ತುಮಕೂರು: ಆಹಾರ ಅರಸಿ ನಾಡಿಗೆ ಬಂದಿದ್ದ ಜಿಂಕೆಯನ್ನು ನೋಡಲು ನೂರಾರು ಮಂದಿ ಮುಗಿಬಿದ್ದರಿಂದ ಗಾಬರಿಯಾದ ಜಿಂಕೆಯು ಪೊದೆಯಲ್ಲಿ ಅವಿತುಕೊಂಡಿರುವ ಘಟನೆ ನಗರದ ಸಪ್ತಗಿರಿ ಬಡಾವಣೆಯಲ್ಲಿ ನಡೆದಿದೆ.
ಗುರುವಾರ ಬೆಳಗ್ಗೆ ಕಾಡಿನಿಂದ ನಾಡಿಗೆ ಬಂದಿದ್ದ ಜಿಂಕೆಯೊಂದು, ಸಪ್ತಗಿರಿ ಬಡಾವಣೆಯಲ್ಲಿ ಓಡಾಡುತ್ತಿತ್ತು. ಜಿಂಕೆಯಿಂದ ಆತಂಕಗೊಂಡಿದ್ದ ಬಡಾವಣೆ ನಿವಾಸಿಗಳು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅಲ್ಲದೇ ಬಡಾವಣೆಯಲ್ಲಿ ನಿರುಪದ್ರವಿ ಜಿಂಕೆ ಬಂದಿರುವುದನ್ನು ತಿಳಿದ ನೂರಾರು ಮಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಜನರನ್ನು ಕಂಡು ಗಾಬರಿಗೊಂಡ ಜಿಂಕೆಯು ಹತ್ತಿರದ ಪೊದೆಯೊಂದರಲ್ಲಿ ಅವಿತುಗೊಂಡಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿಯು ಜಿಂಕೆಯನ್ನು ಹಿಡಿಯುವುದಕ್ಕಿಂತ ನೆರೆದಿದ್ದ ಜನರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು, ಆದರೂ ಕೊನೆಗೆ ಪೊದೆಯಲ್ಲಿ ಅಡಗಿದ್ದ ಜಿಂಕೆಯನ್ನು ಬಲೆಹಾಕಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಲೆಗೆ ಬಿದ್ದ ಜಿಂಕೆಯನ್ನು ನಾಮದ ಚಿಲುಮೆ ಅರಣ್ಯ ಪ್ರದೇಶಕ್ಕೆ ಬಿಡುವುದಾಗಿ ಅರಣ್ಯ ಇಲಾಖೆ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv