ನವದೆಹಲಿ: ಭಾರೀ ಮಳೆಗೆ ದೆಹಲಿ (Delhi) ಇಂದಿರಾಗಾಂಧಿ ವಿಮಾನ ನಿಲ್ದಾಣ (Indira Gandhi International Airport) ಮೇಲ್ಛಾವಣಿ ಕುಸಿದು ಕ್ಯಾಬ್ ಡ್ರೈವರ್ ಓರ್ವ ಮೃತಪಟ್ಟಿದ್ದು, 7 ಜನರಿಗೆ ಗಾಯಗಳಾಗಿವೆ. ಈ ಘಟನೆ ಸಂಬಂಧ ಬಿಜೆಪಿ ಕಾಂಗ್ರೆಸ್ (BJP-Congress) ಮಧ್ಯೆ ಕೆಸರೆರಚಾಟ ಆರಂಭವಾದ ಬೆನ್ನಲ್ಲೇ ಮೂಲಸೌಕರ್ಯ ಕಂಪನಿ ಎಲ್ ಆಂಡ್ ಟಿ (L&T) ಸ್ಪಷ್ಟನೆ ನೀಡಿದೆ.
We extend our deepest sympathies to those affected by the unfortunate incident at Terminal 1 of Delhi Airport in the early hours of June 28, 2024.
We want to clarify that L&T did not construct the collapsed structure, nor are we responsible for its maintenance. The structure in… pic.twitter.com/mhiN30AH1J
— Larsen & Toubro (@larsentoubro) June 28, 2024
Advertisement
ಸ್ಪಷ್ಟನೆಯಲ್ಲಿ ಏನಿದೆ?
ಕುಸಿದ ರಚನೆಯನ್ನು L&T ನಿರ್ಮಿಸಿಲ್ಲ ಅಥವಾ ಅದರ ನಿರ್ವಹಣೆಗೆ ನಾವು ಜವಾಬ್ದಾರರಾಗಿರುವುದಿಲ್ಲ ಎಂದು ನಾವು ಈ ಮೂಲಕ ಸ್ಪಷ್ಟಪಡಿಸಲು ಬಯಸುತ್ತೇವೆ. ಕುಸಿದು ಬಿದ್ದ ಭಾಗವನ್ನು ಮತ್ತೊಂದು ಕಂಪನಿಯು 2009 ರಲ್ಲಿ ನಿರ್ಮಿಸಿದೆ. ಇದನ್ನೂ ಓದಿ: ಮೊದಲ ಮಾನ್ಸೂನ್ ಮಳೆಗೆ ರಾಷ್ಟ್ರ ರಾಜಧಾನಿ ತತ್ತರ – ರಸ್ತೆಗಳಲ್ಲಿ ಉಕ್ಕಿ ಹರಿದ ನೀರು
Advertisement
Corruption and criminal negligence is responsible for the collapse of shoddy infrastructure falling like a deck of cards, in the past 10 years of Modi Govt.
⏬Delhi Airport (T1) roof collapse,
⏬Jabalpur airport roof collapse,
⏬Abysmal condition of Ayodhya’s new roads,
⏬Ram…
— Mallikarjun Kharge (@kharge) June 28, 2024
Advertisement
ದೆಹಲಿ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ (DIAL) ಕೋರಿಕೆಯ ಮೇರೆಗೆ, L&T 2019 ರಲ್ಲಿ ಟರ್ಮಿನಲ್ 1ರ ವಿಸ್ತರಣೆ ಯೋಜನೆಯನ್ನು ಕೈಗೆತ್ತಿಕೊಂಡಿತು. ಟರ್ಮಿನಲ್ ವಿಸ್ತೃತ ಭಾಗದಿಂದ ಸರಿಸುಮಾರು 110 ಮೀಟರ್ ದೂರದಲ್ಲಿ ಕುಸಿತವು ಸಂಭವಿಸಿದೆ. ಹೊಸದಾಗಿ ನಿರ್ಮಾಣದ ವಿಸ್ತೃತ ಭಾಗದ ಮೇಲೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ಹೇಳಿದೆ. ಇದನ್ನೂ ಓದಿ: ಅಮೇರಿಕ ಅಧ್ಯಕ್ಷೀಯ ಚುನಾವಣೆ: ಬೈಡನ್, ಟ್ರಂಪ್ ಮುಖಾಮುಖಿ ಚರ್ಚೆ
Advertisement
𝐅𝐚𝐜𝐭 𝐜𝐡𝐞𝐜𝐤!
The part of Terminal T1 of the Delhi Airport which collapsed due to heavy rain was inaugurated by the UPA government in 2009.
Whereas, the area inaugurated by PM Shri @narendramodi in 2024 stands unaffected. pic.twitter.com/IaOKFga1J0
— BJP (@BJP4India) June 28, 2024
ಘಟನಾ ಸ್ಥಳಕ್ಕೆ ನಾಗರಿಕ ವಿಮಾನ ಸಚಿವ ರಾಮ್‌ಮೋಹನ್ ನಾಯ್ಡು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವೈಜ್ಞಾನಿಕ ಕಾರಣ ಹುಡುಕಲು ಸೂಚಿಸಿದ್ದೇನೆ. ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಪರಿಶೀಲನೆಗೆ ನಿರ್ದೇಶಿಸಿದ್ದೇನೆ. ಮೃತನ ಕುಟುಂಬಕ್ಕೆ 20 ಲಕ್ಷ ರೂ. ಗಾಯಾಳುಗಳಿಗೆ 3 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಹೇಳಿದರು.