ಚಿಕ್ಕಮಗಳೂರು: ಸೀಳು ನಾಯಿ ಹಾಗೂ ಬೀದಿನಾಯಿಗಳ ಹಾವಳಿಗೆ ಬೆದರಿದ ಜಿಂಕೆಯೊಂದು ಮನೆಯೊಳಗೆ ಬಂದು ಅವಿತು ಕುಳಿತುಕೊಂಡ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಣಿವೆ ಗ್ರಾಮದಲ್ಲಿ ನಡೆದಿದೆ.
Advertisement
ಕಣಿವೆ ಗ್ರಾಮ ಕಾಡಂಚಿನ ಗ್ರಾಮ. ಮೇವು ತಿನ್ನುತ್ತಾ ಕಾಡಂಚಿಗೆ ಬಂದ ಜಿಂಕೆ ನಾಡಿಗೂ ಕಾಲಿಟ್ಟಿತ್ತು. ಜಿಂಕೆಯನ್ನು ಕಂಡ ಬೀದಿ ನಾಯಿಗಳು ಹಾಗೂ ಸೀಳು ನಾಯಿಗಳು ಜಿಂಕೆಯನ್ನು ಬೇಟೆಯಾಡಲು ಮುಂದಾದವು. ಆಗ ಅವುಗಳಿಂದ ತಪ್ಪಿಸಿಕೊಂಡ ಜಿಂಕೆ ಕಣಿವೆ ಗ್ರಾಮದ ಪದ್ಮನಾಭ ಎಂಬುವರ ಮನೆಯೊಳಗೆ ಓಡಿ ಬಂದು ಅವಿತು ಕೂತಿದೆ. ಎಷ್ಟರ ಮಟ್ಟಿಗೆ ಅಂದ್ರೆ ಮನೆಯವರಂತೆ ನಡುಮನೆಯಲ್ಲಿ ರಾಜಾರೋಷವಾಗಿ ನನ್ನದೇ ಮನೆ ಎಂಬಂತೆ ಆರಾಮಾಗಿ ಕೂತಿದೆ. ಇದನ್ನೂ ಓದಿ: ಮುಂದಿನ 30-40 ವರ್ಷಗಳೂ ಬಿಜೆಪಿ ಯುಗವೇ; ಭಾರತವಾಗಲಿದೆ ವಿಶ್ವಗುರು – ಅಮಿತ್ ಶಾ
Advertisement
Advertisement
ಜಿಂಕೆಯನ್ನು ಕಂಡ ಮನೆಯವರು ಕೂಡ ಅದನ್ನು ಓಡಿಸದೆ ಸುಸ್ತಾಗಿದ್ದ ಜಿಂಕೆಗೆ ನೀರು ಕುಡಿಸಿ ಸಂತೈಸಿದ್ದಾರೆ. ಬಳಿಕ ಮನೆಯವರು ಹಾಗೂ ಮಕ್ಕಳು ಜಿಂಕೆಯೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಬಳಿಕ ಮನೆಯವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದಾಗ ಜಿಂಕೆಯ ಕಾಲಿಗೆ ಗಾಯವಾಗಿದ್ದು ಕಂಡು ಬಂದಿದ್ದು, ಜಿಂಕೆ ನಡೆಯಲಾರದ ಸ್ಥಿತಿಯಲ್ಲಿತ್ತು. ಬಳಿಕ ಅಧಿಕಾರಿಗಳು ಜಿಂಕೆಯನ್ನು ಜೀಪ್‍ನಲ್ಲಿ ತೆಗೆದುಕೊಂಡು ಹೋಗಿ ಹಾರೈಕೆ ಮಾಡಿದ್ದಾರೆ. ಇದನ್ನೂ ಓದಿ: ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ – ಸಿದ್ದರಾಮೋತ್ಸವದ ವಿರುದ್ಧ ಸಿಡಿಮಿಡಿಗೊಂಡ ಡಿಕೆಶಿ