ನವದೆಹಲಿ: 27 ವರ್ಷದ ಮಹಿಳೆಗೆ ಪತಿ ಹಲವು ಬಾರಿ ಇರಿದಿದ್ದಾನೆ. ಪರಿಣಾಮ ಆಕೆಯ ಭುಜದಲ್ಲಿ ಚಾಕು ಸಿಲುಕಿಕೊಂಡ್ರೂ ಲೆಕ್ಕಿಸದೆ ಪೊಲೀಸರಿಗೆ ಪತಿ ವಿರುದ್ಧ ದೂರು ಕೊಟ್ಟಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ರೋಹಿಣಿಯ ಕಂಝವಾಲಾ ಪ್ರದೇಶದಲ್ಲಿ 27 ವರ್ಷದ ಮಹಿಳೆಯೊಬ್ಬಳ ಮೇಲೆ ಆಕೆಯ ಪತಿ ಹಲ್ಲೆ ನಡೆಸಿ ಹಲವು ಬಾರಿ ಇರಿದಿದ್ದಾನೆ. ಗಾಯಗೊಂಡ ಮಹಿಳೆ ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ತನ್ನ ಭುಜದಲ್ಲಿ ಇನ್ನೂ ಚಾಕು ಇದ್ರೂ ಅದನ್ನ ಲೆಕ್ಕಿಸದೆ ದೂರು ಕೊಡಲು ಪೊಲೀಸ್ ಠಾಣೆಗೆ ಪ್ರವೇಶಿಸಿದ್ದಾಳೆ. ದೂರು ದಾಖಲಿಸಿಕೊಂಡ ತಕ್ಷಣ ಪೊಲೀಸರು ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಿದ್ದು, ಸದ್ಯ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ.
Advertisement
Advertisement
ಮಹಿಳೆಯ ದೂರಿನ ಆಧಾರದ ಮೇಲೆ ಪತಿ ವಿರುದ್ಧ ಪೊಲೀಸರು, 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡಿದ್ದಕ್ಕಾಗಿ ಶಿಕ್ಷೆ), 342 (ಅಕ್ರಮ ಬಂಧನಕ್ಕೆ ಶಿಕ್ಷೆ), 324(ಅಪಾಯಕಾರಿ ಆಯುಧದಿಂದ ಹಲ್ಲೆ) ಮತ್ತು 34 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಮಹೀಂದ್ರಾ ಶೂಟ್‍ನಲ್ಲಿ ತಾಳ್ಮೆ ಕಳೆದುಕೊಂಡ ಅಜಯ್ ದೇವಗನ್!
Advertisement
ಅಲ್ಲದೆ ಈ ಕುರಿತು ಇನ್ನೂ ಹೆಚ್ಚಿನ ತನಿಖೆ ನಡೆಸಲಾಗುವುದು. ಪ್ರಸ್ತುತ ಮುಖ್ಯ ಆರೋಪಿ ಮತ್ತು ಅವನ ತಾಯಿ ಪರಾರಿಯಾಗಿದ್ದಾರೆ. ಪ್ರಕರಣದ ತನಿಖೆಗಾಗಿ ನಾವು ತಂಡವನ್ನು ರಚಿಸಿದ್ದೇವೆ. ಈಗ ಇಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.
Advertisement
ದೂರಿನಲ್ಲಿ ಏನಿದೆ?
ಮಹಿಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ, ನಾವು 2012ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ನಮಗೆ ಇಬ್ಬರು ಮಕ್ಕಳಿದ್ದಾರೆ. ನನ್ನ ಪತಿ ಕೆಲಸ ಕಳೆದುಕೊಂಡ ನಂತರ ನನ್ನನ್ನು ತುಂಬಾ ನಿಂದಿಸುತ್ತಿದ್ದನು. ಅಲ್ಲದೆ ಹಿಂಸೆ ಕೊಡುತ್ತಿದ್ದನು. ಪರಿಣಾಮ ನಾನು ನನ್ನ ಗಂಡನ ಮನೆ ಬಿಟ್ಟು ತವರುಮನೆಗೆ ಹೋಗಿ ವಾಸಿಸಲು ಪ್ರಾರಂಭಿಸಿದೆ. ನನ್ನ ಮಕ್ಕಳನ್ನು ನೋಡಲು ಪತಿ ಮನೆಗೆ ಹೋಗಿದ್ದೆ. ಆಗ ಮಕ್ಕಳು ಕಾಣಿಸಲಿಲ್ಲ. ಅದಕ್ಕೆ ನಾನು, ಮಕ್ಕಳು ಎಲ್ಲಿ ಎಂದು ಕೇಳಿದೆ ಎಂದು ವಿವರಿಸಿದ್ದಾಳೆ. ಇದನ್ನೂ ಓದಿ: ಹಿಜಬ್ ಬೆಂಬಲಿಸಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಪ್ರತಿಭಟನೆ!
ನನ್ನ ಪತಿ, ನೀನು ರೂಮ್‍ನಲ್ಲಿರು ಮಕ್ಕಳನ್ನು ನಾನು ಕರೆತರುತ್ತೇನೆ ಎಂದು ಹೇಳಿದರು. ಅದಕ್ಕೆ ನಾನು ರೂಮ್ ನಲ್ಲಿ ಕುಳಿತುಕೊಂಡಿದ್ದೆ. ರೂಮ್ ಒಳಗೆ ಬಂದ ಪತಿ ನನ್ನ ಮೇಲೆ ಹಲ್ಲೆ ನಡೆಸಿದ್ದು, ಚಾಕುವನ್ನ ಹೊರತೆಗೆದು ನನ್ನ ಸೊಂಟ, ಬೆನ್ನು ಮತ್ತು ಭುಜಕ್ಕೆ ಇರಿದಿದ್ದಾನೆ. ಅವನು ಚುಚ್ಚಿದ ರಭಸಕ್ಕೆ ಚಾಕುವಿನ ಹಿಡಿಕೆಯೇ ಮುರಿದು ನನ್ನ ಭುಜದಲ್ಲಿ ಸಿಕ್ಕಿಕೊಂಡಿದೆ. ಆದರೂ ಬಿಡದ ಅವನು ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ದೂರಿನಲ್ಲಿ ವಿವರವಾಗಿ ತಿಳಿಸಿದ್ದಾಳೆ.