Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬಂಧಿತ ಉಗ್ರ, ವೈದ್ಯ ಆದಿಲ್‌ಗೆ ಸಿಗುತ್ತಿತ್ತು ತಿಂಗಳಿಗೆ 5 ಲಕ್ಷ ರೂ. ಸಂಬಳ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಬಂಧಿತ ಉಗ್ರ, ವೈದ್ಯ ಆದಿಲ್‌ಗೆ ಸಿಗುತ್ತಿತ್ತು ತಿಂಗಳಿಗೆ 5 ಲಕ್ಷ ರೂ. ಸಂಬಳ!

Latest

ಬಂಧಿತ ಉಗ್ರ, ವೈದ್ಯ ಆದಿಲ್‌ಗೆ ಸಿಗುತ್ತಿತ್ತು ತಿಂಗಳಿಗೆ 5 ಲಕ್ಷ ರೂ. ಸಂಬಳ!

Public TV
Last updated: November 12, 2025 9:05 am
Public TV
Share
3 Min Read
Dr Adeel Ahmed Rather
SHARE

ನವದೆಹಲಿ: ಶ್ರೀನಗರದಲ್ಲಿ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯನ್ನು ಬೆಂಬಲಿಸುವ ಪೋಸ್ಟರ್‌ಗಳನ್ನು ಹಾಕಿ ಬಂಧನಕ್ಕೆ ಒಳಗಾಗಿ ಫರಿದಾಬಾದ್‌ ಟೆರರ್‌ ಗ್ಯಾಂಗ್‌ ಬಗ್ಗೆ ಬಾಯ್ಬಿಟ್ಟ  ಕಾಶ್ಮೀರಿ ವೈದ್ಯ ಆದಿಲ್ ಅಹ್ಮದ್ ರಾಥರ್‌ಗೆ (Dr Adeel Ahmed Rather) ತಿಂಗಳಿಗೆ 5 ಲಕ್ಷ ರೂ. ಸಂಬಳ ಸಿಗುತ್ತಿತ್ತು.

ಹೌದು. ದಕ್ಷಿಣ ಕಾಶ್ಮೀರದ ಖಾಜಿಗುಂಡ್ ನಿವಾಸಿಯಾಗಿರುವ ಆದಿಲ್ ಅಹ್ಮದ್ ರಾಥರ್ ಅಕ್ಟೋಬರ್ 2024 ರವರೆಗೆ ಅನಂತನಾಗ್‌ನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ (ಜಿಎಂಸಿ) ಹಿರಿಯ ರೆಸಿಡೆಂಟ್‌ ಆಗಿ ಕೆಲಸ ಮಾಡಿದ್ದ. ಬಳಿಕ ಈ ವರ್ಷದ ಮಾರ್ಚ್‌ನಲ್ಲಿ ಉತ್ತರ ಪ್ರದೇಶದ (Uttar Pradesh) ಸಹರಾನ್‌ಪುರಕ್ಕೆ ತೆರಳಿದ್ದ.

ಮೊದಲು ವಿ-ಬ್ರಾಸ್ ಆಸ್ಪತ್ರೆಗೆ ಸೇರಿದ ನಂತರ ಪ್ರಸಿದ್ಧ ಮೆಡಿಕೇರ್‌ ಆಸ್ಪತ್ರೆಯಲ್ಲಿ (Medicare Hospital) ಕೆಲಸದ ಗುತ್ತಿಗೆಗೆ ಆದಿಲ್ ಸಹಿ ಹಾಕುತ್ತಾನೆ. ಪೊಲೀಸ್‌ ದಾಖಲೆಗಳ ಪ್ರಕಾರ ಈತನಿಗೆ ತಿಂಗಳಿಗೆ 5 ಲಕ್ಷ ರೂ. ಸಂಬಳ ಸಿಗುತ್ತಿತ್ತು. ಅಷ್ಟೇ ಅಲ್ಲದೇ ವಸತಿಗಾಗಿ 10 ಸಾವಿರ ರೂ. ಭತ್ಯೆ ಪ್ರತ್ಯೇಕವಾಗಿ ಸಿಗುತ್ತಿತ್ತು.

ಬಾಪು ಬಿಹಾರ ಕಾಲೋನಿಯಲ್ಲಿ ಎರಡು ಬೆಡ್‌ರೂಮ್‌ ಮನೆಯಲ್ಲಿ ವಾಸವಿದ್ದ ಆದಿಲ್ ತಡರಾತ್ರಿ ಭೇಟಿ ನೀಡುವವರನ್ನು ಹೊರತುಪಡಿಸಿ ನೆರೆಮನೆಯವರ ಜೊತೆ ಅಷ್ಟಾಗಿ ಮಾತನಾಡುತ್ತಿರಲಿಲ್ಲ. ಈ ವರ್ಷದ ಸೆಪ್ಟೆಂಬರ್ 26 ರಂದು ದಿಢೀರ್‌ ರಜೆ ತೆಗೆದುಕೊಂಡು ಅಕ್ಟೋಬರ್ 4 ರಂದು ಜಮ್ಮುವಿನಲ್ಲಿ ಕರ್ತವ್ಯದಲ್ಲಿದ್ದ ವೈದ್ಯೆಯನ್ನು ಆದಿಲ್ ಮದುವೆಯಾಗಿ ಸಹರಾನ್‌ಪುರಕ್ಕೆ ಮರಳಿದ್ದ. ಇದನ್ನೂ ಓದಿ:  ಜಮ್ಮು ಕಾಶ್ಮೀರದಲ್ಲಿ ವೈದ್ಯನ ಅರೆಸ್ಟ್ ಬೆನ್ನಲ್ಲೇ ದೆಹಲಿ ಸಮೀಪ 2,900 ಕೆಜಿ ಸ್ಫೋಟಕಗಳು ಪತ್ತೆ

 
ಅಕ್ಟೋಬರ್ 27 ರ ರಾತ್ರಿ ಶ್ರೀನಗರದ ರೈನಾವರಿ ಮತ್ತು ಜಡಿಬಲ್ ಪ್ರದೇಶಗಳಲ್ಲಿನ ಗೋಡೆಗಳ ಮೇಲೆ ಜೈಶ್-ಎ-ಮೊಹಮ್ಮದ್ ಸಂಘಟನೆಯನ್ನು ಬೆಂಬಲಿಸುವ ಪೋಸ್ಟರ್‌ಗಳು ಕಾಣಿಸಿಕೊಂಡಿತ್ತು. ಜಿಹಾದ್‌ಗೆ ಕರೆ ನೀಡುವ ಪೋಸ್ಟ್‌ಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದ್ದ ಜಮ್ಮು ಕಾಶ್ಮೀರ ಪೊಲೀಸರು ಸಿಸಿಟಿವಿ ಮತ್ತು ಮೊಬೈಲ್‌ ಡೇಟಾ ಆಧಾರದಲ್ಲಿ ಮೆಡಿಕೇರ್‌ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿರುವಾಗಲೇ ಆದೀಲ್‌ನನ್ನು ನ.6 ರಂದು ಬಂಧಿಸುತ್ತಾರೆ.

ಶಸ್ತ್ರಾಸ್ತ್ರ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ಆರೋಪ ಹೊರಿಸಿ ವಿಚಾರಣೆ ನಡೆಸಿದಾಗ ಫರಿದಾಬಾದ್‌ ಟೆರರ್‌ ಗ್ಯಾಂಗ್‌ ಬಗ್ಗೆ ಬಾಯಿ ಬಿಟ್ಟಿದ್ದಾನೆ. ದೆಹಲಿ-ಎನ್‌ಸಿಆರ್, ಹರಿಯಾಣ ಮತ್ತು ಜಮ್ಮು ಕಾಶ್ಮೀರದಲ್ಲಿರುವ ಸದಸ್ಯರ ಬಗ್ಗೆ ಹೇಳಿದ್ದಾನೆ. ನಂತರ ಪೊಲೀಸರು ಅನಂತ್‌ನಾಗ್‌ನ ಜಿಎಂಸಿ ಮೇಲೆ ದಾಳಿ ನಡೆಸಿ ಆದಿಲ್‌ನ ಲಾಕರ್‌ನಿಂದ ಎಕೆ -47 ರೈಫಲ್ ಮತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆಯುತ್ತಾರೆ. ಇದನ್ನೂ ಓದಿ: ಕಾಲೇಜಿನಲ್ಲಿ ಟಾಪರ್‌, ಪತಿಗೆ ತಲಾಖ್‌, ಪ್ರೊಫೆಸರ್‌ ಹುದ್ದೆಗೆ ಚಕ್ಕರ್‌ – ಟೆರರ್‌ ಡಾಕ್ಟರ್‌ ಶಾಹೀನ್‌ ಬದುಕೇ ನಿಗೂಢ ರಹಸ್ಯ

2019 ರ ಪುಲ್ವಾಮಾ ದಾಳಿ ನಡೆಸಿದ ಜೈಷ್‌-ಎ-ಮೊಹಮ್ಮದ್‌ ಮತ್ತು ಷರಿಯಾ ನಿಯಮವನ್ನು ಪ್ರತಿಪಾದಿಸುವ ಸ್ಥಳೀಯ ಶಾಖೆಯಾದ ಅನ್ಸರ್ ಘಜ್ವತ್-ಉಲ್-ಹಿಂದ್ ಎರಡರೊಂದಿಗೆ ಈತ ಸಂಬಂಧ ಹೊಂದಿದ್ದಾನೆ. ಸಹರಾನ್‌ಪುರದಲ್ಲಿರುವ ತನ್ನ ಆಕ್ಸಿಸ್ ಬ್ಯಾಂಕ್ ಖಾತೆಯಿಂದ ಶ್ರೀನಗರದಲ್ಲಿರುವ ತನ್ನ ಸಹೋದರನ ಖಾತೆಗೆ 15-20 ಲಕ್ಷ ರೂ. ಹಣವನ್ನು ಕಳುಹಿಸಿದ್ದ. ಈ ಹಣವನ್ನು ಉಗ್ರ ಚಟುವಟಿಕೆ ನಡೆಸಲು ವರ್ಗಾವಣೆ ಮಾಡಲಾಗಿದ್ಯಾ ಎಂಬ ನಿಟ್ಟಿನಲ್ಲಿ ಈಗ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ರೋಗಿಗಳಿಂದ ದೂರು, ಕೆಲಸಕ್ಕೆ ಚಕ್ಕರ್, ಕೊನೆಗೆ ವಜಾ – ಇದು ಕಾರ್ ಬಾಂಬರ್ ವೈದ್ಯನ ಅಸಲಿ ಮುಖ
ಮೆಡಿಕೇರ್ ಆಸ್ಪತ್ರೆ ವ್ಯವಸ್ಥಾಪಕ ಮನೋಜ್ ಮಿಶ್ರಾ ಆದಿಲ್ ಬಂಧನದ ವಿಚಾರ ತಿಳಿದು ಶಾಕ್‌ ಆಗಿದ್ದಾರೆ. ಮೃದುಭಾಷಿ, ಶಿಸ್ತುಬದ್ಧವಾಗಿ ಕೆಲಸ ಮಾಡುತ್ತಿದ್ದ. ಆತ ಉಗ್ರ ಚಟುವಟಿಕೆ ನಡೆಸುವ ಬಗ್ಗೆ ಎಲ್ಲಿಯೂ ನಮಗೆ ಅನುಮಾನ ಬರುತ್ತಿರಲಿಲ್ಲ. ಹಿರಿಯ ವೈದ್ಯರ ಶಿಫಾರಸಿನ ಆಧಾರದಲ್ಲಿ ಆದಿಲ್‌ನನ್ನು ನೇಮಿಸಿಕೊಂಡಿದ್ದೇವೆ. ಪೊಲೀಸರಿಂದ ಮಾಹಿತಿ ಪಡೆದ ನಂತರ ಆದೀಲ್‌ನನ್ನು ತಕ್ಷಣವೇ ವಜಾಗೊಳಿಸಲಾಗಿದೆ. ನಮ್ಮ ಆಸ್ಪತ್ರೆಗೆ ಆದಿಲ್‌ನನ್ನು ಸೇರಿಸಿದ್ದ ಹಿರಿಯ ವೈದ್ಯ ಡಾ. ಬಾಬರ್‌ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

TAGGED:Adeel Ahmed RatherMedicareಆದಿಲ್ ಅಹ್ಮದ್ ರಾಥರ್‌ಉತ್ತರ ಪ್ರದೇಶಜಮ್ಮು ಕಾಶ್ಮೀರ
Share This Article
Facebook Whatsapp Whatsapp Telegram

Cinema news

Asha Bhosle Funeral
ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಗಾಯಕಿ ಆಶಾ ಭೋಸ್ಲೆ ಅಂತ್ಯಕ್ರಿಯೆ
Cinema Latest National Top Stories
Jogi Prem
ಕನ್ನಡ ಸಿನಿಮಾ ಅಂತಲೇ ರಾಜಕಾರಣ – ಸೆನ್ಸಾರ್ ಬೋರ್ಡ್ ವಿರುದ್ಧ ಪ್ರೇಮ್ ಕಿಡಿ
Cinema Latest Sandalwood Top Stories
Dhruva Sarja
LPG ಗ್ಯಾಸ್‌ ಬಿಕ್ಕಟ್ಟಿನಿಂದ ಕಂಗಾಲಾದ ಆಟೋ ಚಾಲಕರಿಗೆ ಆಸರೆ – 25 ಲಕ್ಷ ನೆರವು ನೀಡಿದ ಧ್ರುವ ಸರ್ಜಾ!
Bengaluru City Cinema Latest Sandalwood Top Stories
Asha Bhosle 3
`ಅಭೀ ನಾ ಜಾವೋ ಛೋಡ್ ಕರ್’ ಗಾಯಕಿ ಸಂಗೀತದಲ್ಲಿ ಲೀನ – ಇಂದು ಆಶಾ ಭೋಸ್ಲೆ ಅಂತ್ಯಕ್ರಿಯೆ
Cinema Latest Main Post Top Stories

You Might Also Like

MLAs Meet Mallikarjun Kharge in Delhi
Bengaluru City

ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಶಾಸಕರು – ಮೇ 15ರೊಳಗೆ ಕ್ಯಾಬಿನೆಟ್ ಪುನಾರಚನೆಗೆ ಒತ್ತಾಯ

Public TV
By Public TV
27 minutes ago
Strait of Hormuz 1
Latest

1 ದಿನಕ್ಕೆ 4 ಸಾವಿರ ಕೋಟಿ ರೂ. – ನೌಕಾ ದಿಗ್ಬಂಧನದಿಂದ ಇರಾನ್‌ ಆರ್ಥಿಕತೆಗೆ ಭಾರೀ ನಷ್ಟ!

Public TV
By Public TV
56 minutes ago
Rohini Sindhuri Supreme Court
Court

ರೋಹಿಣಿ ಸಿಂಧೂರಿ ವಿರುದ್ಧ ತನಿಖೆ – ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

Public TV
By Public TV
2 hours ago
Irans Ambassador to India Mohammad Fathali
Latest

ಭಾರತೀಯ ಟ್ಯಾಂಕರ್‌ಗಳಿಗೆ ಯಾವುದೇ ಶುಲ್ಕ ವಿಧಿಸಿಲ್ಲ: ಇರಾನ್‌ ಸ್ಪಷ್ಟನೆ

Public TV
By Public TV
2 hours ago
Vinobanagar Police Station
Crime

ಗಾಂಜಾ ಸೇವಿಸಿ ವಿಚಿತ್ರ ವರ್ತನೆ – ವಿದ್ಯಾರ್ಥಿ ವಿರುದ್ಧ ಸುಮೊಟೊ ಕೇಸ್ ದಾಖಲು

Public TV
By Public TV
3 hours ago
hd kumaraswamy mb patil 1
Automobile

2 ವರ್ಷದ ಬಳಿಕ ವಿಧಾನಸೌಧಕ್ಕೆ ಬಂದ ಹೆಚ್‌ಡಿಕೆ – ಮಂಡ್ಯದಲ್ಲಿ ARAI ಕೇಂದ್ರದ ಜೊತೆ ಕೈಗಾರಿಕಾ ಹಬ್‌ ಸ್ಥಾಪನೆಗೆ ಚಿಂತನೆ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?