ಬೆಂಗಳೂರು: ಶಾಸಕ ಪ್ರದೀಪ್ ಈಶ್ವರ್ (Pradeep Eshwar) ವಿರುದ್ಧ ಮಾಜಿ ಸಚಿವ ಸುಧಾಕರ್ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದಾರೆ.
ಸಾರ್ವಜನಿಕವಾಗಿ ಮಾನಹಾನಿ ಮಾಡುವ ರೀತಿಯಲ್ಲಿ ಮಾತನಾಡೋದು, ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಮಾಧ್ಯಮಗಳ ಸಂದರ್ಶನದಲ್ಲಿ ಮಾನಹಾನಿ ರೀತಿ ಮಾತನಾಡುತ್ತಿದ್ದಾರೆ. ಈ ಮೂಲಕ ಘನತೆಗೆ ತೇಜೋವಧೆ ಮಾಡುತ್ತಾ ಇದ್ದಾರೆ. ಹೀಗಾಗಿ ಪ್ರದೀಪ್ ಈಶ್ವರ್ ವಿರುದ್ಧ ಕ್ರಮಕ್ಕೆ ಕೈಗೊಳ್ಳಿ ಎಂದಿದ್ದಾರೆ. ಅಲ್ಲದೆ ತನ್ನ ವಿರುದ್ಧ ಮಾತನಾಡದಂತೆ ನಿರ್ಬಂಧ ಹೇರಲು ಸುಧಾಕರ್ (K Sudhakar) ಮನವಿ ಮಾಡಿದ್ದಾರೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೆ. ಸುಧಾಕರ್ ಅವರನ್ನು ಮಣಿಸಿ ಪ್ರದೀಪ್ ಈಶ್ವರ್ ಶಾಸಕರಾಗಿದ್ದಾರೆ. ತಮ್ಮ ತೆಲುಗು ಡೈಲಾಗ್‍ಗಳಿಂದಲೇ ಚುನಾವಣಾ ಪ್ರಚಾರದ ವೇಳೆ ಪ್ರದೀಪ್ ಈಶ್ವರ್ ಗಮನ ಸೆಳೆದಿದ್ದರು. ಸದ್ಯ ಅವರ ಡೈಲಾಗ್ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇದನ್ನೂ ಓದಿ: 6 ಲಕ್ಷ BPL ಕಾರ್ಡ್‌ಗಳಿಗೆ ಆಧಾರ್, ಬ್ಯಾಂಕ್ ಖಾತೆ ಸಮಸ್ಯೆ – ನಾಳೆಯಿಂದಲೇ ಅಕ್ಕಿ ಹಣ ಹಾಕೋಕೆ ಸಾಧ್ಯವಿಲ್ಲ: ಜ್ಞಾನೇಂದ್ರ
Web Stories