ಬೆಂಗಳೂರು: ಶಿಕ್ಷಣ ಇಲಾಖೆ ಯಾವುದೇ ಶಾಲೆಯಲ್ಲಿ ಗಣೇಶಮೂರ್ತಿಯನ್ನ ಕೂರಿಸಿ ಅಂತ ಅನುಮತಿಯೂ ಕೊಟ್ಟಿಲ್ಲ, ಕೂರಿಸಬೇಡಿ ಅಂತಾನೂ ಹೇಳಿಲ್ಲ. ಆದ್ರೆ ನಮಾಜ್‌ಗೆ ಅವಕಾಶ ಕೊಡೋಕೆ ಸಾಧ್ಯವೇ ಇಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
Advertisement
ಶಾಲೆಯಲ್ಲಿ ಗಣೇಶೋತ್ಸವ ಆಚರಿಸುವ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಶಿಕ್ಷಣ ಇಲಾಖೆ ಯಾವುದೇ ಶಾಲೆಯಲ್ಲಿ ಗಣೇಶ ಕೂರಿಸಿ ಅಂತ ಅನುಮತಿಯೂ ಕೊಟ್ಟಿಲ್ಲ, ಕೂರಿಸಬೇಡಿ ಅಂತಾನೂ ಹೇಳಿಲ್ಲ. ಯಾವುದೇ ಮಾರ್ಗಸೂಚಿ, ಅನುಮತಿಯನ್ನು ಕೊಟ್ಟಿಲ್ಲ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ಗಣೇಶೋತ್ಸವ ಆಚರಿಸಿದ್ರೆ ಶಾಲೆಯಲ್ಲಿ ನಮಾಜ್‌ಗೆ ಅವಕಾಶ ನೀಡಿ
Advertisement
Advertisement
ಹಿಂದೆ ಯಾವ ನಿಯಮಗಳು ಇದ್ದವೋ ಅದೇ ನಿಯಮ ಈಗಲೂ ಇವೆ. ಗಣೇಶ ಹಬ್ಬ ಬಿಜೆಪಿ ಸರ್ಕಾರ ಬಂದಾಗಿನಿಂದ ಮಾಡಿದ್ದು ಅಲ್ಲ. ಬ್ರಿಟಿಷರ ಕಾಲದಿಂದಲೂ ಗಣೇಶೋತ್ಸವ ಮಾಡಿಕೊಂಡು ಬರಲಾಗ್ತಿದೆ. ಹಿಂದೆ ಯಾವ ರೀತಿ ನಡೆಯುತ್ತಿತ್ತೋ ಅದೇ ರೀತಿ ನಡೆದುಕೊಂಡು ಬರಲಿದೆ. ಶಿಕ್ಷಣ ಇಲಾಖೆಯಿಂದ ಅನುಮತಿ ಕೊಟ್ಟಿದ್ದಾರೆ ಅನ್ನೋದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ.
Advertisement
ಈಗ ಇರೋ ನಿಯಮಗಳೇ ಮುಂದೆಯೂ ಇರಲಿದೆ. ನಮಾಜ್‌ಗೆ ಅವಕಾಶ ಕೊಡೋಕೆ ಸಾಧ್ಯವೇ ಇಲ್ಲ. ಶಾಲೆಗಳಲ್ಲಿ ಹೊಸ ಹೊಸ ಸಂಪ್ರದಾಯ ಹುಟ್ಟುಹಾಕೋಕೆ ಅವಕಾಶ ಇಲ್ಲ ಎಂದು ಸಚಿವರು ಹೇಳಿದ್ದಾರೆ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ದ್ವೇಷದ ಕಸಕ್ಕೆ ಹೋಲಿಸಿದ ನಿರ್ದೇಶಕ ಡಿಲನ್ ಮೋಹನ್ ಗ್ರೇ
ಮುಸ್ಲಿಂ ಮುಖಂಡ ಉಮರ್ ಷರೀಫ್ ಸಹ ಈ ಬಗ್ಗೆ ಮಾತನಾಡಿದ್ದು, ಗಣಪ ಓಕೆ ಹಿಜಬ್‌ಗೂ ಹೀಗೆ ಅವಕಾಶ ಕೊಡಿ. ಒಂದು ಧರ್ಮಕ್ಕೆ ನ್ಯಾಯ ಇನ್ನೊಂದು ಧರ್ಮಕ್ಕೆ ಅನ್ಯಾಯ ಯಾಕೆ ಅಂತಾ ಪ್ರಶ್ನಿಸಿದ್ದಾರೆ.