) November 18, 2025
ಬೆಳಿಗ್ಗೆ 5 ಗಂಟೆ ಅಧಿಕಾರಿಗಳು ದೆಹಲಿಯಲ್ಲಿರುವ ವಿಶ್ವವಿದ್ಯಾಲಯದ ಪ್ರಧಾನ ಕಚೇರಿ ಮತ್ತು ಸಂಸ್ಥೆಯ ಟ್ರಸ್ಟಿಗಳ ಮೇಲೆ ದಾಳಿ ನಡೆಸಲಾಗಿದೆ. ವಿಶ್ವವಿದ್ಯಾಲಯದ ಅಧ್ಯಕ್ಷ ಜಾವೇದ್ ಅಹ್ಮದ್ ಸಿದ್ದಿಕಿ ಅವರನ್ನು ಅವರ ನಿವಾಸದ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ. ಇದನ್ನೂ ಓದಿ: ದೇಶದಲ್ಲಿ ʻವೈಟ್ ಕಾಲರ್ʼ ರಕ್ಕಸರು – ಹೇಗೆ ಹುಟ್ಟಿಕೊಳ್ತಾರೆ? ಭಾರತಕ್ಕೆ ಏಕೆ ಸವಾಲು?
ಒಂದು ಎಫ್‌ಐಆರ್ ವಂಚನೆ ಆರೋಪಗಳಿಗೆ ಸಂಬಂಧಿಸಿದ್ದಾಗಿದ್ದರೆ, ಎರಡನೆಯದನ್ನು ನಕಲಿ ದಾಖಲೆಗಳಿಗೆ ಸಂಬಂಧಿಸಿದ ವಿಭಾಗಗಳ ಅಡಿಯಲ್ಲಿ ದಾಖಲಾಗಿದೆ.

