ನವದೆಹಲಿ: ನ್ಯಾಯ (Justice) ಸಿಗುವುದರಲ್ಲಿ ವಿಳಂಬವಾಗುತ್ತಿರೋದೇ ದೇಶದ ಜನರು ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ವಿಷಾದ ವ್ಯಕ್ತಪಡಿಸಿದ್ದಾರೆ.
ಗುಜರಾತ್‌ನ ಎಕ್ತಾ ನಗರದಲ್ಲಿ ನಡೆಯುತ್ತಿರುವ ಅಖಿಲ ಭಾರತ ಕಾನೂನು ಸಚಿವರು (Law Minister) ಹಾಗೂ ಕಾನೂನು ಕಾರ್ಯದರ್ಶಿಗಳ ಎರಡು ದಿನಗಳ ಸಮ್ಮೇಳನವನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕಾನೂನುಗಳನ್ನು ಸ್ಪಷ್ಟ ರೀತಿಯಲ್ಲಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ (Regional Language) ಬರೆಯಬೇಕು. ಇದರಿಂದ ಬಡವರು, ಅನಕ್ಷರಸ್ಥರು ಕಾನೂನನ್ನು ಅರ್ಥಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಫೇಲ್ ಆಗಿರೋ ರಾಹುಲ್ ಗಾಂಧಿ ಮಿಸೈಲ್‌ನ್ನು ಭಾರತ್ ಜೋಡೋ ಮೂಲಕ ರೀ ಲಾಂಚ್ ಮಾಡ್ತಿದ್ದಾರೆ – ಬೊಮ್ಮಾಯಿ
Advertisement
Advertisement
ಕಾನೂನುಗಳು ಸರಳ ಮತ್ತು ಪ್ರಾದೇಶಿಕ ಭಾಷೆಯಲ್ಲಿರಬೇಕು. ಕಾನೂನು ಮತ್ತು ಸುವ್ಯವಸ್ಥೆಯು ಸಮಾಜದ ಪ್ರಗತಿಯೊಂದಿಗೆ ಅಭಿವೃದ್ಧಿಗೊಂಡಾಗ, ನ್ಯಾಯ ಸುಲಭವಾಗಿ ಲಭ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
Advertisement
ನಮ್ಮ ದೇಶವು ಅಭಿವೃದ್ಧಿಯ ಪಥದಲ್ಲಿ ಸಾಗುವಾಗ ಆಂತರಿಕ ಸುಧಾರಣೆಗಳನ್ನು ಕೂಡ ಜೊತೆಗೆ ಕೊಂಡೊಯ್ದಿದೆ. ನಮ್ಮ ಸಮಾಜವು ಬಳಕೆಯಲ್ಲಿಲ್ಲದ ಕಾನೂನುಗಳು, ಕೆಟ್ಟ ಪದ್ಧತಿಗಳು ಮತ್ತು ಸಂಪ್ರದಾಯಗಳನ್ನು ಸ್ವಯಂಪ್ರೇರಣೆಯಿಂದ ತೊಡೆದುಹಾಕಿದೆ. ಕಳೆದ 8 ವರ್ಷಗಳಲ್ಲಿ ಜೀವನ ಮಟ್ಟ ಸುಧಾರಿಸಲು ನಾವು 32,000 ಅನುಸರಣೆಗಳನ್ನು ತೆಗೆದುಹಾಕಿದ್ದೇವೆ. ಆದರೆ ನ್ಯಾಯ ವಿತರಣೆ ಮಾಡುವುದರಲ್ಲಿ ವಿಳಂಬವಾಗುತ್ತಿರುವುದೇ ಸಮಸ್ಯೆಯಾಗಿದೆ. ಅದಕ್ಕಾಗಿ ಕಾನೂನನ್ನು ಶೀಘ್ರದಲ್ಲೇ ಪರಿಹರಿಸುವ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಕಾಶ್ಮೀರಿ ಪಂಡಿತರ ಮೇಲೆ ಮುಂದುವರಿದ ದಾಳಿ- ಉಗ್ರರ ಗುಂಡಿಗೆ ಓರ್ವ ಬಲಿ
Advertisement
ತಂತ್ರಜ್ಞಾನವು ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದೆ. ವರ್ಚುವಲ್ ಹಿಯರಿಂಗ್ ಮತ್ತು ಇ-ಫೈಲಿಂಗ್‌ನಂತಹ ಕಾನೂನು ಸೇವೆಗಳಲ್ಲಿ ಡಿಜಿಟಲ್ ಆವಿಷ್ಕಾರಗಳನ್ನು ಈಗಾಗಲೇ ಭಾರತದಲ್ಲಿ ಪ್ರಾರಂಭಿಸಲಾಗಿದೆ. 5G ಸೇವೆಗಳು (5G Technology) ಈ ತಂತ್ರಜ್ಞಾನಗಳನ್ನು ಇನ್ನಷ್ಟು ಬಲಪಡಿಸುತ್ತದೆ.