ಹಾವೇರಿ: ಆಹಾರ ಅರಸಿ ಬಂದ ಕೃಷ್ಣಮೃಗವೊಂದು ರೈತರ ಜಮೀನಿನಲ್ಲಿ ನಾಯಿಗಳ ದಾಳಿಗೊಳಗಾಗಿ ದಯಾನೀಯ ಸಾವು ಕಂಡಿದೆ.
ಚಿಕ್ಕಲಿಂಗದಹಳ್ಳಿ ಗ್ರಾಮದ ಹುಸೇನಸಾಬ್ ನದಾಫ್ ಎಂಬುವರ ಜಮೀನಿನಲ್ಲಿ ಕೃಷ್ಣಮೃಗ ಹೋಗುತಿತ್ತು. ಆ ವೇಳೆ ನಾಲ್ಕು ನಾಯಿಗಳು ದಾಳಿ ನಡೆಸಿ ಸಿಕ್ಕ-ಸಿಕ್ಕಲ್ಲಿ ಕಚ್ಚಿ ಸಂಪೂರ್ಣವಾಗಿ ಗಾಯಗೊಳಿಸಿದ್ದವು.
ಇದನ್ನು ಕಂಡ ಅಲ್ಲಿಯೇ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ರೇವಣ್ಣಪ್ಪ ನಾಯಿಗಳನ್ನ ಓಡಿಸಿ ನಿತ್ರಾಣಗೊಂಡಿದ್ದ ಕೃಷ್ಣಮೃಗದ ಜೀವ ಉಳಿಸಲು ಹರಸಾಹಸಪಟ್ಟರು. ಅದಕ್ಕೆ ನೀರು ಕುಡಿಸಿ ವೈದ್ಯರನ್ನ ಕರೆ ತರುವ ಪ್ರಯತ್ನನೂ ಮಾಡಿದ್ರು. ಅದ್ರೂ ಬಂಗಾರದ ಜಿಂಕೆ ಮಾತ್ರ ಬದುಕಲಿಲ್ಲ.